ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆಯುತ್ತಿದ್ದರೂ ಇಲ್ಲೊಂದು ಗ್ರಾಮಕ್ಕೆ ಇದುವರೆಗೂ ರಸ್ತೆ ಸೌಲಭ್ಯ ಇಲ್ಲ

ಬಾಗೇಪಲ್ಲಿ ತಾಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇಶಮಾರ ತಾಂಡ ಗ್ರಾಮವಿದ್ದು, ಈ ಗ್ರಾಮದಲ್ಲಿ ಲಂಬಾಣಿ ಜನಾಂಗಕ್ಕೆ ಸೇರಿದ 25 ಕುಟುಂಬಗಳು ಕೃಷಿ ಅವಲಂಬಿತರಾ ಗಿದ್ದಾರೆ. ಈ ಗ್ರಾಮದಲ್ಲಿ ಶಾಲಾ, ಕಾಲೇಜುಗಳಿಗೆ ಹೋಗುವ 19 ಮಕ್ಕಳು ಸೇರಿ 100 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ.  3 ರಿಂದ 5 ವರ್ಷದ ಮಕ್ಕಳು 9 ಜನ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿರುವ ಮಕ್ಕಳು 10 ಕ್ಕೂ ಹೆಚ್ಚು ಜನ ಇದ್ದಾರೆ.

ಮಕ್ಕಳು ಕಾಲ್ನಡಿಗೆ ಮೂಲಕ ಪರೀಕ್ಷಾ ಕೇಂದ್ರ ತಲುಪುವುದು ಅನಿವಾರ್ಯ

Profile Ashok Nayak Mar 23, 2025 10:37 PM

ಬಾಗೇಪಲ್ಲಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆಯುತ್ತಿದ್ದರೂ ಇಲ್ಲೊಂದು ಗ್ರಾಮಕ್ಕೆ ಇದುವರೆಗೂ ರಸ್ತೆ ಸೌಲಭ್ಯ ಇಲ್ಲ, ಬಸ್ ವ್ಯವಸ್ಥೆ ಇಲ್ಲ, ಶುದ್ದ ನೀರೂ ಇಲ್ಲದಂತಾಗಿದ್ದು ಜಿಲ್ಲಾ ಮತ್ತು ತಾಲೂಕು ಅಡಳಿತ ಯಂತ್ರಾಂಗದ ವೈಪಲ್ಯವೋ.. ಅಧಿಕಾರಿಗಳ ಮತ್ತು ಜನಪ್ರತಿ ನಿಧಿಗಳ ನಿರ್ಲಕ್ಷ್ಯವೋ ಎನ್ನುವುದನ್ನು ಗ್ರಹಿಸಲು ಸಾಧ್ಯವಾಗದಷ್ಟು ದುಸ್ಥಿತಿಯಲ್ಲಿ ದೇಶಮಾರ ತಾಂಡ ಗ್ರಾಮದ 25 ಕುಟುಂಬಗಳು ತಮ್ಮ ದಿನನಿತ್ಯದ ಬದುಕಿನ ಬಂಡಿಯನ್ನು ಬಹಳಷ್ಟು ದುಸ್ಥರದಿಂದ ನಡೆಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಬಾಗೇಪಲ್ಲಿ ತಾಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇಶಮಾರ ತಾಂಡ ಗ್ರಾಮವಿದ್ದು, ಈ ಗ್ರಾಮದಲ್ಲಿ ಲಂಬಾಣಿ ಜನಾಂಗಕ್ಕೆ ಸೇರಿದ 25 ಕುಟುಂಬಗಳು ಕೃಷಿ ಅವಲಂಬಿತರಾಗಿದ್ದಾರೆ. ಈ ಗ್ರಾಮದಲ್ಲಿ ಶಾಲಾ, ಕಾಲೇಜುಗಳಿಗೆ ಹೋಗುವ 19 ಮಕ್ಕಳು ಸೇರಿ 100 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ.  3 ರಿಂದ 5 ವರ್ಷದ ಮಕ್ಕಳು 9 ಜನ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿರುವ ಮಕ್ಕಳು 10 ಕ್ಕೂ ಹೆಚ್ಚು ಜನ ಇದ್ದಾರೆ. ಶಾಲಾ ಮಕ್ಕ ಳಿಂದ ಹಿಡಿದು ವಿವಿಧ ಕೆಲಸಗಳ ನಿಮಿತ್ತ ಪಟ್ಟಣಕ್ಕೆ ತೆರಳುವ ಎಲ್ಲರೂ 4 ಕಿ.ಮೀ ದೂರದ ಗಿಡಗಂಟಿಗಳ ಮತ್ತು ಕಲ್ಲಿನ ಮಾರ್ಗದ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಬರಬೇಕಾದ ಅನಿ ವಾರ್ಯ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ ಎದುರಾಗಿದೆ. ದೇಶಮಾರು ತಾಂಡ ಗ್ರಾಮದಲ್ಲಿ ಗ್ರಾಮ ಪಂಚಾಯತಿವತಿಯಿಂದ ಕೊಳವೆ ಬಾವಿ ಕೊರೆದು ನೀರು ಪೂರೈಸುತ್ತಿರುವುದು, ಕೆಲವು ಕಡೆ ಸಿಸಿ ರಸ್ತೆ ಅಳವಡಿಸಿರುವುದು ಬಿಟ್ಟರೆ ಇತರೆ ಮೂಲ ಸೌಕರ್ಯಗಳು ಇಲ್ಲದಂತಾಗಿದೆ ಎಂಬುದು ಗ್ರಾಮ ಸ್ಥರ ಗಂಬೀರ ಆರೋಪವಾಗಿದೆ.

ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ

ಏಳು ದಶಕಗಳಿಂದ ರಸ್ತೆ ಭಾಗ್ಯ ಇಲ್ಲ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆ ದರೂ ದೇಶಮಾರುತಾಂಡ ತಾಂಡ ಗ್ರಾಮಕ್ಕೆ ಇದುವರೆಗೂ ರಸ್ತೆ ಭಾಗ್ಯ ಇಲ್ಲ, ತುರ್ತುಸೇವೆ ಓದಗಿ ಸುವ ಅಂಬ್ಯುಲೇನ್ಸ್ ವಾಹನ ತಾಂಡ ಗ್ರಾಮಕ್ಕೆ ಹೋಗಬೇಕಾದರೂ ಸಾಧ್ಯವಾಗದಷ್ಟು ದುಸ್ಥಿತಿ ಯಲ್ಲಿ ಈ ಗ್ರಾಮದ ರಸ್ತೆ ಇದೆ, ಕಾಡು ಕಲ್ಲುನಿಂದ ಕೂಡಿರುವ ಹದಗೆಟ್ಟ ಕೊರಕಲು ರಸ್ತೆಯಲ್ಲಿ ಯಾವೊಂದುು ವಾಹನವೂ ಓಡಾಡುವುದಿಲ್ಲ, ಸಾರಿಗೆ ಸಂಸ್ಥೆ ಬಸ್ ಸೌಲಭ್ಯ ಈ ಗ್ರಾಮಕ್ಕೆ ಓದಗಿ ಸಿಲ್ಲದ ಕಾರಣ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳು ಕಾಲ್ನಡಿಗೆ ಮೂಲಕ ಪರೀಕ್ಷಾ ಕೇಂದ್ರ ತಲುಪುವುದು ಅನಿವಾರ್ಯವಾಗಿದೆ.

