ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Benefits Of Face Steaming: ವಾರಕೊಮ್ಮೆ ಫೇಷಿಯಲ್​​ ಸ್ಟೀಮಿಂಗ್ ಮಾಡುವುದರಿಂದ ಸಿಗುವ ಪ್ರಯೋಜನಗಳೇನು?

ವಾರಕೊಮ್ಮೆಯಾದರೂ ಫೇಷಿಯಲ್ ಸ್ಟಿಮಿಂಗ್ ಮಾಡುವುದರಿಂದ ಚರ್ಮವನ್ನು ಸ್ವಚ್ಛವಾಗಿದಬಹುದು. ಅಲ್ಲದೆ ರಂಧ್ರಗಳನ್ನು ಸ್ವಚ್ಛಗೊಳಿಸಬಹುದಾಗಿದೆ. ವೈಟ್ ಹೆಡ್, ಬ್ಲ್ಯಾಕ್ ಹೆಡ್ಸ್ ತೆಗೆದು ಹಾಕುವ ಜತೆಗೆ ಹಲವು ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಮುಖ ಹೊಳೆಯುವಂತೆ ಮಾಡಬೇಕೇ? ವಾರಕೊಮ್ಮೆಯಾದರೂ ಸ್ಟೀಮಿಂಗ್ ಮಾಡಿ!

Benefits Of Face Steaming

Profile Pushpa Kumari Feb 19, 2025 7:00 AM

ನವದೆಹಲಿ: ಪ್ರತಿನಿತ್ಯ ನಾವು ಹೇಗೆ ಕಾಳಜಿ ಮಾಡುತ್ತೆವೆಯೋ ಅಷ್ಟು ಉತ್ತಮವಾಗಿ ಆರೋಗ್ಯಯುತ ಚರ್ಮವನ್ನು ಪಡೆಯಬಹುದು. ಅದರಲ್ಲೂ ನಾವು ಮುಖದ ಕಾಂತಿ ಹೆಚ್ಚಿಸಿ ಕೊಳ್ಳಲು ಏನಾದರೂ ಬ್ಯುಟಿ ಪಾರ್ಡಕ್ಟ್ ಗನ್ನು ಬಳಸಿ ಸರ್ಕಸ್ ಮಾಡುತ್ತಲೇ ಇರುತ್ತೇವೆ. ಫೇಸ್ ವಾಶ್‌ನಿಂದ ಹಿಡಿದು ಸೀರಮ್‌ವರೆಗೆ ಚರ್ಮದ ಹೊಳಪನ್ನು ಹೆಚ್ಚಿಸಲು ನಾವು ಪ್ರತಿದಿನ ಅನುಸರಿಸುವ ಕೆಲವು ಹಂತಗಳಿವೆ. ಆದಾಗ್ಯೂ ಚರ್ಮದ ಹೊಳಪನ್ನು ಹೆಚ್ಚಿಸಲು ಪ್ರಸ್ತುತ ಸುಲಭವಾದ ವಿಧಾನದ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಮುಖದ ಅಂದ ಹೆಚ್ಚಿಸಿಕೊಳ್ಳಲು ಬಿಸಿ ಹಬೆಯನ್ನು (Face Steaming) ತೆಗೆದುಕೊಳ್ಳುವುದು ಪ್ರಯೋಜನಕಾರಿ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಹಾಗಾಗಿ ಈ ಕಾರಣಕ್ಕಾಗಿಯೇ ನೀವು ಯಾವುದೇ ಚರ್ಮದ ತಜ್ಞರ ಬಳಿಗೆ ಹೋದರೂ ಅವರು ಖಂಡಿತವಾಗಿಯೂ ಫೇಷಿಯಲ್ ಸ್ಟಿಮಿಂಗ್ ಮಾಡಲು ಸಲಹೆ ನೀಡುತ್ತಾರೆ.

ವಾರಕೊಮ್ಮೆಯಾದರೂ ಫೇಷಿಯಲ್ ಸ್ಟಿಮಿಂಗ್ ಮಾಡುವುದು ಚರ್ಮವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಕರಿಸುತ್ತದೆ. ವೈಟ್ ಹೆಡ್, ಬ್ಲ್ಯಾಕ್ ಹೆಡ್ಸ್ ತೆಗೆದು ಹಾಕುವ ಜತೆಗೆ ಹಲವಾರು ಚರ್ಮದ ಆರೋಗ್ಯ ಪ್ರಯೋಜನ ಹೊಂದಿದ್ದು ಮುಖದ ಚರ್ಮವನ್ನು ಮೃದುಗೊಳಿಸುವ ಜೊತೆಗೆ ಮಾಲಿನ್ಯಕಾರಕ ಅಂಶ, ಮುಖದ ಜಿಡ್ಡು ಮತ್ತು ಕೊಳೆಯನ್ನು ತೆಗೆದುಹಾಕಲು ಅನುಕೂಲವಾಗುತ್ತದೆ. ನಿಮ್ಮ ಮುಖಕ್ಕೆ ಹಬೆಯಾಡಿಸುವುದರಿಂದ ಸತ್ತ ಚರ್ಮದ ಕೋಶಗಳನ್ನುತೆಗೆದು ಹಾಕಿ ಜಿಗುಟಾದ ಮೇದೋಗ್ರಂಥಿಗಳ ಸ್ರಾವವನ್ನು ಕರಗಿಸಬಹುದು.

