Dharmasthala Laksha Deepotsava: ಶ್ರಮ ಸಂಸ್ಕೃತಿಯ ಲೋಪದಿಂದ ಕನ್ನಡ ಸೊರಗುತ್ತಿದೆ; ಶತಾವಧಾನಿ ಆರ್. ಗಣೇಶ್ ವಿಷಾದ
Dharmasthala Laksha Deepotsava: ಇಂದು ಕನ್ನಡದ ಬಗ್ಗೆ ಆಸಕ್ತಿಯಿಂದ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡುವವರಿಲ್ಲ. ವಿಮರ್ಶಕರಿಲ್ಲ. ದಾಕ್ಷಿಣ್ಯ ಮತ್ತು ಭಯದಿಂದ ಯಾವುದೇ ಹೊಸ ಪುಸ್ತಕ ಕಾದಂಬರಿ ಪ್ರಕಟವಾದರೂ ಯಾರೂ ವಿಮರ್ಶೆ ಮಾಡುವ ಗೋಜಿಗೆ ಹೋಗುವುದಿಲ್ಲ...' ಎಂದು ಶತಾವಧಾನಿ ಆರ್ ಗಣೇಶ್ ವಿಷಾದ ವ್ಯಕ್ತಪಡಿಸಿದರು.
Sushmitha Jain
Dec 2, 2024 5:17 PM
ಉಜಿರೆ: 'ಭಾರತ ಜನನನಿಯ ತನುಜಾತೆಯಾದ ಕರ್ನಾಟಕದಲ್ಲಿ (Dharmasthala Laksha Deepotsava) ಶ್ರಮಸಂಸ್ಕೃತಿಯ ಲೋಪದಿಂದಾಗಿ ಕನ್ನಡ ಸೊರಗುತ್ತಿದೆ. ಯಾವುದೇ ಭಾಷೆಗೆ ವಿಚಾರಗಳನ್ನು ಭಾವನೆಗಳನ್ನು ಮತ್ತು ವ್ಯವಹಾರವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸುವ ಶಕ್ತಿ, ಸಾಮರ್ಥ್ಯ ಮತ್ತು ಪ್ರಭುತ್ವ ಇರಬೇಕು. ಈ ದಿಸೆಯಲ್ಲಿ ಪ್ರಾದೇಶಿಕ ವೈವಿಧ್ಯತೆಯ ಸೊಗಡು ಇದ್ದರೂ ಕನ್ನಡ ಸಮೃದ್ಧ ಭಾಷೆಯಾಗಿದೆ. ಪದಸಂಪತ್ತಿಗೆ ಕೊರತೆ ಇಲ್ಲ. ಯಾವುದೇ ಏರಿಳಿತ, ಅಡೆ-ತಡೆ ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ' ಎಂದು ಶತಾವಧಾನಿ ಆರ್. ಗಣೇಶ (R Ganesha) ಹೇಳಿದರು. ಅವರು ನ.30ರಂದು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ (Dharmasthala Laksha Deepotsava) ಸಂದರ್ಭದಲ್ಲಿ ಆಇಂದು ಕನ್ನಡದ ಬಗ್ಗೆ ಆಸಕ್ತಿಯಿಂದ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡುವವರಿಲ್ಲ. ವಿಮರ್ಶಕರಿಲ್ಲ. ದಾಕ್ಷಿಣ್ಯ ಮತ್ತು ಭಯದಿಂದ ಯಾವುದೇ ಹೊಸ ಪುಸ್ತಕ ಕಾದಂಬರಿ ಪ್ರಕಟವಾದರೂ ಯಾರೂ ವಿಮರ್ಶೆ ಮಾಡುವ ಗೋಜಿಗೆ ಹೋಗುವುದಿಲ್ಲ...' ಎಂದು ಯೋಜಿಸಿದ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
'ಯಾವುದೇ ವ್ಯಕ್ತಿ ಕೂಡ ಕನ್ನಡವನ್ನು ಸುಲಭದಲ್ಲಿ ಕಲಿಯಬಹುದು. ಇಂದು ಕನ್ನಡದ ಬಗ್ಗೆ ಆಸಕ್ತಿಯಿಂದ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡುವವರಿಲ್ಲ. ವಿಮರ್ಶಕರಿಲ್ಲ. ದಾಕ್ಷಿಣ್ಯ ಮತ್ತು ಭಯದಿಂದ ಯಾವುದೇ ಹೊಸ ಪುಸ್ತಕ ಕಾದಂಬರಿ ಪ್ರಕಟವಾದರೂ ಯಾರೂ ವಿಮರ್ಶೆ ಮಾಡುವ ಗೋಜಿಗೆ ಹೋಗುವುದಿಲ್ಲ...' ಎಂದು ಅವರು ಇದೇ ಸಂದರ್ಭದಲ್ಲಿ ತಮ್ಮ ಬೇಸರವನ್ನು ಹೊರಹಾಕಿದರು. 'ಎಲ್ಲಾ ಕಲೆಗಳ ಜೀವಾಳ ರಸ. ಆನಂದದ ಮೂಲ ಕಲೆ ಮತ್ತು ಸಾಹಿತ್ಯದಲ್ಲಿದೆ. ಯುವಜನತೆ ಹೆಚ್ಚು ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಇಂದು ಗಮಕಿಗಳು ಕೂಡಾ ಉಪೇಕ್ಷಿತರಾಗಿದ್ದಾರೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಾಹಿತ್ಯ ಸಮಾಜದ ಪ್ರತಿಬಿಂಬ:
ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ ಕನ್ನಡಿಗರ ಶ್ರೀಮಂತ ಸಂಸ್ಕೃತಿಯ ಸಂಕೇತವಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮದ ನಡುವೆ ಅವಿನಾಭಾವ ಸಂಬಂಧವಿದ್ದು ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು (Dr. D Veerendra Heggade) ಹೇಳಿದರು.
ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 'ಸಾಹಿತ್ಯವು ಸರ್ವರಿಗೆ ಹಿತವನ್ನು ಬಯಸುವಂತಿರಬೇಕು. ಯಕ್ಷಗಾನ ಮೇಳದ ಬಯಲಾಟಗಳ ಮೂಲಕ ಕಲೆ, ಸಾಹಿತ್ಯ ಮತ್ತು ಧರ್ಮ ಪ್ರಭಾವನೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಶಾಂತಿವನ ಟ್ರಸ್ಟ್ ನ ಆಶ್ರಯದಲ್ಲಿ ನೈತಿಕ ಮತ್ತು ಮಾನವೀಯಮೌಲ್ಯಗಳನ್ನು ಪ್ರಕಟಿಸಿ ಶಾಲೆಗಳಿಗೆ ವಿತರಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಪುಸ್ತಕ ಓದುವ ಹವ್ಯಾಸ ಬೆಳೆಸಲಾಗುತ್ತದೆ. ಸಾಹಿತ್ಯವನ್ನು ಓದುವ, ಬರೆಯುವ ಮತ್ತು ಸಾಹಿತ್ಯದ ಬಗ್ಯೆ ಚಿಂತನ-ಮಥನ ನಿತ್ಯವೂ ನಡೆಯಬೇಕುʼ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ISKCON Monks Arrested: ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಮತ್ತಿಬ್ಬರು ಸನ್ಯಾಸಿಗಳು ಅರೆಸ್ಟ್
ಇತಿಹಾಸ ಕಾದಂಬರಿಗಳ ಬಗ್ಗೆಯೂ ಪ್ರಾಮಾಣಿಕ ಮೌಲ್ಯಮಾಪನ ಮತ್ತು ವಿಮರ್ಶೆ ಮಾಡಬೇಕು ಎಂದು ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಂಶುಪಾಲ ಉಡುಪಿ ಪಾದೇಕಲ್ಲು ವಿಷ್ಣುಭಟ್ ಹೇಳಿದರು. ಇಂದು ಸಾಹಿತ್ಯದ ವ್ಯಾಪ್ತಿ ತುಂಬಾ ಬೆಳೆಯುತ್ತಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳ ವಿಮರ್ಶೆ ಮತ್ತು ಮೌಲ್ಯಮಾಪನ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಾಚೀನ ಗ್ರಂಥಗಳ ಮುದ್ರಣ, ಸಂಪಾದನೆ ಮತ್ತು ಪ್ರಕಾಶನ ಆಗಬೇಕು. ಕನ್ನಡ ಭಾಷೆಯನ್ನು ಸಮರ್ಪಕವಾಗಿ ನಿರ್ವಹಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಡಾ. ಪ್ರಮೀಳಾ ಮಾಧವ್ “ಸ್ತ್ರೀಯರ ಸ್ವಂತ ಸುಖಕ್ಕೆ ಸಾಹಿತ್ಯದ ಅರಿವಿನ ಅವಶ್ಯಕತೆ” ಬಗ್ಗೆ, ಡಾ. ಬಿ.ವಿ. ವಸಂತ ಕುಮಾರ್ “ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಮಾರ್ಗೋಪಾಯಗಳು” ಎಂಬ ವಿಷಯದ ಬಗ್ಗೆ ಹಾಗೂ ಪ್ರೊ. ಮೊರಬದ ಮಲ್ಲಿಕಾರ್ಜುನ “ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯದ ಅವಶ್ಯಕತೆ ಮತ್ತು ಸಾಹಿತ್ಯವನ್ನು ಜನಪ್ರಿಯಗೊಳಿಸುವ ಮಾರ್ಗೋಪಾಯಗಳು” ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಶೋಕ್ ಕುಮಾರ್ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.
ಸಾಹಿತ್ಯ ಸಮ್ಮೇಳನ ಮುಖ್ಯಾಂಶಗಳು:
- ಭಕ್ತರ ಬಹುಮುಖಿ ಸೇವೆ: ಬೆಂಗಳೂರಿನ 22 ಮಂದಿ ದಾನಿಗಳು ಸೇರಿ 27 ಕೌಂಟರ್‌ಗಳಲ್ಲಿ ಶನಿವಾರ ರಾತ್ರಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು.
- ಕಲಾ ಸೇವೆ : ಬ್ಯಾಂಡ್, ವಾಲಗ, ಡೊಳ್ಳು, ಕೋಲಾಟ, ಶಂಖ, ಕೊಂಬು, ಕಹಳೆ, ಜಾಗಟೆ ಮೊದಲಾದ 4339 ಜಾನಪದ ಕಲಾವಿದರು 1002 ತಂಡಗಳಲ್ಲಿ ಆಹೋರಾತ್ರಿ ಕಲಾ ಸೇವೆ ಮಾಡಿದರು.
- ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಉಜಿರೆಯ ಸೋನಿಯಾ ವರ್ಮ ರಚಿಸಿದ “ಗುಣಗಣಿ-ಗುಣರತ್ನಗಳ ಧಣಿ” ಕೃತಿ ಮತ್ತು ಮಂಜೂಷಾ ವಸ್ತುಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ರಚಿಸಿದ “ಉಪರತ್ನಗಳು ಮತ್ತು ನವರತ್ನಗಳು”ಕೃತಿಯನ್ನು ಬಿಡುಗಡೆಗೊಳಿಸಲಾಯಿತು