ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Building Collapse: ಧಾರವಾಡದಲ್ಲಿ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವು

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರನ್ನು ದಾವೂದ್ ಸವಣೂರು (32) ಹಾಗೂ ಹಳೇಹುಬ್ಬಳ್ಳಿ ನೂರಾನಿ ಫ್ಲಾಟ್ ನಿವಾಸಿ ರಫಿಕ್ ಸಾಬ್ ಚನ್ನಾಪುರ (50) ಎಂದು ಗುರುತಿಸಲಾಗಿದೆ.

ಧಾರವಾಡದಲ್ಲಿ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 26, 2025 9:26 AM

ಧಾರವಾಡ : ಧಾರವಾಡ (Dharawada news) ಜಿಲ್ಲೆಯಲ್ಲಿ ಘೋರ ದುರಂತವೊಂದು (Tragedy) ಸಂಭವಿಸಿದೆ. ಕಾರ್ಖಾನೆಯ ನಿರ್ಮಾಣ ಹಂತದ ಗೋಡೆ ಗಾಳಿ ಮಳೆಗೆ ಕುಸಿದು (Building Collapse) ಇಬ್ಬರು ಕೂಲಿ (Coolie) ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಮೃತ ಕಾರ್ಮಿಕರನ್ನು ಹಳೇಹುಬ್ಬಳ್ಳಿಯ ಧಾರವಾಡ ಫ್ಲಾಟ್ ನ ನಿವಾಸಿ ದಾವೂದ್ ಸವಣೂರು (32) ಹಾಗೂ ಹಳೇಹುಬ್ಬಳ್ಳಿ ನೂರಾನಿ ಫ್ಲಾಟ್ ನಿವಾಸಿ ರಫಿಕ್ ಸಾಬ್ ಚನ್ನಾಪುರ (50) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಿರ್ಮಿಸಲಾಗುತ್ತಿರುವ ಫ್ಯಾಕ್ಟರಿಯ ದಾಖಲೆಗಳನ್ನು ಹಾಗೂ ಅನುಮತಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮಾಲೀಕರನ್ನು ಹಾಗೂ ಸ್ಥಳದಲ್ಲಿದ್ದ ಇತರ ಕೂಲಿ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ನಕಲಿ ಅಂಕಪಟ್ಟಿ ನೀಡುತ್ತಿದ್ದ ಮೂವರು ಆರೆಸ್ಟ್‌

ಬೆಂಗಳೂರು: ಪಿಯುಸಿ (PUC) ಮತ್ತು ಎಸ್​ಎಸ್​ಎಲ್​​ಸಿ (SSLC) ತತ್ಸಮಾನ ಎಂದು ನಕಲಿ ಅಂಕಪಟ್ಟಿ (marks sheet) ನೀಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು (Fraud Case) ಬಂಧಿಸಿದ್ದಾರೆ. ಆರೋಪಿಗಳು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸ್ಟಡಿ ಸೆಂಟರ್​ಗಳನ್ನು ತೆರೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಅಲ್ಲದೇ, ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆ ಹುಟ್ಟುಹಾಕಿದ್ದರು. ಆರೋಪಿಗಳು ಬೆಂಗಳೂರು, ಬೆಳಗಾವಿ, ಧಾರವಾಡದಲ್ಲಿದ್ದುಕೊಂಡು ಈ ಅಕ್ರಮ ದಂಧೆ ನಡೆಸುತ್ತಿದ್ದರು.

ಸ್ಟಡಿ ಸೆಂಟರ್​ನಲ್ಲಿ ಕರೆಸ್ಪಾಂಡಿಂಗ್ ವ್ಯಾಸಂಗ ಮಾಡುವವರನ್ನು ದಾಖಲಿಸಿಕೊಳ್ಳುತ್ತಿದ್ದರು. ನಂತರ ಕಲವೇ ದಿನಗಳಲ್ಲಿ ಇವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿಗಳನ್ನು ನೀಡುತಿದ್ದರು. ಆರೋಪಿಗಳು ಧಾರವಾಡದಲ್ಲಿ ಮತ್ತು ಬೆಂಗಳೂರಿನಲ್ಲಿ ಅಂಕಪಟ್ಟಿ ಪ್ರಿಂಟ್ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳು ಸುಮಾರು 350 ಜನರಿಗೆ ನಕಲಿ ಅಂಕಪಟ್ಟಿ ನೀಡಿರುವುದು ತಿಳಿದುಬಂದಿದೆ.

ಇವರಿಂದ ನಕಲಿ ಅಂಕಪಟ್ಟಿ ಪಡೆದವರು ಸಾರಿಗೆ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ. ಆರೋಪಿಗಳು 5ರಿಂದ 10 ಸಾವಿರ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಸರ್ಕಾರಿ ಇಲಾಖೆಗಳು ಕೆಲಸ ನೀಡುವ ಮೊದಲು ಪರಿಶೀಲನೆ ಮಾಡಿದಾಗ ಸಹ ಇದು ಅಸಲಿ ಅಂಕಪಟ್ಟಿ ಎಂದು ಆರೋಪಿಗಳು ಮಾಹಿತಿ ನೀಡಿದ್ದರು. ಈ ಮಾದರಿಯ ಅಂಕಪಟ್ಟಿ ಎಲ್ಲಿಯಾದರೂ ಸಲ್ಲಿಕೆಯಾಗಿದ್ದಲ್ಲಿ ಸಿಸಿಬಿಗೆ ಮಾಹಿತಿ ನೀಡುವಂತೆ ಪೊಲೀಸರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Drowned: ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ಈಜುಕೊಳ ದುರಂತ, ಒಬ್ಬ ಸಾವು