ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Koppala News: ಈಜಲು ಹೋದ ವೈದ್ಯೆ ನೀರು ಪಾಲು

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಅನನ್ಯ ರಾವ್ ​(26) ನೀರಿನಲ್ಲಿ ಕೊಚ್ಚಿ ಹೋದ ವೈದ್ಯೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.

ಈಜಲು ಹೋದ ಹೈದರಾಬಾದ್‌ ವೈದ್ಯೆ ಕೊಪ್ಪಳದಲ್ಲಿ ನೀರು ಪಾಲು

ತುಂಗಭದ್ರಾ ನದಿ.

Profile Ramesh B Feb 19, 2025 4:25 PM

ಕೊಪ್ಪಳ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ (Koppala News). ಹೈದರಾಬಾದ್ ಮೂಲದ ಅನನ್ಯ ರಾವ್ ​(26) ನೀರಿನಲ್ಲಿ ಕೊಚ್ಚಿ ಹೋದ ವೈದ್ಯೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ‌ ಅನನ್ಯ ರಾವ್ ಮಂಗಳವಾರ (ಫೆ. 18) ಮೂವರು ಸ್ನೇಹಿತರ ಜತೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ದುರಂತ ನಡೆದಿದೆ. ಬುಧವಾರ ಬೆಳಗ್ಗೆ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಅವರು ನೀರು ಪಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನದಿಗೆ ಹಾರಿದ್ದ ಅನನ್ಯ ರಾವ್‌ ಕೊಚ್ಚಿಕೊಂಡು ಹೋಗಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ. ನೀರಲ್ಲಿ ಈಜಲು ಜಿಗಿಯುತ್ತಿರುವ ವಿಡಿಯೊವನ್ನು ಅವರ ಸ್ನೇಹಿತರು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಸುಮಾರು 20 ಅಡಿ ಎತ್ತರದಿಂದ ಅವರು ನದಿಗೆ ಜಿಗಿದು, ಈಜಲು ಯತ್ನಿಸುತ್ತಿರುವ ದೃಶ್ಯ ಈ ವಿಡಿಯೊದಲ್ಲಿ ಸೆರೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



ಕಾರ್ಮಿಕನ ಶವ ನಾಯಿಯಂತೆ ಎಳೆದೊಯ್ದರು!

ಕಲಬುರಗಿ: ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಿಮೆಂಟ್ ಫ್ಯಾಕ್ಟರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಕಾರ್ಮಿಕನ ಮೃತದೇಹವನ್ನು ಸತ್ತ ನಾಯಿಯ ಹೆಣದಂತೆ ಎಳೆದೊಯ್ದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.‌ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಸಿಬ್ಬಂದಿಯೇ ಕಾರ್ಮಿಕನ ಹೆಣವನ್ನು ರಸ್ತೆಯಲ್ಲಿ ದರದರನೆ ಎಳೆದೊಯ್ದಿದ್ದಾರೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಸಿಬ್ಬಂದಿ ಆ ಕಾರ್ಮಿಕನ ಮೃತದೇಹವನ್ನು ನಾಯಿಯ ಹೆಣ ಒಯ್ಯುವಂತೆ ಎಳೆದೊಯ್ದಿದ್ದಾರೆ. ಮೃತರನ್ನು ಬಿಹಾರ ಮೂಲದ ಚಂದನ್ ಸಿಂಗ್ (35) ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Self Harming: ಎರಡು ಮಕ್ಕಳ ತಾಯಿ ಬಾಯ್‌ಫ್ರೆಂಡ್‌ ಜೊತೆ ಪರಾರಿ, ಪತಿ ಆತ್ಮಹತ್ಯೆ

ಚಂದನ್ ಸಿಂಗ್ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಂದನ್ ಸಿಂಗ್ ಮೃತದೇಹವನ್ನು ಸಿಬ್ಬಂದಿ ಪ್ರಾಣಿ ತರ ಎಳೆದುಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.