ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಅತಿ ಹೆಚ್ಚು ಮಂದಿ ಇದ್ದಾರೆ
ಮಾನಸಿಕ ಅಸ್ವಸ್ಥತೆಗೆ ಕಾರಣ ಗಳು, ಅದರ ಲಕ್ಷಣಗಳು, ಪರಿಣಾಮಗಳು ಮತ್ತು ಪರಿಹಾರಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ದರು. ಪ್ರಜ್ಞಾಟ್ರಸ್ಟ್ ಸಂಸ್ಥೆಯ ಅಧ್ಯಕ್ಷೆ ಎಸ್.ವಿಜಯಲಕ್ಷ್ಮಿ ಅವರು ಮಾನಸಿಕ ಅಸ್ವಸ್ಥ ತೆಗೂ ಬೌದ್ಧಿಕ ವಿಕಲತೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು

ಸಿಬಿಎಂ ಸಂಸ್ಥೆಯ ಮಾನಸಿಕ ಆರೋಗ್ಯ ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ನಗರದ ಪ್ರಜ್ಞಾ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.

ಗೌರಿಬಿದನೂರು: ಸಿಬಿಎಂ ಸಂಸ್ಥೆಯ ಮಾನಸಿಕ ಆರೋಗ್ಯ ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ನಗರದ ಪ್ರಜ್ಞಾ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಿಬಿಐಡಿ ಯೋಜನೆಯ ತರಬೇತುದಾರ ಆರ್. ರವಿ ಭಾಗವಹಿಸಿ ಮಾತನಾಡುತ್ತಾ, ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಅತಿ ಹೆಚ್ಚು ಮಂದಿ ಇದ್ದಾರೆ. ಅವರೆಲ್ಲರ ಆರೋಗ್ಯದ ದೃಷ್ಟಿಯಿಂದ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಂದುವರೆದು ಅವರು ಮಾನಸಿಕ ಅಸ್ವಸ್ಥತೆಯು ಆಪ್ತ ಸಮಾಲೋಚನೆ ಮತ್ತು ಕಡಿಮೆ ಪ್ರಮಾಣದ ಔಷಧಿ ಸೇವನೆಯೊಂದಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಇದಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಿ ಗ್ರಾಮೀಣ ಪುನರ್ವಸತಿ ಕಾರ್ಯ ಕರ್ತರಿಗೆ ತರಬೇತಿಯನ್ನು ನೀಡಲಾಗುತ್ತಿದೆ ಮತ್ತು ಆರ್‌ಸಿಐ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದರು.
ಇದನ್ನೂ ಓದಿ:Chikkaballapur Crime: ಹಬ್ಬದ ದಿನವೇ ಆದಿಯೋಗಿ ದರ್ಶನಕ್ಕೆ ಬಂದ ಇಬ್ಬರು ಯುವಕರು ಅಪಘಾತಕ್ಕೆ ಬಲಿ
ತಾಲ್ಲೂಕಿನ ಎಂ ಆರ್ ಡಬ್ಲ್ಯೂ ಕೃಷ್ಣಪ್ಪ ಮಾತನಾಡುತ್ತಾ ಮಾನಸಿಕ ಅಸ್ವಸ್ಥತೆಗೆ ಕಾರಣ ಗಳು, ಅದರ ಲಕ್ಷಣಗಳು, ಪರಿಣಾಮಗಳು ಮತ್ತು ಪರಿಹಾರಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ದರು. ಪ್ರಜ್ಞಾಟ್ರಸ್ಟ್ ಸಂಸ್ಥೆಯ ಅಧ್ಯಕ್ಷೆ ಎಸ್.ವಿಜಯಲಕ್ಷ್ಮಿ ಅವರು ಮಾನಸಿಕ ಅಸ್ವಸ್ಥ ತೆಗೂ ಬೌದ್ಧಿಕ ವಿಕಲತೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜ್ಞಾ ಟ್ರಸ್ಟ್ ಸಂಸ್ಥೆಯ ಸoಸ್ಥಾಪಕ ಯೋಜನಾ ನಿರ್ದೇಶಕರಾದ ಎನ್.ನಾಗರಾಜ್ ಮತನಾಡಿ ನ್ಯಾಷನಲ್ ಟ್ರಸ್ಟಿನ ನಿರಾಮಯ ಯೋಜನೆ ಮತ್ತು ಲೀಗಲ್ ಗಾರ್ಡಿಯನ್ ಬಗ್ಗೆ ವಿವರವಾಗಿ ತಿಳಿಸಿ ಎಲ್ಲಾ ಪುನರ್ವಸತಿ ಕಾರ್ಯ ಕರ್ತರು ಶ್ರಮವಹಿಸಿ ನಿರಾಮಯ ಯೋಜನೆಯನ್ನು ಎಲ್ಲಾ ಫಲಾನುಭವಗಳಿಗೆ ವಿಸ್ತರಿಸಲು ಸಹಕಾರ ನೀಡಬೇಕು ಎಂದರು. ಸಿಬಿಎಂ ವತಿಯಿಂದ ಶ್ರವಣದೋಷವುಳ್ಳವರ ಪೋಷಕರಿಗೆ ಮಾರ್ಗದರ್ಶನ ಕಿಟ್ ಒಂದನ್ನು ವಿತರಿಸಲಾಯಿತು.
ಗಂಗರತ್ನಮ್ಮ ಮತ್ತು ನಾಗವೇಣಿ ಪ್ರಾರ್ಥಿಸಿ, ವಿ ಆರ್ ಡಬ್ಲ್ಯೂ ನಾಗರಾಜ್ ರವರು ಸ್ವಾಗ ತಿಸಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಎಂ ಆರ್ ಡಬ್ಲ್ಯೂ ರಾಮಪ್ಪ, ಗುಡಿ ಬಂಡೆ ತಾಲೂಕಿನ ಎಂ.ಆರ್.ಡಬ್ಲ್ಯೂ ರಮೇಶ್, ಫಿಜಿಯೋಥೆರಪಿಸ್ಟ್ ಹರಿಣಿ, ವಿಶೇಷ ಶಿಕ್ಷಕಿ ಉಷಾ, ಸಂಯೋಜಕಿ ಶಾಂತ ಮಹೇಶ್, ಶಾಂತಲಕ್ಷ್ಮಿ, ಗುಡಿಬಂಡೆ ಬಾಗೇಪಲ್ಲಿ ಗೌರಿಬಿದ ನೂರು ತಾಲೂಕಿನ ಎಲ್ಲಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಅರುಣೋದಯ ವಿಶೇಷ ಶಾಲೆಯ ಪೋಷಕರು ಹಾಜರಿದ್ದರು.