Man Kill Wife: ಪತ್ನಿಯನ್ನು ಗುಂಡಿಟ್ಟು ಕೊಂದು ಆತ್ಮಹತ್ಯೆಗೆ ಶರಣಾದ ಪತಿ; ಕಾರಣವೇನು?
ಕೃಷ್ಣಕುಮಾರ್ ತನ್ನ ಮಕ್ಕಳನ್ನು ಭೇಟಿ ಮಾಡುವ ಸಲುವಾಗಿ ಕೇರಳದ ವಂಡಾಜಿಯಲ್ಲಿರುವ ತನ್ನ ಕುಟುಂಬದವರ ಮನೆಯಿಂದ ಹೊರಟು ಸುಮಾರು 100 ಕಿ.ಮೀ. ದೂರದ ಕೊಯಮತ್ತೂರಿಗೆ ಪ್ರಯಾಣಿಸಿದ್ದ. ಈ ವೇಳೆ ತನ್ನ ಪತ್ನಿ ಸಂಗೀತಾಳನ್ನು ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆತ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.


ಚೆನ್ನೈ: ಮದುವೆಯಾದ ಬಳಿಕ ದಂಪತಿ ನಡುವೆ ವೈಮನಸ್ಸು ಬರುವುದು ಸಹಜ. ಆದರೆ ಇದೇ ವೈಮನಸ್ಸಿನ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನೇ ಕೊಲೆಗೈದು ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ (Man Kill Wife). ಪತ್ನಿಯನ್ನು ಕೊಂದ ಹಾಗೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು 52 ವರ್ಷದ ಕೃಷ್ಣ ಕುಮಾರ್ ಎಂದು ಗುರುತಿಸಲಾಗಿದೆ. ಕೃಷ್ಣ ಕುಮಾರ್ ಮತ್ತು ಪತ್ನಿ ಸಂಗೀತಾ ಅವರ ನಡುವೆ ಇತ್ತೀಚೆಗಷ್ಟೇ ಕೆಲವು ವಿಚಾರಕ್ಕೆ ಮನಸ್ತಾಪ ಏರ್ಪಟ್ಟಿತ್ತು. ಇವರಿಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಇದೇ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೃಷ್ಣ ಕುಮಾರ್ ಕೇರಳದ ವಂಡಾಜಿ ಮೂಲದವರಾಗಿದ್ದು ಮಲೆಷಿಯಾದಲ್ಲಿ ಕೆಲಸದಲ್ಲಿದ್ದರು. ಬಳಿಕ ಕೊಯಮತ್ತೂರಿನಲ್ಲಿ ವಾಸ್ತವ್ಯ ಹೂಡಿದ್ದ ಸಂಗೀತಾ ಅವರನ್ನು ಮದುವೆಯಾಗಿದ್ದರು. ಇವರದ್ದು ಅನೇಕ ವರ್ಷ ದಾಂಪತ್ಯ ಜೀವನ. ಈ ಜೋಡಿಗೆ ಅಮೀಷಾ ಮತ್ತು ಅಕ್ಷರಾ ಎಂಬ ಮಕ್ಕಳಿದ್ದಾರೆ. ದಂಪತಿಯ ನಡುವೆ ಹಲವು ಭಿನ್ನಾಭಿಪ್ರಾಯಗಳು ಮೂಡಿದ್ದು, ಇದೇ ವಿಚಾರಕ್ಕೆ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೃಷ್ಣಕುಮಾರ್ ತನ್ನ ಹೆಣ್ಣುಮಕ್ಕಳನ್ನು ಭೇಟಿ ಮಾಡುವ ಸಲುವಾಗಿ ವಂಡಾಜಿಯಲ್ಲಿರುವ ತನ್ನ ಕುಟುಂಬದವರ ಮನೆಯಿಂದ ಹೊರಟು ಸುಮಾರು 100 ಕಿ.ಮೀ. ದೂರದ ಕೊಯಮತ್ತೂರಿಗೆ ಪ್ರಯಾಣಿಸಿದ್ದಾಳೆ. ಅಲ್ಲಿ ತನ್ನ ಪತ್ನಿ ಸಂಗೀತಾಳನ್ನು ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮತ್ತೆ ಮರುದಿನ ಪತ್ನಿ ವಾಸ್ತವ್ಯವಿದ್ದ ಕೊಯಮತ್ತೂರಿನ ಮನೆಗೆ ತೆರೆಳಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನ ಪತ್ನಿಗೆ ಗುಂಡಿಕ್ಕಿ ಕೊಂದಿದ್ದಾನೆ.
ಇದನ್ನು ಓದಿ: Crime News: ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಉದ್ಯಮಿಯ ಶವ ಪತ್ತೆ
ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ಹೋಗಿದ್ದ ಸಂದರ್ಭ ಕೃಷ್ಣಕುಮಾರ್ ಮತ್ತು ಸಂಗೀತಾ ನಡುವೆ ಜಗಳ ನಡೆದಿದೆ. ತನ್ನ ಕೈಯಲಿದ್ದ ಬಂದೂಕಿನಿಂದ ತನ್ನ ಹೆಂಡತಿಗೆ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಇದರಿಂದ ಸಂಗೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಲ್ಲಿನ ನೆರೆಹೊರೆಯವರು ಗುಂಡಿನ ಸದ್ದು ಕೇಳಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿಯನ್ನು ಕೊಂದ ನಂತರ ಕೃಷ್ಣಕುಮಾರ್ ಮತ್ತೆ ತನ್ನ ಮನೆಗೆ ಹಿಂತಿರುಗಿ, ತಂದೆಯ ಸಮ್ಮು ಖದಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಆತ್ಮಹತ್ಯೆಗೆ ಏರ್ ಗನ್ ಬಳಸಿದ್ದಾನೆ ಎಂಬುದು ತಿಳಿದು ಬಂದಿದೆ. ಸಂಗೀತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ದಂಪತಿಗಳಿಬ್ಬರು ಕೆಲವು ವರ್ಷಗಳಿಂದ ಬೇರೆ ಬೇರೆ ವಾಸ್ತವ್ಯ ಹೊಂದಿದ್ದರು. ಸಂಗೀತಾ ವಿಚ್ಛೇದನಕ್ಕೂ ಮುಂದಾಗಿದ್ದರು.