ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಶ್ರೀ ಸಂತ ಸೇವಾಲಾಲ ಹೇಳಿದ ತತ್ವಗಳ ಹಾದಿಯಲ್ಲಿ ನಾವೆಲ್ಲ ರೂ ನಡೆಯಬೇಕು

ಲಂಬಾಣಿ ಸಮುದಾಯದ ಭಾಷೆ, ಸಂಸ್ಕೃತಿ ಆಚಾರ-ವಿಚಾರ ಉಡುಗೆ-ತೊಡುಗೆ ವೈಶಿಷ್ಟ್ಯ ತೆಯಿಂದ ಕೂಡಿದೆ.ಕಾಂಗ್ರೆಸ್ ಸರಕಾರವು ಬಂಜಾರ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅನೇಕ ಯೋಜನೆಗಳನ್ನು ರೂಪಿಸಿದೆ. ಇದನ್ನು ಬಳಸಿಕೊಂಡು ಶೈಕ್ಷಣಿಕ ವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದರು

ಸಂತ ಸೇವಾಲಾಲ್ ಜಯಂತಿ ಆಚರಣೆ; ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಭಾಗಿ

ಸೋಮವಾರ ತಾಲೂಕು ಆಡಳಿತದಿಂದ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಭಾಗಿಯಾಗಿದ್ದರು.

Profile Ashok Nayak Feb 24, 2025 9:49 PM

ಬಾಗೇಪಲ್ಲಿ: ಪವಿತ್ರವಾದ ಭರತ ಖಂಡದಲ್ಲಿ ಜನಿಸಲು ಪುಣ್ಯ ಮಾಡಿರಬೇಕು. ಈ ನೆಲ ದಲ್ಲಿ ಅನೇಕ ಸಾಧು ಸಂತರು ಶರಣರು ಜನಿಸಿ ನಮಗೆ ಉತ್ತಮವಾದ ಜೀವನ ಮೌಲ್ಯ ಗಳನ್ನು ತಿಳಿಸಿದ್ದಾರೆ. ಅಂತಹ ಮಹನಿಯರಲ್ಲಿ  ಶ್ರೀ ಸಂತ ಸೇವಲಾಲ್ ಅವರು ಸಹ ಒಬ್ಬರಾಗಿದ್ದಾರೆ. ಶ್ರೀ ಸಂತ ಸೇವಾಲಾಲ ಅವರು ಹೇಳಿದ ತತ್ವಗಳ ಹಾದಿಯಲ್ಲಿ ನಾವೆಲ್ಲ ರೂ ನಡೆಯಬೇಕು ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯತಿ ಕಾರ್ಯಾಲಯ ಎದುರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿ ಯಿಂದ ಆಯೋಜಿಸಿದ್ದ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿ ಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಲಂಬಾಣಿ ಸಮುದಾಯದ ಭಾಷೆ, ಸಂಸ್ಕೃತಿ ಆಚಾರ-ವಿಚಾರ ಉಡುಗೆ-ತೊಡುಗೆ ವೈಶಿಷ್ಟ್ಯ ತೆಯಿಂದ ಕೂಡಿದೆ.ಕಾಂಗ್ರೆಸ್ ಸರಕಾರವು ಬಂಜಾರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನೇಕ ಯೋಜನೆಗಳನ್ನು ರೂಪಿಸಿದೆ. ಇದನ್ನು ಬಳಸಿಕೊಂಡು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದರು.

ಸಂತ ಸೇವಾಲಾಲ್ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ತಾವು ಓದಬೇಕು, ಇತರರನ್ನು ಓದಿಸಬೇಕು ಎಂಬ ಆಶಯ ಹೊಂದಿದ್ದರು.ಇತ್ತೀಚಿನ ದಿನಗಳಲ್ಲಿ ಬಂಜಾರ ಸಮಾಜವು ಕೂಡ ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಬಾಗೇಪಲ್ಲಿ ತಾಲ್ಲೂಕಿನಲ್ಲಿ 40 ಲಂಬಾಣಿ ತಾಂಡಗಳು ಇದ್ದು ಈ ಸಮುದಾಯದವರು ದಯವಿಟ್ಟು ಬಾಲ್ಯ ವಿವಾಹಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ ಶಾಸಕರು ಬಂಜಾರ, ಲಂಬಾಣಿ ಸಮಾಜಕ್ಕೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಬಳಸಿಕೊಂಡು ಜಾಗೃತರಾಗಬೇಕು ಎಂದು ಹೇಳಿದರು.

ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀರಾಮ ನಾಯಕ್ ಪ್ರಾಸ್ತಾವಿಕವಾಗಿ ಮಾತ ನಾಡಿ ಮಹಾ ಪುರುಷರು ಸ್ವಾರ್ಥ ಬದಿಗೊತ್ತಿ ಸಮಾಜದ ಒಳಿತಾಗಿ ಬದುಕು ಸವಿಸಿದ್ದಾರೆ. ಶೋಷಿತ ಬಂಜಾರ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಂತ ಸೇವಾಲಾಲ್? ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಆಚಾರ, ವಿಚಾರ, ಧರ್ಮಬೋಧನೆ ಮಾಡಿ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದಾರೆ ಎಂದರು.

