ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Elon Musk : ಕೈಕೋಳ, ಕಾಲಿಗೆ ಸರಪಳಿ... ಅಕ್ರಮ ವಲಸಿಗರ ಮತ್ತೊಂದು ಶಾಕಿಂಗ್‌ ವಿಡಿಯೊ ವೈರಲ್‌! ಬೆನ್ನಲೇ ಮಸ್ಕ್‌ ವಿವಾದಾತ್ಮಕ ಪೋಸ್ಟ್‌

ಅಮೆರಿಕದಿಂದ ಭಾರತೀಯರು ಸೇರಿದಂತೆ ಅಕ್ರಮ ವಲಸಿಗರನ್ನು ಅವರ ತಾಯ್ನಾಡಿಗೆ ಗಡೀಪಾರು ಮಾಡಲಾಗುತ್ತಿದೆ. ಗಡಿಪಾರಾದವರನ್ನು ಕರೆತರುವಾಗ ಅವರ ಜೊತೆ ನಡೆದಕೊಂಡ ರೀತಿಯ ಬಗ್ಗೆ ಎಲ್ಲಡೆ ಆಕ್ರೋಶ ಕೇಳಿ ಬರುತ್ತಿರುವಾಗಲೇ ಎಲಾನ್‌ ಮಸ್ಕ್‌ ಮಾಡಿರುವ ಒಂದು ಪೋಸ್ಟ್‌ ಮತ್ತಷ್ಟು ಕಿಚ್ಚನ್ನು ಹೊತ್ತಿಸಿದೆ.

ಅಕ್ರಮ ವಲಸಿಗರ ಮತ್ತೊಂದು ಶಾಕಿಂಗ್‌ ವಿಡಿಯೊ ವೈರಲ್‌

ಸಾಂದರ್ಭಿಕ ಚಿತ್ರ

Profile Vishakha Bhat Feb 19, 2025 4:17 PM

ವಾಷಿಂಗ್ಟನ್‌: ಅಮೆರಿಕದಲ್ಲಿ ಟ್ರಂಪ್‌ (Donald Trump) ಆಡಳಿತ ಶುರುವಾಗುತ್ತಿದ್ದಂತೆ ವಲಸಿಗರನ್ನು ಹೊರ ಹಾಕಲಾಗುತ್ತಿದೆ. ಭಾರತೀಯರು ಸೇರಿದಂತೆ ಅಕ್ರಮ ವಲಸಿಗರನ್ನು ಅವರ ತಾಯ್ನಾಡಿಗೆ ಗಡಿಪಾರು ಮಾಡಲಾಗುತ್ತಿದೆ. ಗಡಿಪಾರು ಆದವರಲ್ಲಿ ಗ್ವಾಟೆಮಾಲಾ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ಸೇರಿದಂತೆ ಹಲವು ದೇಶಗಳ ಜನರು ಸೇರಿದ್ದಾರೆ. ಈಗಾಗಲೇ ಭಾರತಕ್ಕೆ ಮೂರು ಹಂತದಲ್ಲಿ ವಲಸಿಗರು ಬಂದಿಳಿದಿದ್ದಾರೆ. ಗಡಿಪಾರಾದವರನ್ನು ಕರೆತರುವಾಗ ಅವರ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಎಲ್ಲೆಡೆ ಆಕ್ರೋಶ ಕೇಳಿ ಬರುತ್ತಿರುವಾಗಲೇ ಎಲಾನ್‌ ಮಸ್ಕ್‌ (Elon Musk) ಮಾಡಿರುವ ಒಂದು ಪೋಸ್ಟ್‌ ಮತ್ತಷ್ಟು ಕಿಚ್ಚನ್ನು ಹೊತ್ತಿಸಿದೆ.

