ಶತಕ ಪೂರ್ಣಗೊಳಿಸಲು ಶ್ರೇಯಸ್ ಅಯ್ಯರ್‌ಗೆ ಸ್ಟ್ರೈಕ್ ನೀಡದೆ ಇರಲು ಕಾರಣ ತಿಳಿಸಿದ ಶಶಾಂಕ್ ಸಿಂಗ್!
GT vs PBKS: ಗುಜರಾತ್ ಟೈಟನ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಐದನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಕೇವಲ ಮೂರು ರನ್‌ಗಳಿಂದ ಶತಕ ವಂಚಿತರಾದರು. ಕೊನೆಯ ಎರಡು ಓವರ್‌ಗಳಲ್ಲಿ ಅವರಿಗೆ ಸ್ಟ್ರೈಜ್ ನೀಡದ ಶಶಾಂಕ್ ಸಿಂಗ್ ಬೌಂಡರಿ- ಸಿಕ್ಸರ್‌ಗಳನ್ನು ಸಿಡಿಸಿದರು. ಈ ಬಗ್ಗೆ ಶಶಾಂಕ್ ಸಿಂಗ್ ಇನಿಂಗ್ಸ್ ಬ್ರೇಕ್ ವೇಳೆ ಪ್ರತಿಕ್ರಿಯಿಸಿದ್ದಾರೆ.

ಶ್ರೇಯಸ್ ಅಯ್ಯರ್ ಹಾಗೂ ಶಶಾಂಕ್ ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು.

ಅಹಮದಾಬಾದ್: ಗುಜರಾತ್ ಟೈಟನ್ಸ್ ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಐದನೇ ಪಂದ್ಯದ ಕೊನೆಯ ಓವರ್‌ನಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್‌ಗೆ (Shreyas Iyer) ಸ್ಟ್ರೈಕ್ ನೀಡದೆ ಇರಲು ಪ್ರಮುಖ ಕಾರಣವನ್ನು ಯುವ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ (Shashank Singh) ವಿವರಿಸಿದ್ದಾರೆ. ಶ್ರೇಯಸ್ ಅಯ್ಯರ್ ಅವರೇ ಶತಕದ ಬಗ್ಗೆ ಚಿಂತಿಸಬೇಡಿ, ಚೆಂಡು ಬಂದ ಹಾಗೆ ಹೊಡೆಯಿರಿ ಎಂದಿದ್ದರು ಎಂಬ ಅಂಶವನ್ನು ಶಶಾಂಕ್ ರಿವೀಲ್ ಮಾಡಿದ್ದಾರೆ. ಭರ್ಜರಿ ಬ್ಯಾಟ್ ಬೀಸಿದ್ದ ಶ್ರೇಯಸ್ ಅಯ್ಯರ್ ಅಜೇಯ 97 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆ ಮೂಲಕ ಕೇವಲ ಮೂರು ರನ್ ಗಳಿಂದ ಅವರು ಶತಕ ವಂಚಿತರಾದರು.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಂಜಾಬ್ ಕಿಂಗ್ಸ್ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಶ್ರೇಯಸ್ ಅಯ್ಯರ್, 42 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 97 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಶತಕವನ್ನು ಸಿಡಿಸುವ ಸನಿಹದಲ್ಲಿದ್ದರು. ಆದರೆ, ಕೊನೆಯ ಎರಡು ಓವರ್‌ಗಳಲ್ಲಿ ಅವರಿಗೆ ಶಶಾಂಕ್ ಸಿಂಗ್ ಹೆಚ್ಚು ಸ್ಟ್ರೈಕ್ ಬಿಡಲಿಲ್ಲ. ಕನಿಷ್ಠ ಕೊನೆಯ ಓವರ್‌ನಲ್ಲಿ ಅಯ್ಯರ್‌ಗೆ ಸ್ಟ್ರೈಕ್ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಶಶಾಂಕ್ ಆರೂ ಎಸೆತಗಳನ್ನು ಆಡಿ ಬೌಂಡರಿ-ಸಿಕ್ಸರ್‌ಗಳನ್ನು ಬಾರಿಸಿದರು.
IPL 2025: ಅಜೇಯ 97 ರನ್ ಗಳಿಸಿ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಶ್ರೇಯಸ್ ಅಯ್ಯರ್!
ಶ್ರೇಯಸ್ ಅಯ್ಯರ್ ಶತಕ ಕಳೆದುಕೊಂಡಿದ್ದು ಹೇಗೆ?
ಪಂದ್ಯದ 19ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಅಜೇಯ 97 ರನ್ ಗಳಿಸಿದ್ದರು. ಕೊನೆಯ ಓವರ್‌ನಲ್ಲಿ ಶಶಾಂಕ್ ಸಿಂಗ್ ಸ್ಟ್ರೈಕ್ ಮಾಡಿದ್ದರು. ಮೊಹಮ್ಮದ್ ಸಿರಾಜ್‌ಗೆ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇದಾದ ನಂತರ ಮುಂದಿನ ಎಸೆತದಲ್ಲಿ ಎರಡು ರನ್ ಬಂದವು. ನಂತರ ಶಶಾಂಕ್ ಮುಂದಿನ 4 ಎಸೆತಗಳಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಇದರಿಂದಾಗಿ ಶ್ರೇಯಸ್ ಅಯ್ಯರ್‌ಗೆ ಸ್ಟ್ರೈಕ್ ಸಿಗಲಿಲ್ಲ. ಅವರು 97 ರನ್ ಗಳಿಸಿ ಅಜೇಯರಾಗಿ ಡ್ರೆಸ್ಸಿಂಗ್ ರೂಂಗೆ ಮರಳಿದರು. ಅಂದ ಹಾಗೆ ಶ್ರೇಯಸ್ ಅಯ್ಯರ್ ಕೊನೆಯ ಮೂರು ಓವರ್‌ಗಳಲ್ಲಿ ಕೇವಲ ನಾಲ್ಕು ಎಸೆತಗಳನ್ನು ಮಾತ್ರ ಆಡಿದ್ದರು.
