ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Rashid Khan: ಬುಮ್ರಾ ದಾಖಲೆ ಮುರಿದ ರಶೀದ್‌ ಖಾನ್

IPL 2025: ಜಸ್‌ಪ್ರೀತ್‌ ಬುಮ್ರಾ 124 ಪಂದ್ಯಗಳಲ್ಲಿ 150 ವಿಕೆಟ್‌ ಕಿತ್ತರೆ, ರಶೀದ್‌ ಖಾನ್‌ 122 ಪಂದ್ಯಗಳಿಂದ ಈ ಗುರಿ ತಲುಪಿ ಬುಮ್ರಾರನ್ನು ಹಿಂದಿಕ್ಕಿದರು. ದಾಖಲೆ ಯುಜ್ವೇಂದ್ರ ಚಹಾಲ್ (118 ಪಂದ್ಯಗಳು) ಹೆಸರಿನಲ್ಲಿದೆ. ಲಸಿತ್ ಮಾಲಿಂಗ (105 ಪಂದ್ಯಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ದಾಖಲೆ ಮುರಿದ ರಶೀದ್‌ ಖಾನ್

Profile Abhilash BC Mar 26, 2025 2:59 PM

ಅಹಮದಾಬಾದ್‌: ಅಫ್ಘಾನಿಸ್ತಾನದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್(Rashid Khan), ಅವರು ಭಾರತದ ಪ್ರಮುಖ ವೇಗಿ, ಮುಂಬೈ ಇಂಡಿಯನ್ಸ್‌ ತಂಡದ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರ ದಾಖಲೆಯನ್ನು ಮುರಿದು ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಲ್ಲಿ 150 ವಿಕೆಟ್‌ಗಳನ್ನು ವೇಗವಾಗಿ ತಲುಪಿದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಗಳವಾರ ನಡೆದಿದ್ದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ರಶೀದ್‌ ಖಾನ್‌ ಈ ಮೈಲುಗಲ್ಲು ನೆಟ್ಟರು.

ಪಂದ್ಯದ ಏಳನೇ ಓವರ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡುವ ಮೂಲಕ ರಶೀದ್ ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಜಸ್‌ಪ್ರೀತ್‌ ಬುಮ್ರಾ 124 ಪಂದ್ಯಗಳಲ್ಲಿ 150 ವಿಕೆಟ್‌ ಕಿತ್ತರೆ, ರಶೀದ್‌ ಖಾನ್‌ 122 ಪಂದ್ಯಗಳಿಂದ ಈ ಗುರಿ ತಲುಪಿ ಬುಮ್ರಾರನ್ನು ಹಿಂದಿಕ್ಕಿದರು. ದಾಖಲೆ ಯುಜ್ವೇಂದ್ರ ಚಹಾಲ್ (118 ಪಂದ್ಯಗಳು) ಹೆಸರಿನಲ್ಲಿದೆ. ಲಸಿತ್ ಮಾಲಿಂಗ (105 ಪಂದ್ಯಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ರಶೀದ್‌ ಖಾನ್‌ ಅವರು ಹರ್ಭಜನ್‌ಸಿಂಗ್‌(150) ಜತೆ ಜಂಟಿ 11ನೇ ಸ್ಥಾನ ಪಡೆದಿದ್ದಾರೆ. ರಶೀದ್ ಇನ್ನೊಂದು ವಿಕೆಟ್‌ ಕಿತ್ತರೆ 10ನೇ ಸ್ಥಾನಕ್ಕೇರಲಿದ್ದಾರೆ. ಪಂಜಾಬ್‌ ವಿರುದ್ಧ ರಶೀದ್‌ ಒಂದು ವಿಕೆಟ್‌ ಕಿತ್ತರೂ ಕೂಡ ತಮ್ಮ ನಾಲ್ಕು ಓವರ್‌ಗಳಲ್ಲಿ 48 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು. ಅದರಲ್ಲೂ ಅವರು ತಮ್ಮ ಕೊನೆಯ ಎರಡು ಓವರ್‌ಗಳಲ್ಲಿ 34 ರನ್‌ಗಳನ್ನು ನೀಡಿದರು.

ಇದನ್ನೂ ಓದಿ IPL 2025: ಮಹಿಳಾ ಭದ್ರತಾ ಅಧಿಕಾರಿಯ ತೊಡೆಗೆ ಬಡಿದ ಸಿಕ್ಸರ್‌ ಚೆಂಡು; ವಿಡಿಯೊ ವೈರಲ್‌

ಪಂದ್ಯ ಸೋತ ಗುಜರಾತ್‌

ಈ ಪಂದ್ಯದಲ್ಲಿ ಗುಜರಾತ್‌ ತಂಡ 11 ರನ್‌ ಅಂತರದ ಸೋಲು ಕಂಡಿತ್ತು. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 5 ವಿಕೆಟ್‌ ನಷ್ಟಕ್ಕೆ 243 ರನ್‌ ಕಲೆ ಹಾಕಿತ್ತು. ಗುರಿ ಹಿಂಬಾಲಿಸಿದ ಗುಜರಾತ್‌ ಡೆತ್‌ ಓವರ್‌ಗಳಲ್ಲಿನ ವೈಫಲ್ಯದಿಂದ 5 ವಿಕೆಟ್‌ ನಷ್ಟಕ್ಕೆ 231 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.