ಗಡಿಪಾರು ಮಾಡಿದವರ ಮೇಲೆ ಹಾಕಲಾದ ಸಂಕೋಲೆಗಳು ಮತ್ತು ಕೈಕೋಳಗಳಿಂದಾಗಿ ಮಾನವೀಯ ಹಕ್ಕುಗಳ ಬಗ್ಗೆ ಕಳವಳಗಳು ಉದ್ಭವಿಸಿವೆ. ಶ್ವೇತ ಭವನವು ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ವಲಸಿಗರ ಕೈಗೆ ಕೋಳ ಹಾಕಿ ಕರೆದುಕೊಂಡು ಹೋಗಲಾಗುತ್ತಿದೆ. ಅದರಲ್ಲಿ ಅಕ್ರಮ ವಲಸಿಗರ ಗಡಿಪಾರು ಎಂದು ಬರೆಯಲಾಗಿದೆ. ಆ ವಿಡಿಯೋಗೆ ಉದ್ಯಮಿ ಎಲಾನ್‌ ಮಸ್ಕ್‌ ರೀ ಪೋಸ್ಟ್‌ ಮಾಡಿ ವಾವ್‌ ಎಂದು ಬರೆದುಕೊಂಡಿದ್ದಾರೆ. ಸದ್ಯ ಮಸ್ಕ್‌ ಈ ನಡೆಗೆ ಎಲ್ಲಡೆ ವಿರೋಧ ವ್ಯಕ್ತವಾಗಿದೆ.



ಸಾಮಾಜಿಕ ಜಾಲತಾಣದಲ್ಲಿ ಮಸ್ಕ್‌ ಅವರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು ಇದು ಅಸಹ್ಯಕರವಾಗಿದೆ. ನೀವು ಇದನ್ನು ತಮಾಷೆ ಎಂದು ಭಾವಿಸುತ್ತೀರಾ? ಎಂದು ಕೇಳಿದ್ದಾರೆ. ಇದು ಶೋಚನೀಯ ಸಂಕೋಲೆಯಲ್ಲಿ ಬಂಧಿಸಲ್ಪಟ್ಟ ದಾಖಲೆರಹಿತ ವಲಸಿಗರ ವೀಡಿಯೊವನ್ನು ನೋಡಿ ನಗಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ. ಮತ್ತೊಬ್ಬರು ಸ್ಥಾನಮಾನ ಏನೇ ಇರಲಿ, ಮಾನವನ ಘನತೆಯನ್ನು ಗೌರವಿಸಬೇಕು. ಗಡಿಪಾರು ಮಾಡುವುದು ಗಂಭೀರ ವಿಷಯ, ಇದು ಮನರಂಜನೆಯಲ್ಲ, ಎಲ್ಲಾ ವ್ಯಕ್ತಿಗಳನ್ನು ಮಾನವೀಯ ನೆಲೆಯಲ್ಲಿ ನೋಡಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ :Elon Musk: ನನ್ನ ಮಗುವಿಗೆ ಎಲಾನ್‌ ಮಸ್ಕ್‌ ತಂದೆ ಎಂದ ಮಹಿಳೆ! 13 ಮಕ್ಕಳ ಅಪ್ಪನಾದರೆ ಮಸ್ಕ್‌?

ಅಮೆರಿಕದಿಂದ ಗಡಿಪಾರಾಗಿ ಬಂದವರು ಟ್ರಂಪ್‌ ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿದ್ದರು. ತಮಗೆ ಸರಿಯಾದ ಆಹಾರ ನೀಡಲಿಲ್ಲ, ಕೈಗೆ ಕೋಳ ಹಾಕಿದ್ದರು. ವಲಸಿಗರ ಶಿಬಿರದಲ್ಲಿ ಚಿತ್ರ ಹಿಂಸೆ ನೀಡುತ್ತಾರೆ ಎಂದು ಆರೋಪಿಸಿದ್ದರು. ಅದಕ್ಕೆ ಉತ್ತರಿಸಿದ್ದ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅಮೆರಿಕದ ಗಡಿಪಾರಾದವರಿಗೆ ಕೈಗೆ ಕೋಳ ಹಾಕಲಾಗುತ್ತದೆ. ಅದು ಅಲ್ಲಿನ ಕಾನೂನಾಗಿದೆ ಎಂದು ಹೇಳಿದ್ದರು.