ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

White Houser: ಯೆಮೆನ್‌ ವಿರುದ್ಧ ಯುದ್ಧದ ಸುಳಿವು ನೀಡಿ ಯಡವಟ್ಟು ಮಾಡಿಕೊಂಡ ಶ್ವೇತಭವನದ ಅಧಿಕಾರಿಗಳು..!

White House: ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇತರ ಉನ್ನತ ಅಮೇರಿಕನ್ ಅಧಿಕಾರಿಗಳು ಯೆಮೆನ್‌ನ ಹೌಥಿ ಬಂಡುಕೋರರ ವಿರುದ್ಧ ಮಾಡಲಾಗುವ ದಾಳಿಗಳ ಕುರಿತು ಚರ್ಚಿಸಲು ಸೃಷ್ಟಿಸಿದ ಗ್ರೂಪ್‌ ಚಾಟ್‌ನಲ್ಲಿ ಅಮೆರಿಕಾದ ಪತ್ರಕರ್ತರೊಬ್ಬರನ್ನೂ ಸೇರಿಸಲಾಗಿತ್ತು ಎಂದು ಶ್ವೇತಭವನ ಸೋಮವಾರ ದೃಢಪಡಿಸಿದೆ.

ಯುದ್ಧ ಸುಳಿವು ನೀಡಿ ಯಡವಟ್ಟು ಮಾಡಿಕೊಂಡ  ಶ್ವೇತಭವನದ ಅಧಿಕಾರಿಗಳು..!

Profile Sushmitha Jain Mar 25, 2025 5:03 PM

ವಾಷಿಂಗ್ಟನ್: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಶಾಂತಿ ಎಬ್ಬಿಸಿರುವ ಬಂಡುಕೋರರ ವಿರುದ್ಧ ಅಮೆರಿಕ ಯುದ್ಧ ಸಾರಿದೆ. ಪ್ರಮುಖವಾಗಿ, ಯೆಮೆನ್‌ನಿಂದ ಕಾರ್ಯನಿರ್ವಹಿಸುತ್ತಿರುವ ಹೌಥಿ ಬಂಡುಕೋರರು ಹಡಗುಗಳ ಮೇಲೆ ದಾಳಿ ನಡೆಸಲು ಆರಂಭಿಸಿದ್ದು, ವಿಶ್ವದ ದೊಡ್ಡಣ್ಣನ ಕಣ್ಣನ್ನು ಕೆಂಪಾಗಿಸಿದೆ. ಆದರೆ, ಇಂತಹ ದೊಡ್ಡ ಮಟ್ಟದ ದಾಳಿ ನಡೆಸುವ ಮುನ್ನ ಅಮೆರಿಕ ತನ್ನ ಅಜಾಗರುಕತೆಯಿಂದ ಯಾರೂ ಊಹಿಸಲೂ ಆಗದ ಎಡವಟ್ಟು ಮಾಡಿಕೊಂಡಿದೆ. ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (US Defense Secretary Pete Hegseth), ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇತರ ಉನ್ನತ ಅಧಿಕಾರಿಗಳು ಯೆಮೆನ್‌ನ ಹೌಥಿ ಬಂಡುಕೋರರ ವಿರುದ್ಧ ಮಾಡಲಾಗುವ ದಾಳಿಗಳ ಕುರಿತು ಚರ್ಚಿಸಲು ಸೃಷ್ಟಿಸಿದ ಗ್ರೂಪ್‌ ಚಾಟ್‌ನಲ್ಲಿ ಅಮೆರಿಕಾದ ಪತ್ರಕರ್ತರೊಬ್ಬರನ್ನೂ ಸೇರಿಸಲಾಗಿತ್ತು ಎಂದು ಶ್ವೇತಭವನ(White House) ಸೋಮವಾರ ದೃಢಪಡಿಸಿದೆ.

