Addanda Cariappa: ನಾಟಕ ಪ್ರದರ್ಶನ ರದ್ದು; ಸಾಣೆಹಳ್ಳಿ ಕಮ್ಯುನಿಸ್ಟ್ ಸ್ವಾಮಿಯ ಡೋಂಗಿತನ ಬಯಲು ಮಾಡುವೆ ಎಂದ ಅಡ್ಡಂಡ ಕಾರ್ಯಪ್ಪ

Addanda Cariappa: ಈ ಹಿಂದೆ ಸಾಣೆಹಳ್ಳಿ ಸ್ವಾಮಿಗಳ ತಂಡದ ʼತುಲಾಭಾರʼ ನಾಟಕದ ಬಗ್ಗೆ ನೀಡಿದ ಹೇಳಿಕೆಯಿಂದ ನನ್ನ ನಾಟಕ ರದ್ದಾಗುವಂತೆ ಕೆಲ ಹಿತಾಸಕ್ತಿಗಳು ಕಾರ್ಯಪ್ರವೃತ್ತವಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಮುಖ್ಯಪಾತ್ರ ಸಾಣೆಹಳ್ಳಿ ಸ್ವಾಮಿ ನನ್ನ ಬಗ್ಗೆ ಹೊರಡಿಸಿರುವ ʼಫತ್ವಾʼ ದಿಂದಾಗಿ ನಾಟಕ ರದ್ದು ಮಾಡಲಾಗಿದೆ ಎಂಬ ವದಂತಿ ಇದೆ ಎಂದು ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

image-32d03d25-495e-41b2-abc6-beb24b683a51.jpg
Profile Prabhakara R Jan 6, 2025 8:56 PM
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜ.8ರಂದು ನಿಗದಿಯಾಗಿದ್ದ ʼಸತ್ಯವನ್ನೇ ಹೇಳುತ್ತೇನೆʼ (Satyavanne Heluttene) ನಾಟಕ ಪ್ರದರ್ಶನ ರದ್ದು ಮಾಡಿರುವುದಕ್ಕೆ ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ (Addanda Cariappa) ಕಿಡಿಕಾರಿದ್ದಾರೆ. ಸಾಣೆಹಳ್ಳಿ ಶ್ರೀಗಳು ನನ್ನ ಬಗ್ಗೆ ಹೊರಡಿಸಿರುವ ʼಫತ್ವಾʼ ದಿಂದಾಗಿ ನಾಟಕ ರದ್ದು ಮಾಡಲಾಗಿದೆ ಎಂಬ ವದಂತಿ ಇದ್ದು, ಜ.10ರಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದು ಸಾಣೆಹಳ್ಳಿ ಕಮ್ಯುನಿಸ್ಟ್ ಸ್ವಾಮಿಯ ಡೋಂಗಿತನ ಬಯಲು ಮಾಡುತ್ತೇನೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ಈ ಬಗ್ಗೆ ಅರಸೀಕೆರೆಯ ಹಿರಿಯ ನಾಗರಿಕರ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಅಡ್ಡಂಡ ಕಾರ್ಯಪ್ಪ ಅವರು, ʼಸತ್ಯವನ್ನೇ ಹೇಳುತ್ತೇನೆʼ ನಾಟಕ ಪ್ರದರ್ಶನ ರದ್ದುಗೊಳಿಸಿದ್ದೇವೆ ಎಂದು ನೀವು ಫೋನ್ ಮೂಲಕ ತಿಳಿಸಿರುವುದರಿಂದ, ನಾಟಕ ಪ್ರದರ್ಶನ ನೀಡಲು ಸಕಲ ರೀತಿಯಿಂದ ಸಜ್ಜಾದ ನನಗೆ ನಿಮ್ಮ ಕರೆಯಿಂದ ಆಘಾತವಾಗಿದೆ ಎಂದಿದ್ದಾರೆ.
ಇದರ ಮೂಲ ಕೆದಕುತ್ತಾ ಹೋದಾಗ ನಾನು ಈ ಹಿಂದೆ ಸಾಣೆಹಳ್ಳಿ ಸ್ವಾಮಿಗಳ ತಂಡದ ʼತುಲಾಭಾರʼ ನಾಟಕದ ಬಗ್ಗೆ ನೀಡಿದ ಹೇಳಿಕೆಯಿಂದ ನನ್ನ ನಾಟಕ ರದ್ದಾಗುವಂತೆ ಕೆಲ ಹಿತಾಸಕ್ತಿಗಳು ಕಾರ್ಯಪ್ರವೃತ್ತವಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಮುಖ್ಯಪಾತ್ರ ಸಾಣೆಹಳ್ಳಿ ಸ್ವಾಮಿ ನನ್ನ ಬಗ್ಗೆ ಹೊರಡಿಸಿರುವ ʼಫತ್ವಾʼ ದಿಂದಾಗಿ ನಾಟಕ ರದ್ದು ಮಾಡಲಾಗಿದೆ ಎಂಬ ವದಂತಿ ಇದೆ ಎಂದಿದ್ದಾರೆ.
ನನಗೂ ಸಾಣೆಹಳ್ಳಿಯ ನಾಟಕದ ರೂವಾರಿಗಳಿಗೆ ತತ್ವ ಮತ್ತು ಧ್ಯೇಯಗಳಿಗೂ ವ್ಯತ್ಯಾಸವಿದ್ದರೂ ಶ್ರೀಗಳು ಭಾರತದ ಸಂವಿಧಾನದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವು ಒಬ್ಬ ರಂಗಭೂಮಿ ನಾಟಕ ನಿರ್ದೇಶಕನ ಮತ್ತು ನನ್ನ ತಂಡದ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲವೆಂದು ಭಾವಿಸುತ್ತೇನೆ. ಸೈದ್ಧಾಂತಿಕ ಚರ್ಚೆಗೆ ನಾನು ಮುಕ್ತವಾಗಿದ್ದೇನೆ. ಒಂದು ವೇಳೆ ಶ್ರೀಗಳ ಅನುಯಾಯಿಗಳು ಶ್ರೀಗಳ ನಿರೀಕ್ಷೆ ಮತ್ತು ಆಶಯವನ್ನು ತಪ್ಪಾಗಿ ಭಾವಿಸಿದ್ದರೆ ಈ ಎಲ್ಲಾ ವಿಚಾರವನ್ನು ಅರ್ಥೈಸಿಕೊಂಡು ನಾಟಕ ನಡೆಸಲು ಅವಕಾಶ ಮಾಡಿ ರಂಗಭೂಮಿಗೂ, ಈ ನೆಲದ ನಾಡಿನ ಸಂವಿಧಾನಕ್ಕೂ ಗೌರವಿಸಬೇಕೆಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
ನಾಟಕ ರದ್ದಾಗಿದೆ, ನಾನು ಜ. 10 ರಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದು ಸಾಣೆಹಳ್ಳಿ ಕಮ್ಯುನಿಸ್ಟ್ ಸ್ವಾಮಿಯ ಡೋಂಗಿತನ ಬಯಲು ಮಾಡುತ್ತೇನೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ಸಾಣೇಹಳ್ಳಿ ಸ್ವಾಮೀಜಿ ಒಬ್ಬ ʼಕಮ್ಯುನಿಸ್ಟ್ʼ ಸ್ವಾಮೀಜಿ
ಸಾಣೇಹಳ್ಳಿ ಮಠದ 'ಶಿವಸಂಚಾರ' ಸಂಸ್ಥೆ ಪ್ರದರ್ಶನ ಮಾಡುತ್ತಿರುವ 'ತುಲಾಭಾರ' ನಾಟಕದ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಒಬ್ಬ "ಕಮ್ಯುನಿಸ್ಟ್" ಸ್ವಾಮೀಜಿ, ಹಿಂದೂ ಧರ್ಮವನ್ನು ಅವಮಾನಿಸುವುದು, ಅದರ ಬಗ್ಗೆ ದ್ವೇಷ ಹರಡುವುದು ಅವರ ಅಜೆಂಡಾ ಆರೋಪಿಸಿದ್ದರು.
ಶ್ರೀಗಳ ಡೊಂಗಿ ಜಾತ್ಯತೀಯತೆ, ಪ್ರಗತಿಪರ ಧೋರಣೆಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದೆ. ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದ ಚಳ್ಳಕೆರೆಯ ಪ್ರಶಸ್ತಿ ವಿಜೇತ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಅನುಭವ ಆಧಾರಿತ ನಾಟಕ 'ತುಲಾಭಾರ' ಆಗಿದೆ. ಆದರೆ ಇದರಲ್ಲಿ ಬ್ರಾಹ್ಮಣ ಪಾತ್ರದಾರಿಯ ಬದಲು ಮುಸ್ಲಿಂ ಪಾತ್ರ ಇದೆ. ನಾಟಕದಲ್ಲಿ ಒಬ್ಬ ಮುಸಲ್ಮಾನ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾನೆ. ರಂಜಾನ್, ಈದ್ ಮಿಲಾದ್ ಮುಂತಾದ ಹಬ್ಬಗಳ ಪಾವಿತ್ರ್ಯತೆಯನ್ನೂ ಮಕ್ಕಳಿಗೆ ಕಲಿಸುತ್ತಾನೆ. ಆದರೆ, ಶಿಕ್ಷಣ ಕ್ರಾಂತಿ ಮಾಡಿದ್ದು ಬ್ರಾಹ್ಮಣ ಅಂತ ನಾಟಕದಲ್ಲಿ ತೋರಿಸಿದರೆ ಅದು ಹಿಂದೂ ಧರ್ಮದ ಭಾಗವಾಗುತ್ತದೆ. ನಿಮ್ಮ ಜಾತ್ಯಾತೀಯತೆ ಪ್ರಗತಿಪರ ಧೋರಣೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಮುಸುಲ್ಮಾನ ಶ್ರೇಷ್ಠ ಎಂದು ತೋರಿಸಲು ಇದನ್ನು ಮಾಡಿದ್ದೀರಿ ಎಂದು ಸಾಣೇಹಳ್ಳಿ ಶ್ರೀಗಳ ವಿರುದ್ಧ ಅಡ್ಡಂಡ ಕಾರ್ಯಪ್ಪ ಕಿಡಿಕಾರಿದ್ದರು.
