ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಅಭಿಮಾನಿಗಳು ದುಡ್ಡು ಕೊಟ್ಟು ಸ್ಟೇಡಿಯಂಗೆ ಬಂದಿದ್ದಾರೆʼ-ಎಸ್‌ಆರ್‌ಎಚ್‌ ವಿರುದ್ಧ ವೀರೇಂದ್ರ ಸೆಹ್ವಾಗ್‌ ಕಿಡಿ!

Virender Sehwag on SRH vs KKR Match: ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ 80ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಆರ್‌ಎಚ್‌ ತಂಡ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆಂದು ಹೇಳಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ವೀರೇಂದ್ರ ಸೆಹ್ವಾಗ್‌ ಆಕ್ರೋಶ!

ಎಸ್‌ಆರ್‌ಎಚ್‌ ತಂಡವನ್ನು ಟೀಕಿಸಿದ ವೀರೇಂದ್ರ ಸೆಹ್ವಾಗ್‌.

Profile Ramesh Kote Apr 4, 2025 5:38 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ (Virender Sehwag) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಎಸ್‌ಆರ್‌ಎಚ್‌ ತಂಡ ಭಾರಿ ನಿರಾಶೆಯನ್ನು ಮೂಡಿಸಿದೆ ಎಂದು ಟೀಕಿಸಿದ್ದಾರೆ. ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ತನ್ನ ಮೊದಲನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 286 ರನ್‌ಗಳನ್ನು ಕಲೆ ಹಾಕಿತ್ತು. ಇದಕ್ಕೂ ಮುನ್ನ2024ರ ಐಪಿಎಲ್‌ ಟೂರ್ನಿಯಲ್ಲಿಯೂ ನಿಯಮಿತವಾಗಿ 250ಕ್ಕೂ ಅಧಿಕ ರನ್‌ಗಳನ್ನು ಸಿಡಿಸಿತ್ತು. ಅದರಂತೆ ಈ ಬಾರಿಯೂ ಎಸ್‌ಆರ್‌ಎಚ್‌ ತಂಡ ರನ್‌ ಹೊಳೆ ಹರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ಮೂರು ಪಂದ್ಯಗಳನ್ನು ಸೋಲುವ ಮೂಲಕ ನಿರಾಶೆಯನ್ನು ಮೂಡಿಸಿದೆ.

ಆಕ್ರಮಣಕಾರಿ ಆಟದ ಪ್ರವೃತ್ತಿಯನ್ನು ಹೊಂದಿರುವ ಸನ್‌ರೈಸರ್ಸ್‌ ಹೈದಾರಾಬಾದ್‌ ತಂಡವನ್ನು ಯಾವುದೇ ತಂಡದಿಂದ ಸೋಲಿಸುವುದು ಅಸಾಧ್ಯ ಎಂದೇ ಭಾವಿಸಲಾಗಿತ್ತು. ಅದರಂತೆ ಕಳೆದ ವರ್ಷ ಪ್ಯಾಟ್‌ ಕಮಿನ್ಸ್‌ ನಾಯಕತ್ವದಲ್ಲಿ ಎಸ್‌ಆರ್‌ಎಚ್‌ ತಂಡ ಸ್ಪೋಟಕ ಪ್ರದರ್ಶನವನ್ನು ತೋರಿತ್ತು. ಆ ಮೂಲಕ ಫೈನಲ್‌ಗೆ ಪ್ರವೇಶಿಸಿತ್ತು ಹಾಗೂ ಫೈನಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ ಸೋಲುವ ಮೂಲಕ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ, ಈ ಬಾರಿ ಟೂರ್ನಿಯಲ್ಲಿ ಅವರು ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದು, ಇನ್ನುಳಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಕಳೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಎಸ್‌ಆರ್‌ಎಚ್‌ ತಂಡ 80 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ 201 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಎಸ್‌ಆರ್‌ಎಚ್‌ ತಂಡ ಕೇವಲ 120 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

IPL 2025 Points Table: ಕೊನೆಯ ಸ್ಥಾನದಿಂದ ಭಾರೀ ಜಿಗಿತ ಕಂಡ ಕೆಕೆಆರ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಟೀಕಿಸಿದ ಸೆಹ್ವಾಗ್‌