ಮಾರ್ಚ್ 15 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ದಾಳಿಗಳನ್ನು ಘೋಷಿಸಿದ್ದರು. ಆದರೆ, ಗ್ರೂಪ್‌ ಚಾಟ್‌ನಲ್ಲಿದ್ದ ದಿ ಅಟ್ಲಾಂಟಿಕ್ ನಿಯತಕಾಲಿಕೆಯ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್ ಅವರು ಹಲವು ಗಂಟೆಗಳ ಮುಂಚಿತವಾಗಿಯೇ ಈ ಸೂಚನೆ ಪಡೆದಿದ್ದರು. ಇದೊಂದು ಆಘಾತಕಾರಿ ಭದ್ರತಾ ಉಲ್ಲಂಘನೆಯಾಗಿದೆ ಎಂದು ವೈಟ್‌ ಹೌಸ್‌ ಹೇಳಿದೆ. "ವರದಿ ಮಾಡಲಾದ ಮೆಸೇಜ್‌ಗಳು ಅಧಿಕೃತವೆಂಬಂತೆ ತೋರುತ್ತದೆ. ಈ ಗ್ರೂಪ್‌ ಚಾಟ್‌ಗೆ ಅವರ ಸಂಖ್ಯೆಯನ್ನು ಆಕಸ್ಮಿಕವಾಗಿ ಹೇಗೆ ಸೇರಿಸಲಾಗಿದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ" ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಬ್ರಾಯನ್ ಹ್ಯೂಸ್ ಹೇಳಿದರು.

ಇದರ ಕುರಿತು ತಮಗೇನೂ ತಿಳಿದಿಲ್ಲ ಎಂದು ಟ್ರಂಪ್‌ ಈ ಹಿಂದೆ ಹೇಳಿದ್ದರಾದರೂ, ಅವರ ತಮ್ಮ “ರಾಷ್ಟ್ರೀಯ ಭದ್ರತಾ ತಂಡದ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ" ಎಂದು ಶ್ವೇತಭವನ ಹೇಳಿದೆ. ಗೋಲ್ಡ್‌ಬರ್ಗ್ ದಾಳಿ ಕುರಿತ ವಿವರಗಳನ್ನು ಮುಂಚಿತವಾಗಿಯೇ ಪ್ರಕಟಿಸಿದ್ದರೆ, ಈ ವಿಚಾರವು ಗಂಭೀರ ಸ್ವರೂಪ ತಾಳುತ್ತಿತ್ತು. ಆದರೆ ವಾಸ್ತವದಲ್ಲಿ ಅವರು ಹಾಗೆ ಮಾಡಲಿಲ್ಲ.

ಗೋಲ್ಡ್‌ಬರ್ಗ್ ಅವರನ್ನು ದಾಳಿಗೂ ಎರಡು ದಿನಗಳ ಮುನ್ನ ಗ್ರೂಪ್ ಚಾಟ್‌ಗೆ ಸೇರಿಸಲಾಗಿತ್ತು. ಮಾರ್ಚ್ 14 ರಂದು, ವ್ಯಾನ್ಸ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬರು ದಾಳಿಗಳನ್ನು ನಡೆಸುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.

Viral Video: ಮಾಜಿ ಕಾರ್ಪೊರೇಟರ್- ಮಹಿಳೆ ನಡುವೆ ಮಾರಾಮಾರಿ; ಅಷ್ಟಕ್ಕೂ ನಡೆದಿದ್ದೇನು? ವಿಡಿಯೊ ನೋಡಿ

ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಮತ್ತು ಹೆಗ್ಸೆತ್ ನೆಡಸಲಾದ ಚಾಟ್ ಇದಾಗಿದ್ದು, ಇವರಿಬ್ಬರು ಯುದ್ದ ಕುರಿತಾದ ಪ್ರಮುಖ ವಿಷಯಗಳನ್ನು ಇಲ್ಲಿ ಚರ್ಚೆಸಿದ್ದಾರೆ. ಅಲ್ಲದೇ ಯುಸ್ ಗೆ ಮಾತ್ರ ಯುದ್ದವನ್ನು ಎದುರಿಸುವ ಸಾಮರ್ಥ್ಯವಿದೆ ಎಂಬ ಸ್ಟೇಂಟ್ಮೆಂಟ್ ಗಳನ್ನು ಒಳಗೊಂಡ ಸಂದೇಶಗಳನ್ನು ರವಾನಿಸಿದ್ದು, ಇದಕ್ಕೆ ಪುಷ್ಟಿ ನೀಡುವಂತಹ ಬರಹವನ್ನೊಳಗೊಂಡ ಲೆಟರ್ ಕೂಡ ವೈರಲ್ ಆದ ಚಾಟ್ ನಲ್ಲಿದೆ ಇದೆ ಎನ್ನಲಾಗಿದೆ. ಟ್ರಂಪ್ ಸಲಹೆಗಾರರಾಗಿರುವ ಸ್ಟೀಫನ್ ಮಿಲ್ಲರ್ ಅವರು ಕೂಡ ಈ ಯಡವಟ್ಟಿನಲ್ಲಿ ಪಾಲನ್ನು ಹೊಂದಿದ್ದು, ಅವರು ಒಂದು ವೇಳೆ ನಾವು ನಮ್ಮಲ್ಲಿನ ಶಕ್ತಿ-ಯುಕ್ತಿಯೊಂದಿಗೆ ಆರ್ಥಿಕ ಬಲವನ್ನು ಉಪಯೋಗಿಸಿ ಯುದ್ದ ಗೆದ್ದರೆ, ಇದು ನಮ್ಮ ಪಾಲಿಗೆ ಮಹತ್ತರವಾದ ವಿಜಯವಾಗಲಿದ್ದು, ಭವಿಷ್ಟತ್ ಅಲ್ಲಿ ಇಂದು ನಾವು ವ್ಯಯಿಸಿದ ಹಣಕಾಸಿಗಿಂತ ನಾವು ಎರಡುಪಟ್ಟು ಜಾಸ್ತಿ ಗಳಿಸಲಿದ್ದೇವೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಒಟ್ಟಾರೆ ಶ್ವೇತ ಭವನದ ಅಧಿಕಾರಿಗಳ ಬೇಜಾವಬ್ದಾರಿತನದಿಂದ ಆಗಿರುವ ಈ ತಪ್ಪನ್ನು ಗುರಿಯಾಗಿಸಿಕೊಂಡು ಡೆಮೋಕ್ರಾಟ್‌ಗಳು ತೀವ್ರವಾಗಿ ಟೀಕಾ ಪ್ರಹಾರ ನಡೆಸಿದ್ದು, ದೇಶದ ಭದ್ರತಾ ಉಲ್ಲಂಘನೆಯನ್ನು ಮಾಡಲಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಹಿಂದೆಂದೂ ಮಿಲಿಟರಿ ಗುಪ್ತಚರ ಭದ್ರತೆಗೆ ಸಂಬಂಧಪಟ್ಟಂತೆ ಇಂತಹ ಪ್ರಮಾದ ಆಗಿಲ್ಲ, ಇದೊಂದು ಅತ್ಯಂತ ಗಂಭೀರವಾದ ಲೋಪ ಎಂದು ಸೆನೆಟ್‌ ನಾಯಕ ಚಕ್‌ ಶುಮರ್‌ ಹೇಳಿದ್ದಾರೆ. ಇದೇ ವೇಳೆ ಮತ್ತೊಬ್ಬ ಸೆನೆಟ್‌ ಸದಸ್ಯರಾಗಿರುವ ಜ್ಯಾಕ್ ರೀಡ್ ಕೂಡ ಅಧಿಕಾರಿಗಳ ಈ ನಡೆಯನ್ನು ಖಂಡಿಸಿದ್ದು, "ಅಧ್ಯಕ್ಷ ಟ್ರಂಪ್ ಅವರ ಸಂಪುಟವು ತೋರಿಸಿದ ಅಜಾಗರೂಕತೆ ಮುಜುಗುರ ಮೂಡಿಸುವಂತಾಗಿದ್ದು, ಇದು ಮುಂದಿನ ದಿನಗಳಲ್ಲಿ ಅಪಾಯಕಾರಿ ಪರಿಸ್ಥಿತಿ ಕಾರಣವಾಗಲಿದೆ" ಎಂದು ಹೇಳಿದರು.