ʻನಾವು ತಪ್ಪು ಮಾಡಿದ್ದೇವೆ, ನಮ್ಮನ್ನು ಕ್ಷಮಿಸಿʼ: ಮಿಂಚಿದ ವೈಶಾಖ್, ಆರ್‌ಸಿಬಿಯನ್ನು ಟ್ರೋಲ್ ಮಾಡಿದ ಫ್ಯಾನ್ಸ್!
RCB Trolled by Fans after Vyshak Shines for PBKS: ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಪಂಜಾಬ್ ಕಿಂಗ್ಸ್ ವೇಗದ ಬೌಲರ್ ವೈಶಾಖ್ ವಿಜಯ್‌ಕುಮಾರ್ ಮಿಂಚಿದರು. ತಮ್ಮ ಆರಂಭಿಕ ಎರಡು ಓವರ್‌ಗಳಲ್ಲಿ ಅವರು ತಲಾ 5 ರನ್‌ಗಳನ್ನು ನೀಡಿ ಗುಜರಾತ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ್ದರು. ಇದಾದ ಬಳಿಕ ಮೆಗಾ ಹರಾಜಿನಲ್ಲಿ ವೈಶಾಖ್ ವಿಜಯ್‌ಕುಮಾರ್ ಅವರನ್ನು ಕೈ ಬಿಟ್ಟಿದ್ದ ಆರ್‌ಸಿಬಿಯನ್ನು ಫ್ಯಾನ್ಸ್ ಟ್ರೋಲ್ ಮಾಡಿದ್ದಾರೆ.

ಆರ್‌ಸಿಬಿಯನ್ನು ಟ್ರೋಲ್ ಮಾಡಿದ ಫ್ಯಾನ್ಸ್.

ಅಹಮದಾಬಾದ್: ಗುಜರಾತ್ ಟೈಟನ್ಸ್ ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2025) ಟೂರ್ನಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ವೈಶಾಖ್ ವಿಜಯ್‌ಕುಮಾರ್ ಪಂಜಾಬ್ ಕಿಂಗ್ಸ್ ಪರ ಮಿಂಚಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಕನ್ನಡಿಗ ವೈಶಾಖ್ ಅವರನ್ನು ಆರ್‌ಸಿಬಿ ರಿಲೀಸ್ ಮಾಡಬಾರದಾಗಿತ್ತು ಎಂದು ಫ್ಯಾನ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬೌಲ್ ಮಾಡಿದ್ದ ವೈಶಾಖ್, ಗುಜರಾತ್ ಟೈಟನ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಡಿವಾಣ ಹಾಕಿದ್ದರು. ಆ ಮೂಲಕ ಪಂಜಾಬ್ ತಂಡದ 11 ರನ್‌ಗಳ ಗೆಲುವಿಗೆ ನೆರವು ನೀಡಿದ್ದರು.
244 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ 14 ಓವರ್‌ಗಳ ಅಂತ್ಯಕ್ಕೆ ಕೇವಲ ಎರಡು ವಿಕೆಟ್ ನಷ್ಟಕ್ಕೆ 169 ರನ್‌ಗಳನ್ನು ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಈ ವೇಳೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರು ಇಂಪ್ಯಾಕ್ಸ್ ಪ್ಲೇಯರ್ ಆಗಿ ವೈಶಾಖ್ ವಿಜಯ್‌ಕುಮಾರ್ ಅವರನ್ನು ಕರೆ ತಂದಿದ್ದರು. ಅದರಂತೆ ಕನ್ನಡಿಗ ನಾಯಕನ ಯೋಜನೆಯನ್ನು ಅತ್ಯುತ್ತಮವಾಗಿ ಕಾರ್ಯಗತಗೊಳಿಸಿದರು. 15ನೇ ಓವರ್‌ನಲ್ಲಿ ಬೌಲ್ ಮಾಡಿದ ವೈಶಾಕ್ ವಿಜಯ್‌ಕುಮಾರ್ ವೈಡ್ ಯಾರ್ಕರ್ ಹಾಕುವ ಮೂಲಕ ಜೋಸ್ ಬಟ್ಲರ್ ಹಾಗೂ ಶೆರ್ಫೆನ್ ಋದರ್‌ಫೋರ್ಡ್ ಅವರನ್ನು ನಿಯಂತ್ರಿಸಿದ್ದರು. ಆ ಮೂಲಕ ಕೇವಲ 5 ರನ್ ನೀಡಿದ್ದರು.
GT vs PBKS: ಹೈಸ್ಕೋರಿಂಗ್ ಕದನದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಕಟ್ಟಿ ಹಾಕಿದ ಪಂಜಾಬ್ ಕಿಂಗ್ಸ್!
