Viral Video: ಕ್ಲಬ್ನಲ್ಲಿ ಭುಗಿಲೆದ್ದ ಜಗಳ; ವ್ಯಕ್ತಿಯ ತಲೆಯ ಮೇಲೆ ಗ್ಲಾಸ್ ಒಡೆದು ಕ್ರೌರ್ಯ ಮೆರೆದ ಕಿಡಿಗೇಡಿಗಳು!
ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದ ಕ್ಲಬ್‍ವೊಂದರಲ್ಲಿ ಭಾನುವಾರ (ಮಾರ್ಚ್ 23)ಮ್ಯೂಸಿಕ್ ಪ್ಲೇ ಮಾಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯ ವೇಳೆ ವ್ಯಕ್ತಿಯೊರ್ವನ ತಲೆಯ ಮೇಲೆ ಗಾಜನ್ನು ಒಡೆದಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video)ಆಗಿದೆ.


ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದ ಕ್ಲಬ್‍ವೊಂದರಲ್ಲಿ ಭಾನುವಾರ (ಮಾರ್ಚ್ 23)ಮ್ಯೂಸಿಕ್ ಪ್ಲೇ ಮಾಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯ ವೇಳೆ ವ್ಯಕ್ತಿಯೊರ್ವನ ತಲೆಯ ಮೇಲೆ ಗ್ಲಾಸ್ ಅನ್ನು ಒಡೆದಿದ್ದಾರೆ. ಈ ಜಗಳವನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬ ಅದನ್ನು ವಿಡಿಯೊ ಮಾಡಿ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ವಿಡಿಯೊಗಳನ್ನು ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral Video) ಆಗಿದೆ. ವಿಡಿಯೊದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‍ನಲ್ಲಿ ಬಿಯರ್ ಬಾಟಲಿಗಳನ್ನು ಒಡೆಯವುದು ಸೆರೆಯಾಗಿದೆ.
ಮಾಹಿತಿ ಪ್ರಕಾರ, ಡಿಜೆ ಆಯ್ಕೆ ಮಾಡಿದ ಮ್ಯೂಸಿಕ್ ಬಗ್ಗೆ ಕ್ಲಬ್‍ನಲ್ಲಿದ್ದ ಒಂದು ಗುಂಪು ಆಕ್ಷೇಪ ವ್ಯಕ್ತಪಡಿಸಿದಾಗ ಈ ಜಗಳ ಶುರುವಾಗಿದೆಯಂತೆ.ಮಹಿಳೆಯರು ಸೇರಿ ಒಟ್ಟು ನಾಲ್ಕರಿಂದ ಐದು ಪುರುಷರಿರುವ ಗುಂಪು ಡಿಜೆ ಮ್ಯೂಸಿಕ್‍ನಿಂದ ಅಸಮಾಧಾನಗೊಂಡು ಉತ್ತಮ ಸಾಂಗ್‍ಗಳನ್ನು ನುಡಿಸುವಂತೆ ಡಿಜೆ ಬಳಿ ವಿನಂತಿಸಿದ್ದಾರೆ. ಆದರೆ ಅಲ್ಲಿದ್ದ ಯುವತಿಯೊಬ್ಬಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ ಹಾಗೇ ಇದು ಎರಡು ಗುಂಪುಗಳ ನಡುವೆ ದೊಡ್ಡ ಜಗಳಕ್ಕೆ ಕಾರಣವಾಯ್ತು.
ಗುಂಪುಗಳ ನಡುವಿನ ಮಾರಾಮಾರಿ ವಿಡಿಯೊ ಇಲ್ಲಿದೆ ನೋಡಿ...
