ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯ; ಡಾ. ವೀರೇಂದ್ರ ಹೆಗ್ಗಡೆಯವರ ಸಾಧನೆಗೆ ಮತ್ತೊಂದು ಗರಿ
Manjusha Museum: ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಾಧನೆಯೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಟ ಸೇರಿದೆ. ಒಬ್ಬನೆ ವ್ಯಕ್ತಿ ಕಳೆದ 50 ವರ್ಷಗಳಲ್ಲಿ ನಮ್ಮ ಭವ್ಯ ಇತಿಹಾಸ, ಕಲೆ, ಸಂಸ್ಕೃತಿಗೆ ಅಪೂರ್ವ ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಟ ದಾಖಲೆಯಾಗಿದೆ ಎಂದು ಪ್ರಮಾಣ ಪತ್ರ ನೀಡಲಾಗಿದೆ.
![Profile](https://vishwavani.news/static/img/user.5c7ca8245eec.png)
ಮಂಗಳೂರು: ಧರ್ಮಸ್ಥಳ (Dharmasthala) ಲಕ್ಷ ದೀಪೋತ್ಸವ 2024 ಸಂಭ್ರಮದ ನಡುವೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ (Veerendra Heggade) ಅವರ ಸಾಧನೆಯೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ (India Book Of Record) ಪುಟ ಸೇರಿದೆ. ಒಬ್ಬನೆ ವ್ಯಕ್ತಿ ಕಳೆದ 50 ವರ್ಷಗಳಲ್ಲಿ ನಮ್ಮ ಭವ್ಯ ಇತಿಹಾಸ, ಕಲೆ, ಸಂಸ್ಕೃತಿಗೆ ಅಪೂರ್ವ ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಟ ದಾಖಲೆಯಾಗಿದೆ ಎಂದು ಪ್ರಮಾಣ ಪತ್ರ ನೀಡಲಾಗಿದೆ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ರೂಪಿಸಿದ ಅಪೂರ್ವ ʼಮಂಜೂಷಾʼ ವಸ್ತುಸಂಗ್ರಹಾಲಯ(Manjusha Museum) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ವಿಶೇಷ ಮಾನ್ಯತೆಗೆ ಪಾತ್ರವಾಗಿದೆ.
ಒಬ್ಬನೆ ವ್ಯಕ್ತಿ ಕಳೆದ 50 ವರ್ಷಗಳಲ್ಲಿ ನಮ್ಮ ಭವ್ಯ ಇತಿಹಾಸ, ಕಲೆ, ಸಂಸ್ಕೃತಿಗೆ ಅಪೂರ್ವ ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಠ ಸೇವೆಯಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಸ್ತುಸಂಗ್ರಹಾಲಯದ ವಿಶೇಷಗಳಿವು
7.500 ತಾಳೆಗರಿ ಹಸ್ತಪ್ರತಿಗಳು, 21,000 ಕಲಾತ್ಮಕ ವಸ್ತುಗಳು, 25,000 ಅಪೂರ್ವ ಪ್ರಾಚೀನ ಗ್ರಂಥಗಳು ಹಾಗೂ 100ಕ್ಕೂ ಮಿಕ್ಕಿ ವಿಂಟೇಜ್ ಕಾರುಗಳ ಸಂಗ್ರಹ ವಸ್ತುಸಂಗ್ರಹಾಲಯದಲ್ಲಿದೆ.
ಮಂಜುಷಾ ವಸ್ತು ಸಂಗ್ರಹಾಲಯ
1989ರಲ್ಲಿ ಸ್ಥಾಪನೆಗೊಂಡ ಸಮಾರು 35 ವರ್ಷಗಳಿಂದ ಜನಾಕರ್ಷಣೆಯ ಕೇಂದ್ರವಾಗಿರುವ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಇದೀಗಲೇ ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ಕಲಾಕೃತಿಗಳು, ದೇವಾಲಯದ ರಥಗಳು, ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಉತ್ತಮ ಸಂಗ್ರಹಗಳಿವೆ. ಮೈಸೂರಿನ ಖ್ಯಾತ ಕಲಾವಿದ, ಜಾನಪದ ಲೇಖಕ ಪಿ. ಆರ್. ತಿಪ್ಪೇಸ್ವಾಮಿ ಅವರ ಅಪಾರ ಶ್ರಮದೊಂದಿಗೆ ಅಭಿವೃದ್ಧಿ ಕಂಡ ಈ ವಸ್ತು ಸಂಗ್ರಹಾಲಯದಲ್ಲಿ ಕ್ರಿ.ಪೂ. 1ನೇ ಶತಮಾನದಷ್ಟು ಹಳೆಯ ಮೌರ್ಯರ ಕಾಲದ ಟೆರಾಕೋಟಾ ನಾಣ್ಯಗಳಿವೆ. 300 ವರ್ಷ ಹಳೆಯದಾದ ವಿದ್ವಾನ್ ವೀಣೆ ಶೇಷಣ್ಣರ ಸಂಗೀತ ವಾದ್ಯಗಳ ವಿವರಗಳನ್ನು ಹೊಂದಿರುವ ಪುರಾತನ ಪುಸ್ತಕವನ್ನು ಸಂಗ್ರಹಿಸಿದೆ. ಇದು ಭಾರತೀಯ ಕಲ್ಲು ಮತ್ತು ಲೋಹದ ಶಿಲ್ಪಕಲೆ, ವರ್ಣಚಿತ್ರಗಳು, ಆಭರಣ ವಸ್ತುಗಳು, ಪೂಜಾ ವಸ್ತುಗಳು ಮತ್ತು ಕರಾವಳಿ ಪ್ರದೇಶದ ಕುಶಲಕರ್ಮಿಗಳು ರಚಿಸಿದ ಉಪಯುಕ್ತ ವಸ್ತುಗಳ ಸಂಗ್ರಹವನ್ನು ಹೊಂದಿದೆ.