ಇದರ ಬೆನ್ನಲ್ಲೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಟೀಕಿಸಿದ್ದಾರೆ. ಹೈದರಾಬಾದ್‌ ತಂಡದಿಂದ ಅಭಿಮಾನಿಗಳು ಮನರಂಜನೆಯನ್ನು ನಿರೀಕ್ಷೆ ಮಾಡಿದ್ದರು. ಆದರೆ, ಅತ್ಯಂತ ಕಡಿಮೆ ಮೊತ್ತಕ್ಕೆ ಕಳೆದ ಪಂದ್ಯದಲ್ಲಿ ಆಲ್‌ಔಟ್‌ ಆಗಿದೆ ಎಂದು ದೂರಿದ್ದಾರೆ.

"ಹೈದರಾಬಾದ್‌ ತಂಡ ಭಾರಿ ನಿರಾಶೆಯನ್ನು ಮೂಡಿಸಿದೆ. ಇದರ ಬಗ್ಗೆ ಏನು ಹೇಳಬೇಕು? ಇವರ ಕೆಡ ಸಾಕಷ್ಟು ಬ್ಯಾಟ್ಸ್‌ಮನ್‌ಗಳಿದ್ದಾರೆ ಹಾಗೂ ಯಾರೊಬ್ಬರೂ ರನ್‌ ಗಳಿಸುತ್ತಿಲ್ಲ ಹಾಗೂ ಅವರು ಕೇವಲ 120 ರನ್‌ಗಳಿಗೆ ಆಲ್‌ಔಟ್‌ ಆಗಿದ್ದಾರೆ. ಅಭಿಮಾನಿಗಳು ದುಡ್ಡು ಕೊಟ್ಟು ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಹೌದು ಪಂದ್ಯ ನಡೆದಿದ್ದು ಕೋಲ್ಕತಾದಲ್ಲಿ ಆದರೆ, ಹೈದರಾಬಾದ್‌ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ಎಸ್‌ಆರ್‌ಎಚ್‌ ತಂಡ ಮನೋರಂಜನೆಯನ್ನು ನೀಡುತ್ತದೆ. ಆದರೆ, ಕೆಕೆಆರ್‌ ವಿರುದ್ಧ ಅವರು ಭಾರಿ ನಿರಾಶೆಯನ್ನು ಮೂಡಿಸಿದ್ದಾರೆ," ಎಂದು ವೀರೇಂದ್ರ ಸೆಹ್ವಾಗ್‌ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ.

IPL 2025: ಮೊಹಮ್ಮದ್‌ ಸಿರಾಜ್‌ರನ್ನು ಕೈ ಬಿಟ್ಟು ಆರ್‌ಸಿಬಿ ತಪ್ಪು ಮಾಡಿದೆ ಎಂದ ವೀರೇಂದ್ರ ಸೆಹ್ವಾಗ್‌!

ಕಮ್‌ಬ್ಯಾಕ್‌ ಮಾಡಲು ಎಸ್‌ಆರ್‌ಎಚ್‌ಗೆ ಅವಕಾಶ

ಹ್ಯಾಟ್ರಿಕ್‌ ಸೋಲಿನ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಅವರು ಕೂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಸನ್‌ರೈಸರ್ಸ್‌ ಹಿನ್ನಡೆ ಅನುಭವಿಸಲು ಇದು ಕೂಡ ಒಂದು ಕಾರಣವಾಗಿದೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ ಪುಟಿದೇಳಿದರೆ, ಖಂಡಿತಾ ಎಸ್‌ಆರ್‌ಎಚ್‌ ತಂಡ ವಿಭಿನ್ನವಾಗಿ ಕಾಣುತ್ತದೆ ಹಾಗೂ ಅಸಾಧ್ಯವಾದ ಪ್ರದರ್ಶನವನ್ನು ತೋರುತ್ತದೆ. ಇನ್ನು ಕೇವಲ ನಾಲ್ಕು ಪಂದ್ಯಗಳು ಮುಗಿದಿದ್ದು, ಇನ್ನು 10 ಪಂದ್ಯಗಳು ಬಾಕಿ ಇವೆ. ಹಾಗಾಗಿ ಯಾವುದೇ ಎಸ್‌ಆರ್‌ಎಚ್‌ಗೆ ಕಮ್‌ಬ್ಯಾಕ್‌ ಮಾಡಲು ಅವಕಾಶವಿದೆ.