ಏನೆಲ್ಲ ಉಪಯೋಗ ಇದೆ?

ಮುಖದ ರಂಧ್ರ ತೆರೆಯುವಲ್ಲಿ ಸಹಾಯ ಮಾಡಲಿದೆ: ವಾರಕೊಮ್ಮೆಯಾದರೂ 5 ನಿಮಿಷಗಳ ಮುಖದ ಹಬೆಯಾಡುವಿಕೆಯಿಂದ ಚರ್ಮದ ಉಗಿಯ ಉಷ್ಣತೆಯಿಂದ ನಿಮ್ಮ ರಂಧ್ರಗಳು ತೆರೆದು ಕೊಳ್ಳುತ್ತವೆ. ಇದು ಮಾಲಿನ್ಯಕಾರಕಗಳು, ಮುಖದಲ್ಲಿನ ಕೊಳೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ನಿಮ್ಮ ಮುಖಕ್ಕೆ ಬಿಸಿ ಹಬೆ ತೆಗೆದುಕೊಳ್ಳುವುದರಿಂದ ನಿಮ್ಮ ಚರ್ಮದ ಮೇಲಿನ ಸಣ್ಣ ರಂಧ್ರಗಳು ತೆರೆಯುತ್ತದೆ.

ರಕ್ತದ ಹರಿವನ್ನು ಹೆಚ್ಚಿಸುತ್ತದೆ: ಕೆಲವೊಮ್ಮೆ ತ್ವಚೆಯನ್ನು ಎಷ್ಟೇ ಆರೈಕೆ ಮಾಡಿದರೂ ಚರ್ಮ ನಿರ್ಜಲೀಕರಣಗೊಂಡು ಮುಖ ಸುಕ್ಕುಗಟ್ಟಿದಂತೆ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಬಿಸಿನೀರಿನ ಹಬೆಯನ್ನು ಮುಖದ ಮೇಲೆ ತೆಗೆದುಕೊಂಡರೆ ತ್ವಚೆಯ ಮೇಲೆ ರಕ್ತಸಂಚಾರ ಸರಿಯಾಗಿ ಆಗುತ್ತದೆ. ಇದಲ್ಲದೆ ಫೇಸ್ ಸ್ಟೀಮಿಂಗ್ ನಿಮ್ಮ ಮುಖಕ್ಕೆ ಸುಧಾರಿತ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ನಿಮ್ಮ ಚರ್ಮಕ್ಕೆ ಆರೋಗ್ಯಕರ, ಹೊಳೆಯುವ ನೋಟವನ್ನು ನೀಡುತ್ತದೆ.

ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ: ಹಬೆ ತೆಗೆದುಕೊಳ್ಳುವುದರಿಂದ ನಿಮ್ಮ ಮುಖದ ಮೇಲ್ಮೈಯನ್ನು ಹೈಡ್ರೀಕರಿಸುವ ಮೂಲಕ, ನೀರಿನ ಆವಿಯು ನಿಮ್ಮ ಚರ್ಮದ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಬಿಸಿನೀರಿನ ಹಬೆಯನ್ನು ತೆಗೆದುಕೊಳ್ಳುವುದರಿಂದ ಮುಖದ ಮೇಲೆ ಕಾಲಜನ್ ಮತ್ತು ಎಲಾಸ್ಟಿನ್ ಪ್ರಮಾಣವನ್ನು ಹೆಚ್ಚಿಸಿ ಚರ್ಮ ಮತ್ತಷ್ಟು ಪ್ರಕಾಶಮಾನವಾಗಿ ಕಾಣಲಿದೆ.

ಇದನ್ನು ಓದಿ: Health Tips: ಋತುಬಂಧಕ್ಕೆ ಒಳಗಾಗುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಳ!

ನಿಮ್ಮ ಮುಖವನ್ನು ಹೇಗೆ ಸ್ಟೀಮ್ ಮಾಡುವುದು?

ಮೊದಲಿಗೆ ನಿಮ್ಮ ಮುಖವನ್ನು ಫೇಸ್ ವಾಶ್ ಉಪಯೋಗಿಸಿ ತೊಳೆಯಿರಿ. ಇದರಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಬಹುದು ಮತ್ತು ಸತ್ತ ಚರ್ಮದ ಜೀವಕೋಶಗಳು, ಹೆಚ್ಚುವರಿ ಎಣ್ಣೆ, ಮತ್ತು ಕೊಳೆ ಇದ್ದರೆ ತೆಗೆದು ಹಾಕಬಹುದು. ನಂತರ ಒಂದು ಪಾತ್ರೆಯಲ್ಲಿ ಸುಮಾರು 5 ಕಪ್‌ಗಳಷ್ಟು ನೀರನ್ನು ತುಂಬಿಸಿ ಸರಿಯಾಗಿ ಕುದಿಸಬೇಕು. ಈ ನೀರಿಗೆ ಲ್ಯಾವೆಂಡರ್ ಅಥವಾ ಟೀ ಟ್ರೀ ಎಣ್ಣೆಯಂತಹ ಸಾರಭೂತ ತೈಲಗಳನ್ನು ಸೇರಿಸಿ 10 ನಿಮಿಷ ಸ್ಟೀಮ್ ಮಾಡಿ. ನಂತರ ಮುಖದಲ್ಲಿನ ನೀರಿನಾಂಶವನ್ನು ಶುದ್ಧ ವಸ್ತ್ರದಿಂದ ಒರೆಸಬೇಕು.