Donald Trump: ಸಹಿ ಹಾಕ್ಲಿಲ್ಲ ಅಂದ್ರೆ 'ಬಾಂಬ್ ಹಾಕುತ್ತೇವೆ ; ಇರಾನ್‌ಗೆ ಟ್ರಂಪ್ ಬೆದರಿಕೆ
ಪರಮಾಣು ಬಾಂಬ್ ತಯಾರಿಕಾ ಯೋಜನೆಯಲ್ಲಿ ನಿರತವಾಗಿರುವ ಇರಾನ್ ಸರ್ಕಾರ ತನ್ನ 'ಒಪ್ಪಂದ'ಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮತ್ತು ಹೆಚ್ಚು ಸುಂಕಗಳನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ದೂರದರ್ಶನ ಸಂದರ್ಶನದಲ್ಲಿ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.


ವಾಷಿಂಗ್ಟನ್: ಪರಮಾಣು ಬಾಂಬ್ ತಯಾರಿಕಾ ಯೋಜನೆಯಲ್ಲಿ ನಿರತವಾಗಿರುವ ಇರಾನ್ ಸರ್ಕಾರ ತನ್ನ 'ಒಪ್ಪಂದ'ಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮತ್ತು ಹೆಚ್ಚು ಸುಂಕಗಳನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾನುವಾರ ಬೆದರಿಕೆ ಹಾಕಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ದೂರದರ್ಶನ ಸಂದರ್ಶನದಲ್ಲಿ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಒಪ್ಪಂದಕ್ಕೆ ಬಾರದಿದ್ದರೆ ಬಾಂಬ್ ದಾಳಿ ಮತ್ತು ದುಪ್ಪಟ್ಟು ಸುಂಕ ವಿಧಿಸುವುದಾಗಿ ಅವರು ಹೇಳಿದರು. ಅಮೆರಿಕ ಮತ್ತು ಇರಾನಿನ ಅಧಿಕಾರಿಗಳು ಮಾತನಾಡುತ್ತಿದ್ದಾರೆ. ಇರಾನ್ ತನ್ನ ಪರಮಾಣು ಯೋಜನೆಗಳನ್ನು ಮುಂದುವರೆಸಬಾರದು. ಕೂಡಲೇ ಅವುಗಳನ್ನು ನಿಲ್ಲಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ವಾರ ವಾಷಿಂಗ್ಟನ್ ಜೊತೆಗಿನ ನೇರ ಮಾತುಕತೆಗಳನ್ನು ಇರಾನ್ ತಿರಸ್ಕರಿಸಿದ ನಂತರ ಟ್ರಂಪ್ ಅವರಿಂದ ಈ ಹೇಳಿಕೆಗಳು ಬಂದಿವೆ. ಇದೇ ವೇಳೆ ಇರಾನ್ ತನ್ನ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ, ಬಾಂಬ್ ದಾಳಿ ನಡೆಯಲಿದೆ ಎಂದ ಟ್ರಂಪ್, "ಇರಾನ್ ಒಪ್ಪಂದ ಮಾಡಿಕೊಳ್ಳದಿದ್ದರೆ, ನಾನು ನಾಲ್ಕು ವರ್ಷಗಳ ಹಿಂದೆ ಮಾಡಿದಂತೆ ಅವರ ಅವರ ವಿರುದ್ಧ ದ್ವಿತೀಯ ಸುಂಕ ವಿಧಿಸುವ ಅವಕಾಶವಿದೆ ಎಂದು ಹೇಳಿದರು. 2017-21ರ ತಮ್ಮ ಮೊದಲ ಅವಧಿಯಲ್ಲಿ, ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ, ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಅಮೆರಿಕ ಹೇರಿದ್ದ ನಿರ್ಬಂಧಗಳ ಪರಿಹಾರಕ್ಕಾಗಿ ಇರಾನ್ ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಲಾಗಿತ್ತು.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭಾನುವಾರ ಈ ನೀತಿಯನ್ನು ಪುನರುಚ್ಚರಿಸಿದರು. "(ಯುಎಸ್ ಜೊತೆಗಿನ) ನೇರ ಮಾತುಕತೆಗಳನ್ನು ತಿರಸ್ಕರಿಸಲಾಗಿದೆ, ಆದರೆ ಇರಾನ್ ಯಾವಾಗಲೂ ಪರೋಕ್ಷ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದೆ, ಮತ್ತು ಈಗ ಕೂಡ, ಸುಪ್ರೀಂ ಲೀಡರ್ ಪರೋಕ್ಷ ಮಾತುಕತೆಗಳು ಇನ್ನೂ ಮುಂದುವರಿಯಬಹುದು ಎಂದು ಒತ್ತಿ ಹೇಳಿದ್ದಾರೆ. ಇರಾನ್ ಮೇಲೆ ಕ್ರಮ ಕೈಗೊಳ್ಳತ್ತಲೇ ಇತ್ತ ಇಸ್ಲಾಮಿಕ್ ಗಣರಾಜ್ಯ ದೇಶ ಇರಾನ್ ಕೂರ ತನ್ನ ಪರಮಾಣು ಯೋಜನೆಗಳಿಗೆ ವೇಗ ನೀಡಿತು. ಯುರೇನಿಯಂ ಪುಷ್ಟೀಕರಣದ ತನ್ನ ಉಲ್ಬಣಗೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ಒಪ್ಪಿಕೊಂಡ ಮಿತಿಗಳನ್ನು ಮೀರಿತು. ಒಪ್ಪಂದ ಮಾಡಿಕೊಳ್ಳಿ ಅಥವಾ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಅವರ ಎಚ್ಚರಿಕೆಯನ್ನೂ ಇರಾನ್ ಇಲ್ಲಿಯವರೆಗೆ ತಿರಸ್ಕರಿಸಿದೆ.
ಈ ಸುದ್ದಿಯನ್ನೂ ಓದಿ: Donald Trump: ಅಮೆರಿಕ ಈಸ್ ಬ್ಯಾಕ್... ಸಂಸತ್‌ನಲ್ಲಿ ಅಬ್ಬರಿಸಿದ ಡೊನಾಲ್ಡ್ ಟ್ರಂಪ್
ಹೊಸ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳುವಂತೆ ಟೆಹ್ರಾನ್‌ಗೆ ಒತ್ತಾಯಿಸುವ ಟ್ರಂಪ್ ಅವರ ಪತ್ರಕ್ಕೆ ಇರಾನ್ ಒಮಾನ್ ಮೂಲಕ ಪ್ರತಿಕ್ರಿಯೆಯನ್ನು ಕಳುಹಿಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ತಿಳಿಸಿದ್ದಾರೆ.