ವಿಭಿನ್ನ ಶೈಲಿಯ ಹಳೆಯ ಕಾರುಗಳು
ವಿಭಿನ್ನ ಗಾತ್ರದ ಕೆಮರಾ ಸೇರಿದಂತೆ ಹಲವಾರು ವಿಭಿನ್ನ ಪುರಾತನ ವಸ್ತುಗಳನ್ನು ವಿಶಾಲವಾದ ಜಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕೇವಲ 20 ರೂ. ಪ್ರವೇಶ ಶುಲ್ಕವನ್ನು ಪಡೆದು ಸುಮಾರು 2 ಗಂಟೆಗಳವರೆಗೂ ವೀಕ್ಷಿಸುವಷ್ಟು ವಿಶೇಷ ವಸ್ತುಗಳನ್ನು ಈ ಸಂಗ್ರಹಾಲಯ ಹೊಂದಿದೆ. ಕೊಂಚವೇ ದೂರದಲ್ಲಿ ಸುಮಾರು 100ಕ್ಕೂ ಮಿಕ್ಕಿ ವಿವಿಧ ಕಾರುಗಳ ಸಂಗ್ರಹವನ್ನೂ ಮಾಡಲಾಗಿದೆ. ಕಾರು ಸಂಗ್ರಹಾಲಯದಲ್ಲಿ ಪುರಾತನ ವಾಹನಗಳು ಮತ್ತು ಕಾರುಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದರಲ್ಲಿ ಹೆಚ್ಚಿನವು ಇಂದಿಗೂ ಚಾಲ್ತಿಯಲ್ಲಿವೆ ಎಂಬುದು ವಿಶೇಷ. ಇಲ್ಲಿ ಮನುಸ್ಮೃತಿಯ 7,500 ತಾಳೆ ಎಲೆ ಹಸ್ತಪ್ರತಿಗಳ ವಿಶಿಷ್ಟ ಸಂಗ್ರಹವಿದೆ.
ಅಲ್ಲದೇ ಈ ವಸ್ತುಸಂಗ್ರಹಾಲಯದಲ್ಲಿ ಮೌರ್ಯರ ಕಾಲದ ಟೆರಾಕೋಟಾ ನಾಣ್ಯಗಳು, ಮಂಜುನಾಥ ಸ್ವಾಮಿ ದೇವಸ್ಥಾನದ ಖಾತೆಗಳನ್ನು ಒಳಗೊಂಡಿರುವ ಪುರಾತನ ಪುಸ್ತಕ, 300 ವರ್ಷಗಳ ಹಳೆಯ ವೀಣೆ, ವಿಧ್ವಾನ್ ವೀಣೆ ಶೇಷಣ್ಣನ ಸಂಗೀತ ವಾದ್ಯ, ಕರಾವಳಿ ಪ್ರದೇಶದ ಕುಶಲಕರ್ಮಿಗಳು ರಚಿಸಿದ ಭಾರತೀಯ ಕಲ್ಲು ಮತ್ತು ಲೋಹದ ಶಿಲ್ಪಗಳು, ವರ್ಣಚಿತ್ರಗಳು, ಆಭರಣಗಳ ವಸ್ತುಗಳು, ಪೂಜಾ ವಸ್ತುಗಳು ಮತ್ತು ಉಪಯುಕ್ತ ವಸ್ತುಗಳ ದೊಡ್ಡ ಸಂಗ್ರಹವನ್ನು ಹೊಂದಿದೆ . ವಿವಿಧ ಗಾತ್ರದ ಹಳೆಯ ಕ್ಯಾಮೆರಾಗಳನ್ನು ಇಲ್ಲಿ ಕಾಣಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Vikrant Massey : ವಿಕ್ರಾಂತ್ ಮಾಸ್ಸೆ ನಿವೃತ್ತಿ ಹಿಂದೆ ಇದ್ಯಾ ಆ ಸೀಕ್ರೇಟ್? ನಿರ್ದೇಶಕ ಹೇಳಿದ್ದೇನು?