ಕಾಲೇಜಿಗೆ ಫಸ್ಟ್; ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿನಿ ಸಾಧನೆಗೆ ನೆರವಾದ ಗೃಹಲಕ್ಷ್ಮಿ ಯೋಜನೆ
2nd PUC Result 2025: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ತನ್ನ ಈ ಸಾಧನೆಗೆ ತಾಯಿಗೆ ಬರುವ ಗೃಹಲಕ್ಷ್ಮಿ ಹಣವು ಸಾಕಷ್ಟು ನೆರವಾಗಿದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.


ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಈ ಯೋಜನೆ ಹಣವನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವ ಹಲವು ಗೃಹಲಕ್ಷ್ಮಿಯರ ಯಶೋಗಾಥೆಯನ್ನೂ ಕಾಣುತ್ತಿದ್ದೇವೆ. ಇದೀಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಹೋಳಿ, ದ್ವಿತೀಯ ಪಿಯು (2nd PUC Result 2025) ಕಲಾ ವಿಭಾಗದಲ್ಲಿ 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ತನ್ನ ಈ ಸಾಧನೆಗೆ ತಾಯಿಗೆ ಬರುವ ಗೃಹಲಕ್ಷ್ಮಿ ಹಣವು (Gruha Lakshmi Scheme) ಸಾಕಷ್ಟು ನೆರವಾಗಿದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ತಂದೆ ಇಲ್ಲದ ಕಾರಣ ಪೃಥ್ವಿಯ ತಾಯಿ ಶ್ಯಾಮಲಾ ಹೋಳಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಬರುವ ಗೃಹಲಕ್ಷ್ಮಿ ಹಣವು ಪೃಥ್ವಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಪ್ರತಿದಿನವೂ ಪರಿಪೂರ್ಣ ಶಿಕ್ಷಣಕ್ಕೆ ಹಂಬಲಿಸಿದ ಹೆಣ್ಣು ಮಗಳ ಕನಸು ಈ ಯೋಜನೆಯ ಮೂಲಕ ಸಾಕಾರಗೊಂಡಿದೆ. ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿತ್ತು. ಗೃಹಲಕ್ಷ್ಮಿ ಯೋಜನೆಯು ಆ ಕನಸನ್ನು ಸಾಕಾರಗೊಳಿಸುತ್ತಿದೆ ಎಂದು ಎಂದು ಸರ್ಕಾರ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಹೋಳಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
— DIPR Karnataka (@KarnatakaVarthe) April 9, 2025
ತಂದೆ ಇಲ್ಲದ ಪೃಥ್ವಿಯ ತಾಯಿ ಶ್ಯಾಮಲಾ ಹೋಳಿ ಕೂಲಿ ಕೆಲಸಕ್ಕೆ… pic.twitter.com/8EEu26ZpHH
ಲಾರಿ ಚಾಲಕನ ಮಗಳು ರಾಜ್ಯಕ್ಕೇ ಟಾಪರ್

ಹೊಸಪೇಟೆ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Results 2025) ಮಂಗಳವಾರ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜಯನಗರ ಜಿಲ್ಲೆಯ ಕೊಟ್ಟೂರು ಇಂದು ಕಾಲೇಜು ರಾಜ್ಯಕ್ಕೆ ಪ್ರಥಮ ಹಾಗೂ ಇಟಗಿ ಗ್ರಾಮದ ಪಂಚಮಸಾಲಿ ಕಾಲೇಜಿ ದ್ವಿತೀಯ ಸ್ಥಾನವನ್ನು ಕಾಪಾಡಿಕೊಂಡಿದ್ದು, ಸಂಜನಾ ಬಾಯಿ, ನಿರ್ಮಲಾ ಕ್ರಮವಾಗಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ನಿರೀಕ್ಷೆಯಂತೆ ಕೊಟ್ಟೂರಿನ ಇಂದು ಪಿಯು ಕಾಲೇಜು ತನ್ನ ಘನತೆಯನ್ನು ಎತ್ತಿಹಿಡಿದಿದೆ.
ಜಿಲ್ಲೆಯ ಹೊಸಪೇಟೆ ತಾಲೂಕು ಗುಂಡಾ ಗ್ರಾಮದ ಲಾರಿ ಚಾಲಕ ರಾಮಾನಾಯ್ಕ್ ಹಾಗೂ ಕಾವೇರಿ ಬಾಯಿ ದಂಪತಿ ಪುತ್ರಿ ಹಾಗೂ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ, ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.
ಈ ಸುದ್ದಿಯನ್ನೂ ಓದಿ | 2nd PUC Results 2025: ದ್ವಿತೀಯ ಪಿಯುಸಿ ಫಲಿತಾಂಶ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ದ್ವಿತಿಯ ಸ್ಥಾನ ಪಡೆದ ಕೆ. ನಿರ್ಮಲಾ
ವಿಜಯನಗರ ಜಿಲ್ಲೆಯ ಇಟಗಿಯ ಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ 600ಕ್ಕೆ 596 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದು, ವಿಜಯನಗರ ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.