ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: 'ಸೌಗತ್-ಎ-ಮೋದಿ' ಅಭಿಯಾನ ; ಮುಸ್ಲಿಮರಿಗೆ ಬಿಜೆಪಿಯಿಂದ ಈದ್ ಉಡುಗೊರೆ

ಈ ಬಾರಿಯ ಈದ್‌ಗೆ ಪ್ರಧಾನಿ ನರೇಂದ್ರ ಮೋದಿ ಅಲ್ಪಸಂಖ್ಯಾತರಿಗೆ ಗಿಫ್ಟ್‌ ನೀಡಲಿದ್ದಾರೆ. ಈದ್ ಗೆ ಮುಂಚಿತವಾಗಿ ದೇಶಾದ್ಯಂತ 32 ಲಕ್ಷ ದೀನದಲಿತ ಮುಸ್ಲಿಮರಿಗೆ ವಿಶೇಷ ಕಿಟ್ ಗಳನ್ನು ವಿತರಿಸುವ ಮೂಲಕ ಬೆಂಬಲ ನೀಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಲ್ಪಸಂಖ್ಯಾತ ಮೋರ್ಚಾ (ಅಲ್ಪಸಂಖ್ಯಾತ ವಿಭಾಗ) ‘ಸೌಗತ್-ಎ-ಮೋದಿ’ ಅಭಿಯಾನವನ್ನು ಪ್ರಾರಂಭಿಸಲಿದೆ.

ಮುಸ್ಲಿಮರಿಗೆ ಬಿಜೆಪಿಯ ಈದ್ ಉಡುಗೊರೆ!

Profile Vishakha Bhat Mar 26, 2025 9:27 AM

ನವದೆಹಲಿ: ಈ ಬಾರಿಯ ಈದ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಲ್ಪಸಂಖ್ಯಾತರಿಗೆ ಗಿಫ್ಟ್‌ ನೀಡಲಿದ್ದಾರೆ. ಈದ್ ಗೆ ಮುಂಚಿತವಾಗಿ ದೇಶಾದ್ಯಂತ 32 ಲಕ್ಷ ದೀನದಲಿತ ಮುಸ್ಲಿಮರಿಗೆ ವಿಶೇಷ ಕಿಟ್ ಗಳನ್ನು ವಿತರಿಸುವ ಮೂಲಕ ಬೆಂಬಲ ನೀಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಲ್ಪಸಂಖ್ಯಾತ ಮೋರ್ಚಾ (ಅಲ್ಪಸಂಖ್ಯಾತ ವಿಭಾಗ) ‘ಸೌಗತ್-ಎ-ಮೋದಿ’ ಅಭಿಯಾನವನ್ನು ಪ್ರಾರಂಭಿಸಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮಾರ್ಗದರ್ಶನದಲ್ಲಿ ನಿಜಾಮುದ್ದೀನ್ ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿರುವ ಸುಮಾರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ಈದ್ ಕಿಟ್ ವಿತರಿಸುತ್ತಿದೆ.

ಬಡ ಮುಸ್ಲಿಂ ಕುಟುಂಬಗಳು ಯಾವುದೇ ಕಷ್ಟವಿಲ್ಲದೆ ಹಬ್ಬವನ್ನು ಆಚರಿಸಬೇಕೆಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ರಂಜಾನ್ ಮತ್ತು ಈದ್ ಹಬ್ಬದ ಸಂದರ್ಭಗಳನ್ನು ಕೇಂದ್ರೀಕರಿಸಿ ಈ ಅಭಿಯಾನವು ಮಹತ್ವದ್ದಾಗಿದೆ. ಅಭಿಯಾನದ ಅಡಿಯಲ್ಲಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು 32 ಲಕ್ಷ ಮುಸ್ಲಿಂ ಕುಟುಂಬಗಳನ್ನು ತಲುಪಲು ಮತ್ತು 3 ಸಾವಿರ ಮಸೀದಿಗಳೊಂದಿಗೆ ಸಹಕರಿಸಲು ಯೋಜಿಸಿದೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥ ಜಮಾಲ್ ಸಿದ್ದಿಕಿ ಮಾತನಾಡಿ, ಈ ಯೋಜನೆಯು ಈದ್ಗೆ ಮಾತ್ರ ಸೀಮಿತವಾಗಿಲ್ಲ ಮತ್ತು ಮುಂಬರುವ ಗುಡ್ ಫ್ರೈಡೆ, ಈಸ್ಟರ್, ನೌರುಜ್, ಬೈಸಾಖಿ ಮತ್ತು ಭಾರತೀಯ ಹೊಸ ವರ್ಷದಂತಹ ಸಂದರ್ಭಗಳಿಗೆ ವಿಸ್ತರಿಸುತ್ತದೆ, ಅಲ್ಪಸಂಖ್ಯಾತ ರಂಗವು “ಸೌಗತ್-ಎ-ಮೋದಿ” ಅಭಿಯಾನದ ಮೂಲಕ ಅಗತ್ಯವಿರುವವರನ್ನು ತಲುಪಲಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: PM Narendra Modi : 2022-2024ರವರೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸಗಳಿಗಾಗಿ ಕೇಂದ್ರ ಸರ್ಕಾರ ಎಷ್ಟು ಖರ್ಚು ಮಾಡಿದೆ?



ಸೌಗತ್-ಎ-ಮೋದಿ’ ಅಭಿಯಾನದಡಿಯಲ್ಲಿ ವಿತರಿಸಲಾದ ಕಿಟ್ ಗಳು, ಆಹಾರ ಪದಾರ್ಥಗಳ ಜೊತೆಗೆ, ಬಟ್ಟೆ, ಶಾವಿಗೆ, ಖರ್ಜೂರ, ಡ್ರೈಫ್ರೂಟ್ಸ್ ಮತ್ತು ಸಕ್ಕರೆಯನ್ನು ಒಳಗೊಂಡಿವೆ. ಮಹಿಳೆಯರ ಕಿಟ್ ಗಳು ಬಟ್ಟೆಯನ್ನು ಒಳಗೊಂಡಿದ್ದು, ಪುರುಷರ ಕಿಟ್ ಗಳು ಕುರ್ತಾ-ಪೈಜಾಮಾಗಳನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗಿದೆ. ಗುಡ್ ಫ್ರೈಡೇ, ಈಸ್ಟರ್, ನೌರುಜ್ ಮತ್ತು ಹೊಸ ವರ್ಷದಂತಹ ಇತರ ಮಹತ್ವದ ಸಂದರ್ಭಗಳಲ್ಲಿಯೂ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬಿಜೆಪಿ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಈದ್ ಮಿಲನ್ ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ತಿಳಿದು ಬಂದಿದೆ.