ಮಂತ್ರಿ ಸ್ಕ್ವೇರ್'ನಲ್ಲಿ ಇಡೀ ತಿಂಗಳು ಚಟುವಟಿಕೆಗಳ ಮೂಲಕ ಕ್ರಿಸ್‍ಮಸ್ ಆಚರಣೆ
ಮಂತ್ರಿ ಸ್ಕ್ವೇರ್'ನಲ್ಲಿ ಇಡೀ ತಿಂಗಳು ಚಟುವಟಿಕೆಗಳ ಮೂಲಕ ಕ್ರಿಸ್‍ಮಸ್ ಆಚರಣೆ
Vishwavani News
Dec 11, 2022 7:10 AM
ಕ್ಯಾರೋಲ್‍ಗಳು, ಮೀಟ್ ಮತ್ತು ಗ್ರೀಟ್ ವಿತ್ ಸಾಂಟಾ, ಜಗ್ಲರ್, ಮಿರರ್ ಮ್ಯಾನ್, ಮ್ಯಾಜಿಕ್ ಶೋ ಮೊದಲಾದ ವಿಶೇಷಗಳು, ಜತೆಗೆ ಡಿಸೆಂಬರ್ 16ರಿಂದ 25ರವರೆಗೆ ಅನೇಕ ಮಂತ್ರಿ ಉಡುಗೊರೆಗಳು –
ಬೆಂಗಳೂರು: ದಕ್ಷಿಣ ಭಾರತದ ಪ್ರತಿಷ್ಠಿತ ಮತ್ತು ಜನ ಅತಿಹೆಚ್ಚು ಪ್ರೀತಿಸುವ ಶಾಪಿಂಗ್ ತಾಣ ಮಂತ್ರಿ ಸ್ಕ್ವೇರ್ ಮಾಲ್, ಡಿಸೆಂಬರ್ 2022ರ 16ರಿಂದ 25ರವರೆಗೆ ಕ್ರಿಸ್‍ಮಸ್ ಆಚರಿಸುತ್ತಿದ್ದು, ಪ್ರತಿದಿನ ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ವಿಂಟರ್ ಮಾರ್ವೆಲ್ ಥೀಮ್‍ನಲ್ಲಿ ವಿವಿಧ ಚಟುವಟಿಕೆಗಳು ನಡೆಯಲಿವೆ.
ಕ್ರಿಸ್‍ಮಸ್ ಕ್ಯಾರೋಲ್ಸ್‍ನಿಂದ ಆರಂಭಗೊಂಡು ವಾದ್ಯ ಸಂಗೀತ, ಮ್ಯಾಜಿಕ್ ಶೋ, ಸಾಂಟಾ ಜತೆ ನಡಿಗೆ, ಜಗ್ಲರ್, ಮಿರರ್ ಮ್ಯಾಜಿಕ್ ಮತ್ತು ಸ್ನೋ ಕ್ವೀನ್ ಮೊದಲಾದ ಚಟುವಟಿಕೆಗಳು ನಡೆಯಲಿವೆ. ಕ್ರಿಸ್‍ಮಸ್ ಸಂಭ್ರಮದ ಉತ್ಸಾಹ ಹೆಚ್ಚಿಸಲು ಮಂತ್ರಿ ಸ್ಕ್ವೇರ್ ಇಡೀ ತಿಂಗಳು `ಶಾಪ್ ಆ್ಯಂಡ್ ವಿನ್’ ಅಭಿಯಾನ ಹಮ್ಮಿಕೊಂಡಿದ್ದು, ರೂ.3999 ಮತ್ತು ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಿದವರು ಬಂಪರ್ ಬಹುಮಾನವಾಗಿ ರಾಯಲ್ ಎನ್‍ಫೀಲ್ಡ್ ಹಂಟರ್ ಅನ್ನು ಗೆಲ್ಲಬಹುದು. ಇದು ಡಿಸೆಂಬರ್ ನಂತರವೂ ಮುಂದುವರಿಯಲಿದ್ದು,ಜನವರಿ 10, 2023ರಂದು ಮುಕ್ತಾಯವಾಗಲಿದೆ. ಶಾಪರ್‍ಗಳಿಗೆ ಸ್ಮರಣೀಯವಾಗಿಸಲು ಕ್ರಿಸ್‍ಮಸ್ ಸಪ್ತಾಹದಲ್ಲಿ ಪ್ರತಿದಿನ ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಮಂತ್ರಿ ಸ್ಕ್ವೇರ್, ಕ್ರಿಸ್‍ಮಸ್ ಆಚರಣೆಯ ಭಾಗವಾಗಿ ಫುಡ್ ಫೆಸ್ಟಿವಲ್ ಮೂಲಕ ಗ್ರಾಹಕರಿಗೆ ಅನನ್ಯ ಅನುಭವವನ್ನು ಒದಗಿಸಲಿದೆ. ಇದು ವಿಶಿಷ್ಟ ಮತ್ತು ಈ ಋತುವಿನ ಭಾರತೀಯ ಆಹಾರ ಪದ್ಧತಿಯ ತಿನಿಸುಗಳನ್ನು ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಮಾಕ್ಷಿ ಮಂತ್ರಿ, ಹೆಡ್-ಮಾರ್ಕೆಂಟಿಘ್ ಮತ್ತು ಲೀಸಿಂಗ್, ಮಂತ್ರಿ ರೀಟೆಲ್ ಡಿವಿಜನ್ ಅವರು ಹೇಳಿದರು, `ಕ್ರಿಸ್‍ಮಸ್ 2022 ಅನ್ನು ಆಚರಿಸುತ್ತಿರುವುದು ನಮಗೆ ಅತೀವ ಆನಂದ ಮತ್ತು ಹೆಮ್ಮೆ ಉಂಟುಮಾಡಿದೆ. ಮಂತ್ರಿ ಸ್ಕ್ವೇರ್ ಅನ್ನು ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಜಾಗತಿಕ ಗುಣಮಟ್ಟದ ಅನುಭವ ನೀಡಬೇಕು ಎಂಬ ಸರಳ ಗುರಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಂದು ನಮ್ಮ ಎಲ್ಲ ವಿಶ್ವಾಸಾರ್ಹ ಗ್ರಾಹಕರಿಗೆ ಅವರು ಸಾಂಕ್ರಾಮಿಕದ ಸಂದರ್ಭದಲ್ಲಿ ನೀಡಿದ ಬೆಂಬಲ ಹಾಗೂ ತೋರಿಸಿದ ಪ್ರೀತಿಗಾಗಿ ಧನ್ಯವಾದ ಸಲ್ಲಿಸಲು ಬಯಸುತ್ತೇವೆ. ನಾವು ನಮ್ಮ ಯಶಸ್ಸನ್ನು ನಮ್ಮ ಗ್ರಾಹಕರ ಜತೆ ಆಚರಿಸಲು ಬಯಸುತ್ತೇವೆ ಮತ್ತು ನಮ್ಮ ಮಾಲ್‍ನಲ್ಲಿ ಅವರನ್ನು ತಿಂಗಳಿಡೀ ನಡೆಯುವ ಅತಿದೊಡ್ಡ ಉತ್ಸವಕ್ಕೆ ಸ್ವಾಗತಿಸಲು ಬಯಸುತ್ತೇವೆ’.