ಈ ಸಂಕುಚಿತ ಸ್ವಾಮೀಜಿಯ ಡೋಂಗಿ ಜಾತ್ಯತೀಯತೆ ಮತ್ತು ಪ್ರಗತಿಪರ ಧೋರಣೆಯನ್ನು ಖಂಡಿಸುತ್ತೇನೆ. ಈ ತರಹ ಕಮ್ಯುನಿಸ್ಟ್ ನಾಟಕಕಾರರು ಮಾಡುವ ಕುತಂತ್ರ, ಚೇಷ್ಟೆಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದೆ. ಇದು ಕಳೆದ 60 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಅದಕ್ಕೆ ರಾಷ್ಟ್ರೀಯವಾದಿ ಚಿಂತನೆಯ ನಾಟಕಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.
image-834054d3-8a6c-49df-a82c-0688c826dfdd.jpg
ಸಾಣೆಹಳ್ಳಿ ಶ್ರೀಗಳು ಏನು ಹೇಳಿದ್ದರು?
ಅಡ್ಡಂಡ ಕಾರಿಯಪ್ಪ ಎನ್ನುವ ವ್ಯಕ್ತಿ 2024ರ 'ಶಿವಸಂಚಾರ'ದ ನಾಟಕಗಳಲ್ಲಿ ಒಂದಾದ "ತುಲಾಭಾರ" ನಾಟಕದ ಪೂರ್ಣ ಮಾಹಿತಿ ತಿಳಿಯದೆ, ನಾಟಕ ನೋಡದೆ ಆಡಿರುವ ಅಪ್ರಬುದ್ಧ ಮಾತುಗಳು ಅವರ ಕೊಳಕು ಮನಸ್ಸಿಗೆ ಹಿಡಿದ ಕನ್ನಡಿಯಾಗಿವೆ. ಈ ನಾಟಕದ ಲೇಖಕರು ನಾವಲ್ಲ ಎನ್ನುವ ಪ್ರಾಥಮಿಕ ಜ್ಞಾನವೇ ಅವರಿಗಿಲ್ಲ. ನಾಟಕದ ಲೇಖಕರು ಉತ್ತರ ಕರ್ನಾಟಕದ ಬಿ ಆರ್ ಪೋಲಿಸ್ ಪಾಟೀಲರು. ಆ ನಾಟಕವನ್ನು ರಂಗಭೂಮಿಗೆ ಈಗ ನಿರ್ದೇಶನ ಮಾಡಿರುವವರು ವಿಶ್ವೇಶ್ವರಿ ಹಿರೇಮಠ ಅವರು ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದರು.
ನಾಟಕವನ್ನು ನಾಟಕವನ್ನಾಗಿ ನೋಡಬೇಕೇ ಹೊರತು ಕಾಮಾಲೆ ಕಣ್ಣುಗಳಿಂದ. ಜಾತಿಯ ಭೂತಗನ್ನಡಿಯಿಂದ ನೋಡಬಾರದು ಎನ್ನುವ ವಿವೇಕ ರಂಗಾಯಣದ ನಿರ್ದೇಶಕರಾಗಿದ್ದ ವ್ಯಕ್ತಿಗೆ ಗೊತ್ತಿಲ್ಲ ಎಂದರೆ ಇವರು ಯಾವ ಅರ್ಹತೆಯ ಮೇಲೆ ರಂಗಾಯಣದ ನಿರ್ದೇಶಕರಾಗಿರಬಹುದು? ಆತ್ಮಾವಲೋಕನ ಮಾಡಿಕೊಂಡು ಬೆಳಕಿನತ್ತ ನಡೆಯುವ ಸಂಕಲ್ಪ ಮಾಡಲಿ. ಪೂರ್ವಾಗ್ರಹ ಪೀಡಿತರಾಗಿ ಯಾರನ್ನೂ ಅವಹೇಳನ ಮಾಡಬಾರದು. ಆಕಾಶಕ್ಕೆ ಉಗುಳಿದರೆ ಏನಾಗುತ್ತದೆ ಎಂದು ಹೇಳಬೇಕಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ | Film Festival: ಮಾ.1 ರಿಂದ 8ರವರೆಗೆ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?