ಅಶಾಂತಿ ಸೃಷ್ಟಿಸುವ ಕೆಲಸ ಬೇಡ, ಅವರವರ ಧರ್ಮ ಅವರಿಗೆ ದೊಡ್ಡದು: ಜಗದ್ಗುರು ರಂಭಾಪುರಿ
ಅಶಾಂತಿ ಸೃಷ್ಟಿಸುವ ಕೆಲಸ ಬೇಡ, ಅವರವರ ಧರ್ಮ ಅವರಿಗೆ ದೊಡ್ಡದು: ಜಗದ್ಗುರು ರಂಭಾಪುರಿ
Vishwavani News
Dec 12, 2022 4:05 PM
ಸಿಂಧನೂರು: ಸಾಮಾಜಿಕ ವ್ಯವಸ್ಥೆಯಲ್ಲಿ ಸೌಹಾರ್ದತೆ ಬೆಳೆಯುವುದು ಅವಶ್ಯಕತೆ ಇದೆ, ಜಾತಿ ಜಾತಿಗಳ ಮಧ್ಯೆ ಸಂಘರ್ಷ ಬೆಳೆಯುತ್ತಿರುವುದು ಅಶಾಂತಿಗೆ ಕಾರಣವಾಗುತ್ತದೆ ಎಂದು ಬಾಳೆ ಹೊನ್ನೂರು ರಂಭಾಪುರಿ ಮಠದ ಜಗದ್ಗುರು ಡಾ.ವೀರ ಸೋಮೇಶ್ವರ ಶ್ರೀಗಳು ಹೇಳಿದರು. ಅವರು ನಗರದ ಅಮರೇಗೌಡ ವಿರುಪಾಪುರ ಅವರ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರ ರೊಂದಿಗೆ ಸೋಮವಾರ ಮಾತನಾಡಿದರು.
ರಾಜಕಾರಣಿಗಳು ಜಾತಿ ಸಂಘರ್ಷ ಉಂಟು ಮಾಡುವುದನ್ನು ಬಿಟ್ಟು, ಸೌಹಾರ್ದತೆಯ ಸಾಮರಸ್ಯ ಬೆಳೆಸಲು ಹೆಚ್ಚು ಗಮನಿಸುವುದು ಅಗತ್ಯ ಇದೆ ಎಂದರು. ಸರ್ವ ಜನಾಂಗದ ಶಾಂತಿಯ ತೋಟ ವಾಗಬೇಕು, ಮತಗಳು ಬೇರೆ ಬೇರೆ ಇರಬಹುದು ಧರ್ಮ ಒಂದೇ ಆಗಿದೆ ಅವರವರ ಧರ್ಮ ಸಂಸ್ಕೃತಿ ಅವರಿಗೆ ದೊಡ್ಡದು, ಆದರೆ ಇನ್ನೊಂದು ಧರ್ಮದ ಬಗ್ಗೆ ಟೀಕೆ ಅವಹೇಳನ ಯಾರು ಮಾಡ ಬಾರದು, ನಾವು ಎಲ್ಲರೂ ಒಂದೇ ಎಂಬುವುದು ಏಕೈತೆಯಿಂದ ಬಾಳುವುದು ಭಾರತೀಯ ಸಂಸ್ಕೃತಿ ಆದರ್ಶವಾಗಿದೆ ಎಂದರು. ಮತಕ್ಕಾಗಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ: ಅವರವರ ಮತಗಳನ್ನು ಪಡೆಯುವ ಉದ್ದೇಶದಿಂದ ಜಾತಿ ಜಾತಿ ಎತ್ತಿ ಕಟ್ಟಿ ಅವಾಂತರ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡುವ ಕೆಲಸ ರಾಜಕಾರಣಿಗಳು ಮಾಡುತ್ತಿದ್ದಾರೆ, ಇದಕ್ಕೆ ಯಾರು ಅವಕಾಶ ಕೊಡಬಾರದು ಎಂದರು.
ವೀರಶೈವ ಧರ್ಮಕ್ಕೆ ತನ್ನದೇ ವೈಶಿಷ್ಟತೆ ಇದೆ : ವೀರಶೈವ ಧರ್ಮ ಪ್ರಾಚೀನ ಕಾಲದಿಂದಲೂ ಸಮರಸ್ಯ, ಭಾವನೆಗಳನ್ನು ಬೆಳೆಸುತ್ತಿದೆ, ಜಗದ್ಗುರು ರೇಣುಕಾಚಾರ್ಯ ಪಂಚಾಚಾರ್ಯರು ಮತ್ತು ಬಸವಾದಿ ಶರಣರು ಶ್ರಮಿಸಿದ್ದಾರೆ, ಹಾಗಾಗಿ ವೀರಶೈವ ಧರ್ಮಕ್ಕೆ ತನ್ನದೇ ಆದ ವೈಶಿಷ್ಟತೆ ಸಂಸ್ಕೃತಿ ಇರುವ ಧರ್ಮವಾಗಿದೆ ಎಂದರು. ಯುವಕ-ಯುವತಿಯರು ವೀರಶೈವ ಧರ್ಮ ಪಾಲಿಸಿ : ವೀರಶೈವ ಧರ್ಮದ ಸಂಸ್ಕೃತಿ ಹಾಗೂ ನಡೆ-ನುಡಿ ಸಿದ್ಧಾಂತಗಳನ್ನು ಪ್ರತಿಯೊಬ್ಬ ಯುವಕ- ಯುವತಿಯರು ಪಾಲಿಸಬೇಕು ಆಗ ಮಾತ್ರ ಒಳ್ಳೆಯ ಸಂಸ್ಕೃತಿಯಿಂದ ನಡೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಾಳೆಹೊನ್ನೂರು ಖಾಸಾ ಸಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ,ರಾಯಚೂರು ಶಾಂತ ಮಲ್ಲ ಶಿವಾಚಾರ್ಯ ಸ್ವಾಮೀಜಿ, ಹೆಬ್ಬಾಳದ ಶಿವಪ್ರಕಾಶ್ ಶರಣರು, ರೌಡಕುಂದ ಶಿವಯೋಗಿ ಸ್ವಾಮೀಜಿ, ಬಂಗಾರಿ ಕ್ಯಾಂಪ್ ಸಿದ್ದಾಶ್ರಮದ ಸದಾನಂದ ಸ್ವಾಮೀಜಿ, ಮಾಜಿ ಜಿ.ಪಂ ಸದಸ್ಯ ಅಮರೇಗೌಡ ವಿರುಪಾಪುರ,ನಗರ ಸಭೆ ಮಾಜಿ ಸದಸ್ಯ ಶರಣೆಗೌಡ ಬೆನ್ನೂರು, ಅಮರಯ್ಯ ಸ್ವಾಮಿ, ವೀರೇಶ್ ಯರದಿಹಾಳ, ಸಿದ್ದು ಇತರರು ಇದ್ದರು.