ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಆಕಸ್ಮಿಕವಾಗಿ ಸಿಡಿದ ಗುಂಡು; 3 ವರ್ಷದ ಬಾಲಕ ಸಾವು

ಮಕ್ಕಳು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು 3 ವರ್ಷದ ಮಗು ಮೃತಪಟ್ಟ ಘಟನೆ ನಾಗಮಂಗಲ ತಾಲೂಕಿನ ದೊಂದೆಮಾದಿಹಳ್ಳಿಯ ಕೋಳಿ ಫಾರಂ ಒಂದರಲ್ಲಿ ಭಾನುವಾರ (ಫೆ. 16) ನಡೆದಿದೆ. ಮೃತ ಬಾಲಕನ್ನನ್ನು ಪಶ್ಚಿಮ ಬಂಗಾಳ ಮೂಲಕ ಅಭಿಷೇಕ್‌ (3) ಎಂದು ಗುರುತಿಸಲಾಗಿದೆ.

ಆಕಸ್ಮಿಕವಾಗಿ ಗುಂಡು ಸಿಡಿದು 3 ವರ್ಷದ ಬಾಲಕ ಸಾವು

ಸಾಂದರ್ಭಿಕ ಚಿತ್ರ.

Profile Ramesh B Feb 16, 2025 11:26 PM

ಮಂಡ್ಯ: ಮಕ್ಕಳು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು (Firing) 3 ವರ್ಷದ ಮಗು ಮೃತಪಟ್ಟ ಘಟನೆ ನಾಗಮಂಗಲ ತಾಲೂಕಿನ ದೊಂದೆಮಾದಿಹಳ್ಳಿಯ ಕೋಳಿ ಫಾರಂ ಒಂದರಲ್ಲಿ ಭಾನುವಾರ (ಫೆ. 16) ನಡೆದಿದೆ. ನೈಜ ಗನ್‌ ಎನ್ನುವುದು ತಿಳಿಯದೆ ಮಕ್ಕಳು ಅದರಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎನ್ನಲಾಗಿದೆ. ಮೃತ ಬಾಲಕನ್ನನ್ನು ಪಶ್ಚಿಮ ಬಂಗಾಳ ಮೂಲಕ ಅಭಿಷೇಕ್‌ (3) ಎಂದು ಗುರುತಿಸಲಾಗಿದೆ (Mandya News). ಈತ ಶಶಾಂಕ್‌ ಮತ್ತು ಲಿಪಿಕಾ ದಂಪತಿಯ ಪುತ್ರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಅಭಿಷೇಕ್‌ ತಾಯಿ ಲಿಪಿಕಾಗೂ ಗಾಯವಾಗಿದೆ. ಶಂಕರ್‌ದಾಸ್‌ ಎಂಬವರ ಪುತ್ರ, 13 ವರ್ಷದ ಸುದೀಪ್‌ ದಾಸ್‌ ಆಟವಾಡುತ್ತಿದ್ದಾಗ ಆತನ ಕೈಯಿಂದ ಆಕಸ್ಮಿಕವಾಗಿ ಫೈರಿಂಗ್‌ ಆಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕೋಳಿ ಫಾರಂ ನರಸಿಂಹಮೂರ್ತಿ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಇಲ್ಲಿ ಪಶ್ಚಿಮ ಬಂಗಾಳ ಮೂಲದ ಶಶಾಂಕ್‌ ಮತ್ತು ಲಿಪಿಕಾ ದಂಪತಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಮನೆಗೆ ಸುದೀಪ್‌ ದಾಸ್‌ ಬಂದಿದ್ದಾಗ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿದ್ದ ಅಭಿಷೇಕ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Police Firing: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪಾತಕಿಯ ಕಾಲಿಗೆ ಗುಂಡು

ಬೆಂಗಳೂರಿನಲ್ಲಿ ಪೊಲೀಸ್‌ ಶೂಟೌಟ್‌, ಕೊಲೆ ಆರೋಪಿಯ ಕಾಲಿಗೆ ಗುಂಡು

ಬೆಂಗಳೂರು: ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗುಂಡಿನ ಮೊರೆತ ಕೇಳಿ ಬಂದಿತ್ತು. ಕೊಲೆ ಆರೋಪಿ ಹಾಗೂ ರೌಡಿಶೀಟರ್‌ ಮೇಲೆ ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣೆಯ ಪೊಲೀಸರು ಫೈರಿಂಗ್ ಮಾಡಿ ಆರೆಸ್ಟ್ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು.

ಕೊಲೆ ಆರೋಪಿ, ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಮೇಲೆ ಸರ್ಜಾಪುರ ಪೊಲೀಸರು ಶೂಟ್‌ ಮಾಡಿ ದೊಮ್ಮಸಂದ್ರದ ಬಳಿ ಬಂಧಿಸಿದ್ದರು. ಬೇರೊಬ್ಬ ರೌಡಿಶೀಟರ್‌ ವೆಂಕಟೇಶ್‌ ಎಂಬಾತನ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಆಗ ಪೊಲೀಸರು ಫೈರಿಂಗ್ ಮಾಡಿ ಆರೆಸ್ಟ್‌ ಮಾಡಿದ್ದರು.