ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ನವೋದಯ ಶಾಲೆಯ ಪರಿಸರ ಮೆಚ್ಚಿ ಸಿಬ್ಬಂದಿಯನ್ನು ಶ್ಲಾಘಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚೇಳೂರಿನಂತಹ ಆರ್ಥಿಕವಾಗಿ ಹಿಂದುಳಿದ ಪ್ರದೇಶದಲ್ಲಿರುವ ಈ ಶಾಲೆ ಬಡಮಕ್ಕಳನ್ನು ಶೈಕ್ಷಣಿವಾಗಿ ಬಲಿಷ್ಠಗೊಳಿಸುವ ಕೆಲಸವನ್ನು ಮಾಡುತ್ತಿರುವುದನ್ನು ಕಂಡಿದ್ದೇನೆ. ಎಸ್‌ಎಸ್‌ ಎಲ್‌ಸಿ ಪಿಯುಸಿವರೆಗೆ ಓದುವ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಜತೆಗೆ ಸಾಧಿಸುವ ಹಂಬಲ ಹೊಂದುವುದು ಮುಖ್ಯ.ಕಂಡ ಕನಸು ನನಸು ಮಾಡಿಕೊಳ್ಳಲು ಗುರುಗಳ ಮಾರ್ಗದರ್ಶನ ಪಡೆದರೆ ಸಮಾಜಕ್ಕೆ ಬೇಕಾದ ವ್ಯಕ್ತಿಗಳಾಗಿ ಬೆಳೆಯಬಹುದು ಎಂದರು

ಏನಿಗದಲೆಯ ಜವಹರ್ ನವೋದಯ ಶಾಲೆಯಲ್ಲಿ ವಾರ್ಷಿಕೋತ್ಸವ

ಚೇಳೂರು ತಾಲೂಕಿನ ಏನಿಗದಲೆ ಜೆ.ಎನ್.ವಿ. ಆವರಣದಲ್ಲಿ ಶಾಲಾ ವಾರ್ಷಿಕ ತಪಾಸಣೆಯ ಸಮಾರಂಭವನ್ನು ಉದ್ಘಾಟಿಸುತ್ತಿರುವ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ. ತಹಸೀಲ್ದಾರ್ ಎವಿಎಸ್ ನಾಯುಡು.

Profile Ashok Nayak Feb 20, 2025 9:08 PM

ಚೇಳೂರು: ತಾಲೂಕಿನ ಏನಿಗದಲೆ ಜವಹಾರ್ ನವೋದಯ ವಿದ್ಯಾ ಶಾಲೆಯಲ್ಲಿ ಏರ್ಪ ಡಿಸಿದ್ದ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಿದ್ಯಾರ್ಥಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿದ ಪ್ರಾಶುಂಪಾಲ ಟಿ.ಪಳೀನಿ ವೇಲು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮೈದಾನವನ್ನು ಪರೀಶೀಲಿಸಿದ ಜಿಲ್ಲಾಧಿಕಾರಿಗಳು ಶಾಲಾವರಣದ ಒಳಗೆ ಶಿಕ್ಷಕರೇ ತರಕಾರಿ, ಶೇಂಗಾ, ತರಕಾರಿ ಇತ್ಯಾದಿ ಬೆಳೆಗಳನ್ನು ಬೆಳೆಯುವ ಜೊತೆಗೆ ಹಸಿರಿನ ವಾತಾ ವರಣ ಸೃಷ್ಟಿಸಿರುವುದನ್ನು ನೋಡಿ ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ಹೊಗಳಿ ದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಚೇಳೂರಿನಂತಹ ಆರ್ಥಿಕವಾಗಿ ಹಿಂದುಳಿದ ಪ್ರದೇಶದಲ್ಲಿರುವ ಈ ಶಾಲೆ ಬಡಮಕ್ಕಳನ್ನು ಶೈಕ್ಷಣಿವಾಗಿ ಬಲಿಷ್ಠಗೊಳಿಸುವ ಕೆಲಸವನ್ನು ಮಾಡುತ್ತಿರುವುದನ್ನು ಕಂಡಿದ್ದೇನೆ. ಎಸ್‌ಎಸ್‌ಎಲ್‌ಸಿ ಪಿಯುಸಿವರೆಗೆ ಓದುವ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿ ಕೊಳ್ಳುವ ಜತೆಗೆ ಸಾಧಿಸುವ ಹಂಬಲ ಹೊಂದುವುದು ಮುಖ್ಯ.ಕಂಡ ಕನಸು ನನಸು ಮಾಡಿಕೊಳ್ಳಲು ಗುರುಗಳ ಮಾರ್ಗದರ್ಶನ ಪಡೆದರೆ ಸಮಾಜಕ್ಕೆ ಬೇಕಾದ ವ್ಯಕ್ತಿಗಳಾಗಿ ಬೆಳೆಯಬಹುದು ಎಂದರು.