Tell me you’re in Delhi without telling me you’re in delhi pic.twitter.com/QgVJWU82eL
— dhruv (@shawnthessheep) March 25, 2025
ಈ ಘಟನೆಯ ವೇಳೆ ಕ್ಲಬ್‍ನ ಅತಿಥಿಯೊಬ್ಬರು ಡಿಜೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಜಗಳ ಮತ್ತಷ್ಟು ಹೆಚ್ಚಾಗಿ ಬಿಯರ್ ಬಾಟಲಿಗಳು, ಗ್ಲಾಸ್‍ಗಳು, ಪ್ಲೇಟ್‍ಗಳು ಇತ್ಯಾದಿಗಳನ್ನು ಎಸೆಯಲು ಶುರುಮಾಡಿದ್ದಾರೆ.ಹಾಗೇ ಒಬ್ಬ ವ್ಯಕ್ತಿಯ ತಲೆಯ ಮೇಲೆ ಗಾಜನ್ನು ಒಡೆದಿದ್ದಾರೆ. ಬಿಯರ್ ಬಾಟಲಿಗಳು ಮತ್ತು ಗ್ಲಾಸ್‍ಗಳನ್ನು ಅವರು ಎಸೆಯುತ್ತಿದ್ದಂತೆ ಕ್ಲಬ್‍ನ ಕೆಲವು ಸರ್ವರ್‌ಗಳು ಅವುಗಳನ್ನು ಹಿಡಿಯಲು ಓಡಾಡಿದ್ದಾರೆ. ಇತರರು ಮತ್ತಷ್ಟು ಹಾನಿಯನ್ನು ತಡೆಗಟ್ಟಲು ಟೇಬಲ್ ಮೇಲಿದ್ದ ಪಾತ್ರೆಗಳು ಮತ್ತು ಕಟ್ಲರಿಗಳನ್ನು ತೆಗೆದಿದ್ದಾರೆ. ಕೊನೆಗೆ ಜಗಳದಲ್ಲಿ ಭಾಗಿಯಾಗಿದ್ದ ಒಂದು ಗುಂಪು ಕ್ಲಬ್‍ನಿಂದ ಹೊರಗೆ ಹೋಗಿದೆ. ನಂತರ ಅಲ್ಲಿಗೆ ಪೊಲೀಸರನ್ನು ಕರೆಸಲಾಯಿತಂತೆ.
ಈ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ವ್ಯಕ್ತಿಗಳು ಮತ್ತು ಕ್ಲಬ್‍ನ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಗೆ ಗೌರವವಿಲ್ಲ. ದುಃಖದ ಸಂಗತಿಯೆಂದರೆ, ಜನರು ವಿದ್ಯಾವಂತರಾಗಿದ್ದರೂ ಕೆಲವು ವಿಷಯಗಳು ಬದಲಾಗುವುದಿಲ್ಲ” ಎಂದು ಒಬ್ಬರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನೆಚ್ಚಿನ ಶಿಕ್ಷಕನಿಗೆ ವಿದಾಯ ಹೇಳಲು ಈ ವಿದ್ಯಾರ್ಥಿಗಳು ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್
ರಾಷ್ಟ್ರ ರಾಜಧಾನಿಯ ಕ್ಲಬ್‍ನಲ್ಲಿ ನಡೆದ ಹಿಂಸಾಚಾರದ ಮೊದಲ ಪ್ರಕರಣ ಇದಲ್ಲ. ಇದಕ್ಕೂ ಮೊದಲು 2024 ರಲ್ಲಿ, ಸೀಟಿನ ವ್ಯವಸ್ಥೆಗಳ ಬಗ್ಗೆ ವ್ಯವಸ್ಥಾಪಕರೊಂದಿಗೆ ವಾಗ್ವಾದ ನಡೆಸಿದ ನಂತರ ಯುವಕರ ಗುಂಪು ಪಬ್‍ನಲ್ಲಿ ಗುಂಡು ಹಾರಿಸಿತು. ಸತ್ಯ ನಿಕೇತನ ಪ್ರದೇಶದಲ್ಲಿ ಪಾರ್ಟಿ ಆಚರಿಸಲು ಬಂದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವಾದರೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದರು.