Supreme Court: ಇವಿಎಂ ಡೇಟಾಗಳನ್ನು ಅಳಿಸಬೇಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಖಡಕ್ ಸೂಚನೆ!
ಇವಿಎಂ ದತ್ತಾಂಶಗಳನ್ನು ಯಾವುದೇ ಕಾರಣಕ್ಕೂ ಅಳಿಸಬೇಡಿ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಇಂದು(ಫೆ.11) ಸೂಚನೆ ನೀಡಿದೆ. ಮತ ಎಣಿಕೆ ಮುಗಿದ ನಂತರವೂ ಎಲೆಕ್ಟ್ರಾನಿಕ್ ಮತ ಯಂತ್ರಗಳ ದತ್ತಾಂಶವನ್ನು ಅಳಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.
![ಇವಿಎಂ ದತ್ತಾಂಶಗಳನ್ನು ಅಳಿಸಬೇಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ!](https://cdn-vishwavani-prod.hindverse.com/media/original_images/Supreme_Court_4.jpg)
Supreme Court
![Profile](https://vishwavani.news/static/img/user.png)
ನವದೆಹಲಿ: ಇವಿಎಂ(EVM) ದತ್ತಾಂಶಗಳನ್ನು(Data) ಯಾವುದೇ ಕಾರಣಕ್ಕೂ ಅಳಿಸಬೇಡಿ ಎಂದು ಸುಪ್ರೀಂ ಕೋರ್ಟ್(Supreme Court) ಚುನಾವಣಾ ಆಯೋಗಕ್ಕೆ(Election Commission) ಇಂದು(ಫೆ.11) ಸೂಚನೆ ನೀಡಿದೆ. ಮತ ಎಣಿಕೆ ಮುಗಿದ ನಂತರವೂ ಎಲೆಕ್ಟ್ರಾನಿಕ್ ಮತ ಯಂತ್ರಗಳ ದತ್ತಾಂಶವನ್ನು ಅಳಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ. ಸದ್ಯಕ್ಕೆ ಇವಿಎಂನಿಂದ ಯಾವುದೇ ದತ್ತಾಂಶವನ್ನು ಅಳಿಸಬೇಡಿ ಅಥವಾ ಯಾವುದೇ ದತ್ತಾಂಶವನ್ನು ಮರುಲೋಡ್ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ವಿವರವಾಗಿ ಹೇಳಿದೆ.
ಚುನಾವಣೆಯ ನಂತರ ಇವಿಎಂ ಮೆಮೊರಿ ಮತ್ತು ಮೈಕ್ರೋ ಕಂಟ್ರೋಲರ್ ಅನ್ನು ಅಳಿಸುವ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಡಿಆರ್, ಹರಿಯಾಣ ಹಾಗೂ ಕಾಂಗ್ರೆಸ್‌ನ ಒಂದು ಗುಂಪು ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
Don't Delete Data On EVMs Pending Verifications, Reduce Cost For Seeking Verification: Supreme Court Tells ECI https://t.co/SZ3B0rTZ5H
— nikhil wagle (@waglenikhil) February 11, 2025
ವಿಚಾರಣೆ ಸಂದರ್ಭದಲ್ಲಿ ಎಡಿಆರ್ ಪರವಾಗಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಚುನಾವಣಾ ಆಯೋಗ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಇವಿಎಂ ತಂತ್ರಾಂಶದಲ್ಲಿ ದೋಷವಿದ್ದರೆ ಅಥವಾ ತಿರುಚಿರುವ ಆರೋಪದ ಬಗ್ಗೆ ಯಾರಾದರೂ ಅನುಮಾನ ವ್ಯಕ್ತಪಡಿಸಿದರೆ ಈ ಬಗ್ಗೆ ಪರೀಕ್ಷಿಸಲು ಕೋರಬಹುದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ:Narendra Modi: ಫ್ರಾನ್ಸ್‌ನ ಎಐ ಶೃಂಗಸಭೆಯಲ್ಲಿ ಮೋದಿ ಭಾಗಿ- ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮಾತುಕತೆ
ಇವಿಎಂ ಅನ್ನು ನಾಶಗೊಳಿಸುವುದಿಲ್ಲ ಎಂದು ಸಾಬೀತುಪಡಿಸಲು ಇವಿಎಂನ ಆಳಿಸಿದ ಮೆಮೊರಿ ಹಾಗೂ ಮೈಕ್ರೋ ಕಂಟ್ರೋಲರ್ ಅನ್ನು ಇಂಜಿನಿಯರ್ ಪರಿಶೀಲಿಸಬೇಕು ಎಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಸಲ್ಲಿಸಿದರು. ಮುಂದಿನ 15 ದಿನಗಳಲ್ಲಿ ಈ ಬಗ್ಗೆ ವಿವರ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 3 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.