ಬAಜಾರ ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕು.ಬಂಜಾರ ತಾಂಡಗಳು ಶೇ ೧೦೦ ರಷ್ಟು ಕಂದಾಯ ಗ್ರಾಮಗಳಾಗಬೇಕು.ತಾಂಡಗಳಿಗೆ ಆಧುನಿಕ ಮೆರಗು, ಎಲ್ಲಾ ರೀತಿ ಯಲ್ಲೂ ಶಾಲೆ, ನೀರು, ವಿದ್ಯುತ್, ಬ್ಯಾಂಕ್ ಸೇವೆ, ಹಾಲಿನ ಡೈರಿ, ಸೈಬರ್ ಸೆಂಟರ್, ಗ್ರಂಥಾ ಲಯ, ವೈದ್ಯಕೀಯ ಸೇವೆ, ಕಸೂತಿ ಕೇಂದ್ರ, ಕಲಾಕೇಂದ್ರ, ಅತ್ಯಾಚಾರ ಮುಕ್ತ ವಾತಾವ ರಣದ ಜೊತೆಗೆ ಶೋಷಣೆ ಇಲ್ಲದ ಜಾತೀಯತೆ ಇಲ್ಲದ ಸಮಾಜ ಬಯಸುತ್ತೇವೆ. ತಾಂಡ ಗಳತ್ತ ಸರ್ಕಾರಗಳು ಗಮನ ಹರಿಸಬೇಕು. ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕದAತಹ ಅನೇಕ ಅಂಶಗಳನ್ನು ಸರ್ಕಾರ ಪರಿಗಣಿಸಿ ಪ್ರೋತ್ಸಾಹ ನೀಡುವುದು ಒಳಿತು.ಬಾಗೇಪಲ್ಲಿ ತಾಲ್ಲೂಕಿನಲ್ಲಿ೪೦ ಕ್ಕೂ ಹೆಚ್ಚಿನ ಲಂಬಾಣಿ ತಾಂಡಗಳು ಇಂದಿಗೂ ಸಂಪೂರ್ಣ ರೆವಿನ್ಯೂ ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವುದಿಲ್ಲ. ಹೀಗಾಗಿ ಸರ್ಕಾರದ ಬಹುತೇಕ ಸೌಲತ್ತಿನಿಂದ ಸಮುದಾಯ ವಂಚಿತವಾಗಿದೆ.ತಾಲೂಕು ಆಡಳಿತ ಇತ್ತ ಗಮನ ಹರಿಸುವುದು ಮುಖ್ಯ ಎಂದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಬಂಜಾರ(ಲಂಬಾಣಿ) ಸಮುದಾ ಯಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯವಾಗದ ರೀತಿಯಲ್ಲಿ ನಾಗಮೋಹನ್ ದಾಸ್ ಸಮಿತಿ ಉvಪ್ರಾಮಾಣಿಕವಾದ, ವಾಸ್ತವವಾದ ಸಿಫಾರಸ್ಸುಗಳನ್ನು ಮಾಡುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಸಂತ ಸೇವಾಲಾಲ್ ಅವರ ಭಾವಚಿತ್ರವನ್ನು ಪಟ್ಟಣದ ಡಿ.ವಿ.ಜಿ.ರಸ್ತೆಯ ಉದ್ದಕ್ಕೂ ಜಾನಪದ ಕಲಾತಂಡಗಳು ಹಾಗೂ ಪಲ್ಲಕ್ಕಿಗಳು ಮತ್ತು ಸ್ತಬ್ಧ ಚಿತ್ರಗಳೊಂದಿಗೆ ಬ್ರಹತ್ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸಾಗಿ ಬಂದ ಮಹಿಳೆಯರು ಮಕ್ಕಳು ಸಮುದಾಯ ಲಂಬಾಣಿ ನೃತ್ಯವನ್ನು ಮಾಡುತ್ತಾ, ಸೇವಾಲಾಲರ ಭಜನೆಯೊಂದಿಗೆ  ವೇದಿಕೆ ಕಾರ್ಯಕ್ರಮದವರೆಗೂ ಸಾಗಿದ್ದು ಸಾರ್ವಜನಿಕರ ಗಮನ ಸಳೆದವು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀ ನರಸಿಂಹಪ್ಪ ಪುರಸಭೆ ಅದ್ಯಕ್ಷ ಎ.ಶ್ರೀನಿವಾಸ್, ಪುರಸಭೆ ಸದಸ್ಯರಾದ ಎ.ನಂಜುಂಡಪ್ಪ, ಮಂಜುನಾಥ ರೆಡ್ಡಿ, ಶ್ರೀನಿವಾಸ್ ನಾಯಕ್, ಗೋಪಿ ನಾಯಕ್, ವಕೀಲರಾದ ಅನಂತ ನಾಯಕ್, ವೀಣಾಪಾಣಿ ಎಸ್.ನಾಯಕ್, ಕಿರಣ್ ನಾಯಕ್, ನಾರಾಯಣ್ ನಾಯಕ್ ,ಬಾಂಬೆ ನಾರಾಯಣ ನಾಯಕ್, ಗೊರ್ತ್ತಪಲ್ಲಿ ಶ್ರೀನಿವಾಸ್ ನಾಯಕ್ ಹಾಗೂ ಸಂತ ಸೇವಾಲಾಲ್ ಸಮುದಾಯ ದವರು ಹಾಜರಿದ್ದರು.