ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೌಲ್ಯಮಾಪನ ಕುಲಸಚಿವರಾಗಿ ಲೋಕನಾಥ್ ಅಧಿಕಾರ ಸ್ವೀಕಾರ

ಉನ್ನತ ಶಿಕ್ಷಣ ಇಲಾಖೆ ಇವರ ನೇಮಕಮಾಡಿ ಆದೇಶ ಹೊರಡಿಸಿದ್ದು ಕುಲಪತಿ ನಿರಂಜನವಾನಳ್ಳಿ ಅವರ ಸಮ್ಮುಖದಲ್ಲಿ ಅವರು ಅಧಿಕಾರ ವಹಿಸಿಕೊಂಡಿದ್ದು ಪರೀಕ್ಷಾಂಗ, ಮೌಲ್ಯಮಾಪನ ಎರಡೂ ಕೂಡ ಮಹತ್ವದ ವಿಭಾಗಳು. ಇದರ ಮುಖವಾಣಿಯಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವ ಮೂಲಕ ವಿಶ್ವವಿದ್ಯಾಲಯದ ಘನತೆ ಕಾಪಾಡಿ ಎಂದು ಕುಪತಿಗಳು ಹಾರೈಸಿದ್ದಾರೆ

ಮೌಲ್ಯಮಾಪನ ಕುಲಸಚಿವರಾಗಿ ಲೋಕನಾಥ್ ಅಧಿಕಾರ ಸ್ವೀಕಾರ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ನೂತನ ಕುಲಸಚಿವರಾಗಿ ಕಾಲೇಜು ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಲೋಕನಾಥ್ ನೇಮಕವಾಗಿದ್ದಾರೆ.

Profile Ashok Nayak Apr 14, 2025 2:45 PM

ಚಿಕ್ಕಬಳ್ಳಾಪುರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ನೂತನ ಕುಲಸಚಿವರಾಗಿ ಕಾಲೇಜು ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಲೋಕನಾಥ್  ನೇಮಕ ವಾಗಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಇವರ ನೇಮಕಮಾಡಿ ಆದೇಶ ಹೊರಡಿಸಿದ್ದು ಕುಲಪತಿ ನಿರಂಜನವಾನಳ್ಳಿ ಅವರ ಸಮ್ಮುಖದಲ್ಲಿ ಅವರು ಅಧಿಕಾರ ವಹಿಸಿಕೊಂಡಿದ್ದು ಪರೀಕ್ಷಾಂಗ, ಮೌಲ್ಯಮಾಪನ ಎರಡೂ ಕೂಡ ಮಹತ್ವದ ವಿಭಾಗಳು. ಇದರ ಮುಖವಾಣಿಯಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವ ಮೂಲಕ ವಿಶ್ವವಿದ್ಯಾಲಯದ ಘನತೆ ಕಾಪಾಡಿ ಎಂದು ಕುಪತಿಗಳು ಹಾರೈಸಿದ್ದಾರೆ.

ಇದನ್ನೂ ಓದಿ: Tumkur (Chikkanayakanahalli) News: ಮೊದಲೇ ಗುರುತಿಸಿದ್ದ ಸ್ಥಳದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು

ಲೋಕನಾಥ್ ಅವರು ನಗರ ಹೊರವಲಯ ಹೊನ್ನೇನಹಳ್ಳಿ ಬಳಿಯಿರುವ ಉತ್ತರ ವಿಶ್ವವಿದ್ಯಾ ಲಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮಾಜಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿ ಬೋಧನೆ, ಮೌಲ್ಯಮಾಪನ,ಸಂಶೋಧನೆ ಈ ಮೂರು ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.ಇವರ ಕರ್ತವ್ಯ ನಿಷ್ಟೆ,ಶೈಕ್ಷಣಿಕ ಸಾಧನೆ,ಸೇವಾಮನೋಭಾವವನ್ನು ಗುರುತಿಸಿ ಉನ್ನತ ಶಿಕ್ಷಣ ಇಲಾಖೆ ಮೌಲ್ಯಮಾಪನ ವಿಭಾಗದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಇವರ ಅವಧಿಯಲ್ಲಾದರೂ ಉತ್ತರ ವಿಶ್ವವಿದ್ಯಾಲಯದ ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ, ಅಂಕಪಟ್ಟಿಗಳು ಸಕಾಲದಲ್ಲಿ ದೊರೆಯುವಂತಾಗಲಿ ಎನ್ನುವುದು ವಿದ್ಯಾರ್ಥಿ ಸಂಘಟನೆಗಳು ಮತ್ತು ಬೋಧಕ ಸಂಘಟನೆಗಳ ಅಭಿಪ್ರಾಯವಾಗಿದೆ.