ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ
ನಮ್ಮೂರಿನಲ್ಲಿ ಎರಡು ಕೊಳೆವೆ ಬಾವಿಗಳು ನೀರನ್ನು ಸರಬರಾಜು ಮಾಡಲು ಇವೆ. ಆದರೆ ಅವುಗಳ ನೀರನ್ನು ನೀರಿನ ಶುದ್ಧೀಕರಣ ಘಟಕಕ್ಕೆ ಬಿಡಲಾಗುತ್ತಿದೆ.ಹೀಗಾಗಿ ಗ್ರಾಮಕ್ಕೆ ಸರಬ ರಾಜು ಮಾಡುತ್ತಿಲ್ಲ. ಇದರಿಂದಾಗಿ ನಿತ್ಯ ಬಳಕೆಯ ನೀರಿಗೆ ತೀವ್ರವಾದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ವಿಚಾರಿಸಿ ದಾಗ ಸಬೂಬು ಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ

ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ ನಡೆಸುತ್ತಿರುವ ಚಿತ್ರ.

ಬಾಗೇಪಲ್ಲಿ: ತಾಲ್ಲೂಕು ಕಸಭಾ ಹೋಬಳಿ ಎಲ್ಲಂಪಲ್ಲಿ ಗ್ರಾಮದಲ್ಲಿ ಕಳೆದ ಎರಡು ತಿಂಗ ಳಿಂದ ನೀರನ್ನು ಒದಗಿಸುವಂತೆ ಗ್ರಾಪಂ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಎಲ್ಲಂಪಲ್ಲಿ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಮಹಿಳೆಯರು ಖಾಲಿ ಕೊಡ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಹಿರಿಯ ಮುನಿಶಾಮಪ್ಪ ಅವರು ಮಾತನಾಡಿ ನಮ್ಮೂರಿನಲ್ಲಿ ಎರಡು ಕೊಳೆವೆ ಬಾವಿಗಳು ನೀರನ್ನು ಸರಬರಾಜು ಮಾಡಲು ಇವೆ. ಆದರೆ ಅವುಗಳ ನೀರನ್ನು ನೀರಿನ ಶುದ್ಧೀಕರಣ ಘಟಕಕ್ಕೆ ಬಿಡಲಾಗುತ್ತಿದೆ.ಹೀಗಾಗಿ ಗ್ರಾಮಕ್ಕೆ ಸರಬರಾಜು ಮಾಡುತ್ತಿಲ್ಲ. ಇದರಿಂದಾಗಿ ನಿತ್ಯ ಬಳಕೆಯ ನೀರಿಗೆ ತೀವ್ರವಾದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ವಿಚಾರಿಸಿ ದಾಗ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಾವು ಗ್ರಾಮ ಪಂಚಾ ಯಿತಿಯ ಕಚೇರಿಗೆ ಬೀಗ ಹಾಕಿ ನಮ್ಮ ಹೋರಾಟವನ್ನು ನಡೆಸುತ್ತಿದ್ದೇವೆ. ಎಲ್ಲಿವರೆಗೂ ನೀರನ್ನು ಒದಗಿಸುವುದಿಲ್ಲವೋ ಅಲ್ಲಿವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಸಮಸ್ಯೆ ಪರಿಹಾರವಾಗದಿದ್ದರೆ ಅನಿರ್ದಿಷ್ಟ ಅವಧಿ ಧರಣಿಗೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Chikkaballapur News: ಗೃಹ ರಕ್ಷಕದಳ ಸಿಬ್ಬಂದಿ ಕೆಲಸವನ್ನು ಮಾಡಬೇಕಾದರೂ ಹಿರಿಯ ಅಧಿಕಾರಿಗೆ ಲಂಚ ನೀಡಬೇಕಾಗಿದೆ
ಇದೇ ವೇಳೆ ಗ್ರಾಮದ ಮುಖಂಡ ಶ್ರೀನಿವಾಸ್ ಮಾತನಾಡಿ, ನಮ್ಮ ಗ್ರಾಮ ಪಂಚಯತಿ ಸರಕಾರಿ ಕಚೇರಿ ಅನ್ನುವುದಕ್ಕಿಂತ ಮಾರುಕಟ್ಟೆಯ ರೀತಿ ಆಗಿದೆ. ಕುಡಿಯುವ ನೀರು ಸೇರಿದಂತೆ ನಾನಾ ಸಮಸ್ಯೆಗಳು ತಾಂಡವಾಡುತ್ತಿವೆ. ಈ ಬಗ್ಗೆ ಪ್ರಶ್ನಿಸಿದರೂ ಪ್ರಯೋಜನ ವಿಲ್ಲ. ದುಡ್ಡಿದ್ದರೆ ಸೌಲಭ್ಯಗಳನ್ನು ಕೊಂಡುಕೊಳ್ಳಬಹುದು. ಆ ರೀತಿಯ ಮಾರುಕಟ್ಟೆ ಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಗ್ರಾಮದ ಮುಖಂಡರಾದ ನಾಗರಾಜು ಮಾತನಾಡಿ ಎಲ್ಲಂಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಗಳನ್ನು ಸ್ವಚ್ಛತೆ ಮಾಡಿಲ್ಲ. ಸಮಸ್ಯೆ ಸರಿಪಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ.ನಾವು ಸಾಂಕೇತಿಕವಾಗಿ ಪ್ರತಿ ಭಟನೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸದಿದ್ದರೆ, ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಇದೇ ವೇಳೆ ಗ್ರಾಮಸ್ಥರಾದ ನಾಗೇಶ್, ಕೊಂಡಪ್ಪ, ವೆಂಕಟಸ್ವಾಮಿ ರೆಡ್ಡಿ, ವೆಂಕಟೇಶ್, ಶಿವಪ್ಪ, ಆನಂದ್ ಸೇರಿದಂತೆ ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.