Viral Video: ವಾಯುಪಡೆಯ ವಿಮಾನಗಳ ನಡುವೆ ಡಿಕ್ಕಿ; ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಈಶಾನ್ಯ ಫ್ರಾನ್ಸ್‌ನ ಸೇಂಟ್-ಡಿಜಿಯರ್ನ ಪಶ್ಚಿಮದ ವಾಯುನೆಲೆಯ ಬಳಿ ಮಾರ್ಚ್ 25ರಂದು ಫ್ರೆಂಚ್ ವಾಯುಪಡೆಯ ಅಕ್ರೋಬಾಟಿಕ್ಸ್ ತಂಡದ ಎರಡು ಜೆಟ್ ವಿಮಾನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿವೆ. ಇದರ ಪರಿಣಾಮ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.


ಪ್ಯಾರೀಸ್: ಫ್ರೆಂಚ್ ವಾಯುಪಡೆಯ ಅಕ್ರೋಬಾಟಿಕ್ಸ್ ತಂಡದ ಎರಡು ವಿಮಾನಗಳು ಮಂಗಳವಾರ (ಮಾರ್ಚ್ 25) ಈಶಾನ್ಯ ಫ್ರಾನ್ಸ್‌ನ ವಾಯುನೆಲೆಯ ಬಳಿ ಡಿಕ್ಕಿ ಹೊಡೆದಿವೆ. ಇದರ ಪರಿಣಾಮ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಶಾನ್ಯ ಫ್ರಾನ್ಸ್‌ನ ಸೇಂಟ್-ಡಿಜಿಯರ್ನ ಪಶ್ಚಿಮದ ವಾಯುನೆಲೆಯ ಬಳಿ ಆಲ್ಫಾ ಜೆಟ್ ವಿಮಾನಗಳು ಡಿಕ್ಕಿ ಹೊಡೆದಿವೆ ಎಂದು ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ ತಿಳಿಸಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆಯಲ್ಲಿ ಇಬ್ಬರು ಪೈಲಟ್‍ಗಳು ಮತ್ತು ಒಬ್ಬ ಪ್ರಯಾಣಿಕ ವಿಮಾನದಿಂದ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ಅನೇಕ ಗಾಯಗಳಾಗಿವೆ. ಆದರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಈ ವಿಮಾನಗಳು ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆಯ ನಿಖರ ಏರೋಬ್ಯಾಟಿಕ್ಸ್ ಪ್ರದರ್ಶನ ಘಟಕವಾದ ಪ್ಯಾಟ್ರೊಯಿಲ್ ಡಿ ಫ್ರಾನ್ಸ್‌ನಿಂದ ಬಂದಿದ್ದವು. ನಾಲ್ಕು ವಿಮಾನಗಳು ತಮ್ಮ ಪಥದಲ್ಲಿ ಮುಂದುವರಿದರೆ, ಎಡಭಾಗದಲ್ಲಿರುವ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಕೆಳಗೆ ಬಿದ್ದಿವೆ. ವಿಮಾನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಮತ್ತು ಹೊಗೆ ಹೊರಬರುವುದು ವಿಡಿಯೊದಲ್ಲೆ ಸೆರೆಯಾಗಿದೆ.
Watch MOMENT French jets collide during training session
— RT (@RT_com) March 25, 2025
Pilots and passenger ‘found unconscious’ pic.twitter.com/SR49r6ymUX
ವರದಿ ಪ್ರಕಾರ, ಈ ಘಟನೆಯ ಸಮಯದಲ್ಲಿ ಇಬ್ಬರು ಪೈಲಟ್‍ಗಳು ಮತ್ತು ಒಬ್ಬ ಪ್ರಯಾಣಿಕ ವಿಮಾನದಿಂದ ಕೆಳಗೆ ಬಿದ್ದಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಈಗ ಸೂಕ್ತ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ. ಡಿಕ್ಕಿ ಹೊಡೆದ ನಂತರ ಒಂದು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎರಡನೇ ವಿಮಾನವು ಕಾಲುವೆಯಲ್ಲಿ ಬಿದ್ದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಫ್ರೆಂಚ್ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕಾರ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ವಿಡಿಯೊವನ್ನು ಪೊಸ್ಟ್ ಮಾಡಿದ್ದಾರೆ. ರಷ್ಯಾ ದೇಶದ ಮೇಲೆ ಆಕ್ರಮಣ ಮಾಡಿದ ನಂತರ ಉಕ್ರೇನ್ ಪೈಲಟ್‍ಗಳಿಗೆ ತರಬೇತಿ ನೀಡಲು ಫ್ರಾನ್ಸ್ ಲಘು ಆಲ್ಫಾ ಅವಳಿ ಎಂಜಿನ್ ವಿಮಾನವನ್ನು ಬಳಸುತ್ತಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಅಪ್ಪ-ಮಗಳ ಸೂಪರ್ ಡ್ಯಾನ್ಸ್ ; ವಿಡಿಯೊ ವೈರಲ್
ಕಳೆದ ವರ್ಷ ಆಗಸ್ಟ್‌ನಲ್ಲಿ ಪೂರ್ವ ಫ್ರಾನ್ಸ್‌ನಲ್ಲಿ ಎರಡು ಫ್ರೆಂಚ್ ರಫೇಲ್ ಜೆಟ್‍ಗಳು ಮಧ್ಯದಲ್ಲಿ ಡಿಕ್ಕಿ ಹೊಡೆದು ಇಬ್ಬರು ಪೈಲಟ್‍ಗಳ ಸಾವಿಗೆ ಕಾರಣವಾಗಿತ್ತು. ಫ್ರಾನ್ಸ್ ಭಾರತ, ಈಜಿಪ್ಟ್, ಗ್ರೀಸ್, ಇಂಡೋನೇಷ್ಯಾ, ಕ್ರೊಯೇಷಿಯಾ, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ರಫೇಲ್ ಯುದ್ಧ ವಿಮಾನಗಳನ್ನು ಮಾರಾಟ ಮಾಡಿದೆ.