ಆರ್ಯವೈಶ್ಯ ಸಮಾಜಕ್ಕೆ ಸರ್ಕಾರದ ಬೆಂಬಲ ಸದಾ ಇರಲಿದೆ: ಎಸ್.ಇ.ಸುಧೀಂದ್ರ
ಸಿದ್ದರಾಮಯ್ಯ ಅವರ ಸರ್ಕಾರ ಆರ್ಯವೈಶ್ಯ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಈ ಸಮಾಜದ ಏನೇ ಅಗತ್ಯಗಳಿದ್ದರೂ ಅದಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಆರ್ಯ ವೈಶ್ಯ ಮಹಾಸಭಾ ಖಾಸಗಿಯಾಗಿ ತಮ್ಮ ಸಮಾಜದಲ್ಲಿ ಬಡವರಿಗೆ, ವಿಶೇಷ ಚೇತನರಿಗೆ, ವಿಧವಾ ಮಹಿಳೆಯರು ಹಾಗೂ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವು ನೀಡುತ್ತಿರು ವುದು ಶ್ಲಾಘನೀಯ.


ಬೆಂಗಳೂರು: ಆರ್ಯವೈಶ್ಯ ಸಮಾಜದ ಏಳ್ಗೆಗೆ ಸರ್ಕಾರದಿಂದ ಸಂಪೂರ್ಣ ಸಹಕಾರ ಇರಲಿದೆ ಎಂದು ಕರ್ನಾಟಕ ಬಯೋ ಎನರ್ಜಿ ಡೆವಲಪ್‌ಮೆಂಟ್ ಬೋರ್ಡ್ ಅಧ್ಯಕ್ಚರಾದ ಎಸ್.ಇ. ಸುಧೀಂದ್ರ ಭರವಸೆ ನೀಡಿದರು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಆಯೋಜಿಸಿದ್ದ “ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್, ವಿಶೇಷ ಚೇತನರಿಗೆ ಮಾಸಾಶನ, ವಿಧವ ಮಹಿಳೆಯರಿಗೆ ಪಿಂಚಣಿ, ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ವಿತರಿಸಿ ಮಾತನಾಡಿದರು.
ಈಗಾಗಲೇ ಸಿದ್ದರಾಮಯ್ಯ ಅವರ ಸರ್ಕಾರ ಆರ್ಯವೈಶ್ಯ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಈ ಸಮಾಜದ ಏನೇ ಅಗತ್ಯಗಳಿದ್ದರೂ ಅದಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಆರ್ಯವೈಶ್ಯ ಮಹಾಸಭಾ ಖಾಸಗಿಯಾಗಿ ತಮ್ಮ ಸಮಾಜದಲ್ಲಿ ಬಡವರಿಗೆ, ವಿಶೇಷ ಚೇತನರಿಗೆ, ವಿಧವಾ ಮಹಿಳೆಯರು ಹಾಗೂ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವು ನೀಡುತ್ತಿರು ವುದು ಶ್ಲಾಘನೀಯ.
ಸರ್ಕಾರದ ಭಾಗವಾಗಿ ಕರ್ನಾಟಕ ಆರ್ಯವೈಶ್ಯ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ, ಆದರೆ ಇದರ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಈ ಸ್ಥಾನ ತುಂಬುವ ಕೆಲಸ ಮಾಡಲಿದ್ದಾರೆ. ಈ ಮಧ್ಯೆ, ಆರ್ಯವೈಶ್ಯ ಮಹಾಸಭಾ ಖಾಸಗಿಯಾಗಿಯೇ ತನ್ನ ಸಮಾಜದ ಸೇವೆ ಮಾಡುತ್ತಿದ್ದು, ಇವರ ಸೇವೆ ಇನ್ನಷ್ಟು ಹೆಚ್ಚಲಿ ಎಂದು ಹೇಳಿದರು.

ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶೆಂಕರ್ ಮಾತನಾಡಿ, ಕಳೆದ ಏಳು ವರ್ಷದಿಂದ ಆರ್ಯವೈಶ್ಯ ಸಮಾಜದ ಬಡವರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಾ ಬಂದಿದೆ, ಮುಂದಿನ ದಿನಗಳಲ್ಲಿ ನಮ್ಮ ಸೇವೆಯನ್ನು ವಿಸ್ತರಿಸುತ್ತಾ ಹೋಗಲಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ೧೮೦ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್ ವಿತರಣೆ, 53 ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ, ಸಂಧ್ಯಶ್ರೀ ಯೋಜನೆಯಡಿ 309 ವಿಧವಾ ಮಾಸಾಶನ, 260 ವಿಶೇಷ ಚೇತನರಿಗೆ ಮಾಸಾಂಶನ, ಹಾಗೂ ಅಮರಜ್ಯೋತಿ ವಿಮೆ ಯನ್ನು ಇದೇ ವೇಳೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್.ವಿ. ಇನ್‌ಸ್ಟಿಟ್ಯೂಟ್ ಜಂಟಿ ಕಾರ್ಯದರ್ಶಿ ಡಿ.ಪಿ.ನಾಗರಾಜ್, ಇಂಡಿಯನ್ ರೈಲ್ವೆ ಆಪರೇಷನ್ ಮ್ಯಾನೇಜರ್ (ಮೈಸೂರು ವಿಭಾಗ)ಸ್. ಹರಿತಾ ಉಪಸ್ಥಿತರಿದ್ದರು.