ಇದನ್ನೂ ಓದಿ: Chikkaballapur News: ಕೃಷ್ಣಾ ನದಿ ನೀರು ಯೋಜನೆ ಈ ಬಾರಿ ಬಜೆಟ್‌ನಲ್ಲಾದರೂ ಪರಿಹಾರ ಸಿಗುವುದೇ ಎಂಬುದು ನಾಗರಿಕರ ಪ್ರಶ್ನೆ

ಜಿಲ್ಲಾ ಆರೋಗ್ಯಧಿಕಾರಿ ಡಾ.ಮಹೇಶ್‌ಬಾಬು  ಮಾತನಾಡಿ ಗುರಿಯಿಟ್ಟು ಸಾಧನೆ ಮಾಡಿದ ಮಕ್ಕಳಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ತಮ್ಮ ಗುರಿ ಮುಟ್ಟ ಲು ಪ್ರಯತ್ನಿಸಿ ಸಫಲತೆಯನ್ನು ಗಳಿಸಬೇಕು.ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ನಿಗದಿತ ಸಮಯದಲ್ಲಿ ಅಭ್ಯಾಸವನ್ನು ಮಾಡಿ. ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಪರೀಕ್ಷೆಯನ್ನು ಬರೆಯಿರಿ. ನಿಮ್ಮ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಪಡೆದು ಉತ್ತಮ ಫಲಿತಾಂಶವನ್ನು ತಮ್ಮದಾಗಿಸಿ ಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿಗಳನ್ನು ಚೇಳೂರು ತಾಲೂಕಿನ ಚಿಂತಮಾ ಕಲಪಲ್ಲಿ ಗಡಿಯಿಂದ ಚೇಳೂರು ತಾ. ತಹಸೀಲ್ದಾರ್ ಸಿಬ್ಬಂದಿ ಶಿಷ್ಠಾಚಾರ ಪಾಲಿಸಿ ಸ್ವಾಗತಿಸದರೆ ನವೋದಯ ವಿಧ್ಯಾರ್ಥಿನಿಯರು  ಶಾಲಾ ಆವರಣದಿಂದ ವೇದಿಕೆಯ ತನಕ ಕಳಶಗಳನ್ನು ಹೊತ್ತುಕೊಂಡು ಪೂರ್ಣ ಕುಂಭದೊAದಿಗೆ ಆತ್ಮೀಯವಾಗಿ ಬರ ಮಾಡಿ ಕೊಂಡರು.

ಇದೇ ವೇಳೆ ಶಾಲೆಯ ಕಾಪೌಂಡ್ ಎತ್ತರಕ್ಕೇರಿಸುವುದು, ಶಾಲೆಯಿಂದ ಚೇಳೂರು- ಚಿಂತಾಮಣಿ ಮುಖ್ಯ ರಸ್ತೆಗೆ ಟಾರ್ ರಸ್ತೆ ಮಾಡುವುದು, ನವೋದಯ ಶಾಲೆ ಮತ್ತು ಕೌಶಲ್ಯ ಅಭಿವೃದ್ದಿಗೆ ಇರುವ ಜಮೀನು ದುರಸ್ತಿ ಮಾಡಿಸಿಕೊಡಲು ಡಿಸಿ ಅವರಿಗೆ ಮನವಿ ಮಾಡ ಲಾಯಿತು.

ಈ ಸಮಾರಂಭದಲ್ಲಿ ಚೇಳೂರು ತಾಲೂಕು ತಹಸೀಲ್ದಾರ್ ಶ್ರೀನಿವಾಸನಾಯುಡು. ಚೇಳೂ ರು ರೆವಿನ್ಯೂ ಅಧಿಕಾರಿ ಎಂ.ಎನ್.ಈಶ್ವರ್. ನವೋದಯ ಶಾಲೆಯ ಪ್ರಾಂಶುಪಾಲ ಟಿ.ಪಳ ನಿವೇಲು. ಪೊಷಕರಾದ ಸೋಮಶೇಖರ್ ಶಿಕ್ಷಕರು. ಸಿಬ್ಬಂದಿ. ಹಾಜರಿದ್ದರು.