ನಂತರ 17ನೇ ಓವರ್‌ನಲ್ಲಿಯೂ ಬೌಲ್ ಮಾಡಿದ್ದ ವೈಶಾಕ್, ಶೆರ್ಫೆನ್ ಋದರ್‌ಫೋರ್ಡ್ ಅವರಿಗೆ ವೈಡ್ ಯಾರ್ಕರ್‌ಗಳನ್ನು ಹಾಕಿ ಕಟ್ಟಿ ಹಾಕಿದ್ದರು ಹಾಗೂ ಈ ಓವರ್‌ನಲ್ಲಿಯೂ ಅವರು ಕೇವಲ 5 ರನ್‌ಗಳನ್ನ ನೀಡಿದ್ದರು. ಆ ಮೂಲಕ ಕೊನೆಯ ಎರಡು ಓವರ್‌ಗಳಲ್ಲಿ ಗುಜರಾತ್ ಟೈಟನ್ಸ್‌ಗೆ 44 ರನ್ ಅಗತ್ಯವಾಗುವಂತೆ ಮಾಡಿದ್ದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡ ಕೇವಲ 11 ರನ್‌ಗಳಿಂದ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಪಂಜಾಬ್ ಕಿಂಗ್ಸ್ ಗೆಲುವು ಪಡೆದ ಬೆನ್ನಲ್ಲೆ ವೈಶಾಖ್ ವಿಜಯ್‌ಕುಮಾರ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೆಯಿತು. ಬೆಂಗಳೂರು ಫ್ರಾಂಚೈಸಿ ವೈಶಾಖ್ ವಿಜಯ್‌ಕುಮಾರ್ ಅವರನ್ನು ರಿಲೀಸ್ ಮಾಡಬಾರದಾಗಿತ್ತು ಎಂದು ಫ್ಯಾನ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
After watching Vyshak’s bowling, RCB management: ‘We made a mistake, please forgive us' 😅#PBKSvGT #IPL2025 #PBKSvsGT#GTvsPBKS #RCB pic.twitter.com/fkJWYGjh7S
— Shilpa Sahu (@shilpasahu432) March 25, 2025
"ಆರ್‌ಸಿಬಿ ತಂಡ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ಹೊಂದಿತ್ತು. ಆದರೆ, ಬೆಂಗಳೂರು ಫ್ರಾಂಚೈಸಿ ಅಂಥಾ ಪ್ರತಿಭಾವಂತ ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಆರ್‌ಸಿಬಿ ವಿಫಲವಾಗಿದೆ. ಇದೀಗ ಈ ಪಟ್ಟಿಗೆ ವೈಶಾಖ್ ವಿಜಯ್‌ಕುಮಾರ್ ಸೇರ್ಪಡೆಯಾಗಿದ್ದಾರೆ," ಎಂದು ಅಭಿಮಾನಿಯೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Vyshak Vijaykumar pic.twitter.com/Y6doYPffRJ
— Out Of Context Cricket (@GemsOfCricket) March 25, 2025
"ವೈಶಾಖ್ ವಿಜಯ್‌ಕುಮಾರ್ ಅವರ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೋಡಿದ ಬಳಿಕ ಆರ್‌ಸಿಬಿ ಮ್ಯಾನೇಜ್‌ಮೆಂಟ್, ʻನಾವು ತಪ್ಪು ಮಾಡಿದ್ದೇವೆ, ನಮ್ಮನ್ನು ಕ್ಷಮಿಸಿ," ಎಂದು ಅಂದುಕೊಂಡಿರಬೇಕು," ಎಂದು ಮತ್ತೊರ್ವ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
What a spectacular over from Vijaykumar Vyshak that too at a crunch moment!
— Sameer Allana (@HitmanCricket) March 25, 2025
RCB should've retained this gem bowler.
"ಒತ್ತಡದ ಸನ್ನಿವೇಶದಲ್ಲಿ ವೈಶಾಖ್ ವಿಜಯ್‌ಕುಮಾರ್ ಅವರು ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಆರ್‌ಸಿಬಿ ತಂಡ, ವೈಶಾಖ್ ವಿಜಯ್‌ಕುಮಾರ್ ಅವರನ್ನು ಉಳಿಸಿಕೊಳ್ಳಬೇಕಾಗಿತ್ತು," ಎಂದು ಇನ್ನೊಬ್ಬ ಅಭಿಮಾನಿ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
IPL 2025 Points Table: ಐಪಿಎಲ್ ಅಂಕಪಟ್ಟಿಯಲ್ಲಿ ಆರ್‌ಸಿಬಿಗೆ ಎಷ್ಟನೇ ಸ್ಥಾನ?
ಪಂಜಾಬ್ ಕಿಂಗ್ಸ್‌ಗೆ 11 ರನ್ ಜಯ
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ, ಶ್ರೇಯಸ್ ಅಯ್ಯರ್ (97*) ಅವರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 243 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಗುಜರಾತ್ ಟೈಟನ್ಸ್ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ ಕಠಿಣ ಹೋರಾಟ ನಡೆಸಿ ಗೆಲುವಿನ ಸನಿಹಕ್ಕೆ ಬಂದಿದ್ದರೂ ಡೆತ್ ಓವರ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 232 ರನ್‌ಗಳಿಗೆ ಸೀಮಿತವಾಗಿತ್ತು. ಆ ಮೂಲಕ ಕೇವಲ 11 ರನ್‌ಗಳಿಂದ ಸೋಲು ಅನುಭವಿಸಿತು.