ಎರಡು ವರ್ಷಗಳಾದರೂ ಉದ್ಘಾಟನೆಗೊಳ್ಳದ ಶುದ್ದೀಕರಣ ಘಟಕ: ದೇಶಮಾರು ತಾಂಡ ಗ್ರಾಮದಲ್ಲಿ ಕಳೆದ 2 ವರ್ಷಗಳ ಹಿಂದೆ ಸರ್ಕಾರದವತಿಯಿಂದ ಕುಡಿಯುವ ನೀರಿನ ಶುದ್ದೀಕರಣ ಘಟಕ ಅಳವಡಿಸಿದ್ದಾರೆ, ಅದರೆ ಅದನ್ನು ಇದುವರೆಗೂ ಉದ್ಘಾಟನೆ ಮಾಡದೆ ನಿರ್ಲಕ್ಷö್ಯ ತೋರುತ್ತಿರುವ ಪರಿಣಾಮ ಶುದ್ದ ಕುಡಿಯುವ ನೀರಿಗಾಗಿ 5 ಕಿ.ಮೀ ದೂರದಲ್ಲಿರುವ ಯಲ್ಲಂಪಲ್ಲಿ ಗ್ರಾಮಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ. ದ್ವಿಚಕ್ರ ವಾಹನ ಇದ್ದವರು ಶುದ್ದ ನೀರು ಕುಡಿದರು ವಾಹನ ಸೌಲಭ್ಯ ಇಲ್ಲದವರು ಕೊಳವೆ ಬಾವಿ ನೀರನ್ನು ಕುಡಿಯುವುದು ಅನಿವಾರ್ಯವಾಗಿದೆ.
  ದೇಶಮಾರು ತಾಂಡ ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಯಲ್ಲಂಪಲ್ಲಿ ಗ್ರಾಮಕ್ಕೆ ದಿನ ನಿತ್ಯ ಕಾಲ್ನಡಿಗೆ ಮೂಲಕ ನಡೆದುಕೊಂಡು ಶಾಲೆಗೆ ಹೋಗಬೇಕು, ಶುದ್ದೀಕರಣ ಘಟಕ ಇಲ್ಲದ ಕಾರಣ ಶುದ್ದ ಕುಡಿಯುವ ನೀರಿಗೂ ಬೇರೆ ಗ್ರಾಮಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಸರ್ಕಾರ ತಾಂಡ ಗ್ರಾಮದ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾಗಿದೆ.

ಅಶ್ವತ್ಥನಾಯಕ್, 10 ನೇ ತರಗತಿ ವಿದ್ಯಾರ್ಥಿ, ದೇಶಮಾರು ತಾಂಡ.

ದೇಶಮಾರು ತಾಂಡ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಅಳವಡಿಸಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕವನ್ನು ಪ್ರಾರಂಭಿಸಬೇಕು, ತಾಂಡ ಗ್ರಾಮದಿಂದ ಬಾಗೇಪಲ್ಲಿ ಪಟ್ಟಣಕ್ಕೆ ಹೋಗಬೇಕಾದರೆ ಸಾರ್ವಜನಿಕ ರಸ್ತೆ ಇಲ್ಲದ ಕಾರಣ ಬಸ್ ಸೌಲಭ್ಯ ಇಲ್ಲ, ಖಾಸಗಿ ಜಮೀನನಿನ ಮಾಲೀಕರು ಗ್ರಾಮಕ್ಕೆ ಅಂಬ್ಯುಲೇನ್ಸ್ ವಾಹನ ಬರಲು ಅಡ್ಡಿಪಡಿಸುತ್ತಾರೆ ಅಂತಹ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟ ಸಂಬAಧಿಕರನ್ನು ತಾಂಡ ಗ್ರಾಮಕ್ಕೆ ವಾಪಸ್ಸು ತರಬೇಕಾದರೆ ತುಂಬಾ ಕಷ್ಟ ಆಗುತ್ತೆ, ತಾಂಡ ಗ್ರಾಮಕ್ಕೆ ಸುಸಜ್ಜಿತ ರಸ್ತೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಲಕ್ಷ್ಮೀ ನಾರಾಯಣ ನಾಯಕ್, ದೇಶಮಾರು ತಾಂಡ.
ದೇಶಮಾರು ತಾಂಡದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕ ಕಾಮಗಾರಿಯ ಗುತ್ತಿಗೇದಾರನ ನಿರ್ಲಕ್ಷ್ಯದ ಕಾರಣ ಘಟಕವನ್ನು ತೆರಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ಜಿ.ಪಂ. ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ತಾಂಡ ಗ್ರಾಮದ ರಸ್ತೆ ಅಭಿವೃದ್ದಿಗೆ ನರೇಗಾ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಿ ರಸ್ತೆ ಸಮಸ್ಯೆಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸಲು ಮುಂದಾಗುತ್ತೇವೆ.

ಪಾಪಿರೆಡ್ಡಿ ಸದಸ್ಯರು, ಕಾನಗಮಾಕಲಪಲ್ಲಿ ಗ್ರಾ.ಪಂ.