Sarpanch Saab making his mark! 🦁#PunjabKings #IPL2025 #GTvPBKS #BasJeetnaHai pic.twitter.com/88X7eqJ37h
— Punjab Kings (@PunjabKingsIPL) March 25, 2025
ಶಶಾಂಕ್ ಸಿಂಗ್ ಹೇಳಿದ್ದೇನು?
ಪಂಜಾಬ್ ಕಿಂಗ್ಸ್ ಇನಿಂಗ್ಸ್ ವಿರಾಮದ ನಂತರ ಮಾತನಾಡಿದ ಶಶಾಂಕ ಸಿಂಗ್, "ಹೌದು, ಇದು ಉತ್ತಮ ಅತಿಥಿ ಪಾತ್ರವಾಗಿತ್ತು. ಆದರೆ ಶ್ರೇಯಸ್ ಅಯ್ಯರ್ ಅವರನ್ನು ನೋಡಿ ನನಗೆ ಇನ್ನಷ್ಟು ಸ್ಫೂರ್ತಿ ಸಿಕ್ಕಿದೆ. ನಿಜ ಹೇಳಬೇಕೆಂದರೆ - ಮೊದಲ ಎಸೆತದಲ್ಲೇ ಶ್ರೇಯಸ್ ಹೇಳಿದ್ದು, ನನ್ನ ಶತಕದ ಬಗ್ಗೆ ಚಿಂತಿಸಬೇಡಿ ಎಂದು ಸೂಚನೆ ನೀಡಿದ್ದರು," ಎಂದು ಹೇಳಿದ್ದಾರೆ.
"ಚೆಂಡನ್ನು ನೋಡಿ ಮತ್ತು ಅದನ್ನು ಹೊಡೆಯುವುದಾಗಿತ್ತು. ಅದರಂತೆ ನಾನು ಬೌಂಡರಿಗಳನ್ನು ಹೊಡೆಯಲು ಪ್ರಯತ್ನಿಸುತ್ತೇನೆ ಮತ್ತು ಖಚಿತಪಡಿಸಿಕೊಳ್ಳುತ್ತೇನೆ. ನೀವು ಈ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೋದಾಗ ನೀವು ಚೆಂಡನ್ನು ಚೆನ್ನಾಗಿ ಹೊಡೆಯಬೇಕಾಗುತ್ತದೆ. ನಾನು ಯಾವ ಹೊಡೆತಗಳನ್ನು ಬೆಂಬಲಿಸಬಹುದೆಂದು ನನಗೆ ತಿಳಿದಿದೆ. ನನ್ನಿಂದ ಸಾಧ್ಯವಾಗದ ಕೆಲಸಗಳನ್ನು ಕೈ ಬಿಟ್ಟು, ಹೆಚ್ಚಾಗಿ ನನ್ನ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸುತ್ತೇನೆ," ಎಂದು ಶಶಾಂಕ್ ಸಿಂಗ್ ರಿವೀಲ್ ಮಾಡಿದ್ದಾರೆ.
IPL 2025: ʻನಿರಾಶದಾಯಕ ಫಲಿತಾಂಶʼ: ಲಖನೌ ಸೋಲಿನ ಬಗ್ಗೆ ಸಂಜೀವ್ ಗೋಯಾಂಕಾ ಪ್ರತಿಕ್ರಿಯೆ!
ತಂಡಕ್ಕಾಗಿ ಶತಕ ತ್ಯಾಗ ಮಾಡಿದ ಶ್ರೇಯಸ್ ಅಯ್ಯರ್
ಆಟಗಾರರಾಗಿ ಮೊದಲು ತಂಡದ ಬಗ್ಗೆ ಯೋಚಿಸಬೇಕು ಎಂಬುದು ಶ್ರೇಯಸ್ ಅಯ್ಯರ್ ಹೇಳಿಕೆಯಿಂದ ತಿಳಿದು ಬಂದಿದೆ. ಒಂದು ಶತಕ ಆಟಗಾರನಿಗೆ ಪ್ರಯೋಜನವನ್ನು ನೀಡುತ್ತದೆ, ಆದರೆ ಅದರ ದುರಾಸೆಯು ತಂಡಕ್ಕೆ ನಷ್ಟವನ್ನು ಉಂಟುಮಾಡಬಹುದು. ಅಯ್ಯರ್ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದಾದ ನಂತರ ಇನ್ನೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದರು. ಅವರು ತಮ್ಮ ಇನಿಂಗ್ಸ್‌ನಲ್ಲಿ ಬೌಂಡರಿಗಳಿಗಿಂತ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದರು. ಅಯ್ಯರ್ 5 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ 97 ರನ್ ಗಳಿಸಿ ಅಜೇಯರಾಗಿ ಉಳಿದರು.