Who is Vignesh Puthur?: ಸಿಎಸ್‌ಕೆ ಎದುರು 3 ವಿಕೆಟ್ ಕಿತ್ತ ಆಟೋರಿಕ್ಷಾ ಡ್ರೈವರ್ ಮಗ!
Who is Vignesh Puthur: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಮುಂಬೈನ ಯುವ ಸ್ಪಿನ್ ಬೌಲರ್ ವಿಘ್ನೇಶ್ ಪುತ್ತೂರು ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾದರು. ತಮ್ಮ ಸ್ಪಿನ್ ಮೋಡಿಯ ಮೂಲಕ ಸಿಎಸ್‌ಕೆ ತಂಡದ ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ವಿಘ್ನೇಶ್ ಪುತ್ತೂರು ಐಪಿಎಲ್ ಟೂರ್ನಿಗೆ ನಡೆದು ಬಂದ ಹಾದಿಯನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಸಿಎಸ್‌ಕೆ ಎದುರು 3 ವಿಕೆಟ್ ಕಿತ್ತ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ವಿಘ್ನೇಶ್ ಪುತ್ತೂರು.

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಇತಿಹಾಸದಲ್ಲಿ ಸಾಕಷ್ಟು ಬಡ ಪ್ರತಿಭಾವಂತ ಆಟಗಾರರು ಬೆಳಕಿಗೆ ಬಂದಿದ್ದಾರೆ. ಪ್ರತಿಯೊಂದು ಆವೃತ್ತಿಯಲ್ಲಿಯೂ ನಾವು ಯಾರಾದರೂ ಒಬ್ಬರು ಪ್ರತಿಭಾವಂತರನ್ನು ನೋಡುತ್ತೇವೆ. ಅದೇ ರೀತಿ ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಡ ಕುಟುಂಬದಿಂದ ಪ್ರತಿಭಾವಂತ ಎಡಗೈ ಸ್ಪಿನ್ನರ್ ವಿಘ್ನೇಶ್ ಪುತ್ತೂರು ( Vignesh Puthur) ಕಾಣಿಸಿಕೊಂಡಿದ್ದಾರೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಪರ ಅವರು ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಸ್ಪಿನ್ ಮೋಡಿ ಮಾಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇಲ್ಲಿನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 156 ರನ್‌ಗಳ ಗುರಿ ಹಿಂಬಾಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲನೇ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಋತುರಾಜ್ ಗಾಯಕ್ವಾಡ್ 67 ರನ್‌ಗಳ ಜೊತೆಯಟವನ್ನು ಆಡಿದ್ದರು. ಈ ವೇಳೆ ಚೆಂಡು ಕೈಗೆತ್ತಿಕೊಂಡಿದ್ದ ವಿಘ್ನೇಶ್ ಪುತ್ತೂರು, ಋತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ನಂತರ ತನ್ನ ಮುಂದಿನ ಓವರ್‌ಗಳಲ್ಲಿ ಕ್ರಮವಾಗಿ ಅಪಾಯಕಾರಿ ಬ್ಯಾಟ್ಸ್‌ಮನ್ ಶಿವಂ ದುಬೆ (9) ಹಾಗೂ ದೀಪಕ್ ಹೂಡ (3) ಅವರನ್ನು ಔಟ್ ಮಾಡಿದರು. ಆ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು.
IPL 2025: ಐಪಿಎಲ್ ಶೂನ್ಯ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್
ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಒಟ್ಟು ನಾಲ್ಕು ಓವರ್‌ಗಳನ್ನು ಬೌಲ್ ಮಾಡಿದ ವಿಘ್ನೇಶ್ ಪುತ್ತೂರು, 32 ರನ್‌ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇವರ ಸ್ಪಿನ್ ಮೋಡಿಯ ಹೊರತಾಗಿಯೂ ಬ್ಯಾಟಿಂಗ್ ವೈಫಲ್ಯದಿಂದ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಮೂಲ ಬೆಲೆ 30 ಲಕ್ಷ ರೂ. ಗಳಿಗೆ ಮುಂಬೈ ಇಂಡಿಯನ್ಸ್ ಸೇರಿದ್ದ ವಿಘ್ನೇಶ್ ಪುತ್ತೂರು ಯಾರು? ಅವರು ಹೇಗೆ ವಿಶ್ವದ ಫ್ರಾಂಚೈಸಿ ಲೀಗ್‌ಗೆ ಪ್ರವೇಶ ಮಾಡಿದರು ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ವಿಘ್ನೇಶ್ ಪುತ್ತೂರು ಯಾರು?
23ನೇ ವಯಸ್ಸಿನ ವಿಘ್ನೇಶ್ ಪುತ್ತೂರು ಕೇರಳದ ಮಲಪ್ಪುರಂ ನಿವಾಸಿ. ಅವರು ಅಂಡರ್-14 ಮತ್ತು ಅಂಡರ್-19 ಮಟ್ಟದಲ್ಲಿ ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ, ಅವರು ಇನ್ನೂ ಹಿರಿಯರ ತಂಡಕ್ಕೆ ಆಡಿಲ್ಲ. ವಿಘ್ನೇಶ್ ಅವರು ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪ್ಪಲ್ಸ್ ಪರ ಆಡಿದ್ದಾರೆ, ಅಲ್ಲಿ ಅವರು ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಮಯವನ್ನು ಕಳೆದಿದ್ದಾರೆ. ಆರಂಭಿಕ ದಿನಗಳಲ್ಲಿ ವಿಘ್ನೇಶ್ ಮಧ್ಯಮ ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್ ಮಾಡುತ್ತಿದ್ದರು. ಆಗ ಸ್ಥಳೀಯ ಕ್ರಿಕೆಟಿಗ ಮೊಹಮ್ಮದ್ ಷರೀಫ್ ಅವರಿಗೆ ಲೆಗ್ ಸ್ಪಿನ್ ಮಾಡುವಂತೆ ಸಲಹೆ ನೀಡಿದ್ದರು.
𝘼 𝙙𝙧𝙚𝙖𝙢 𝙙𝙚𝙗𝙪𝙩 ✨
— IndianPremierLeague (@IPL) March 23, 2025
Twin strikes from the young Vignesh Puthur sparks a comeback for #MI 💙
Updates ▶️ https://t.co/QlMj4G7kV0#TATAIPL | #CSKvMI | @mipaltan pic.twitter.com/DKh2r1mmOx
ತ್ರಿಶೂರ್‌ಗೆ ತೆರಳಿದ್ದ ವಿಘ್ನೇಶ್
ಇದರ ನಂತರ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ತ್ರಿಶೂರ್‌ಗೆ ತೆರಳಿದ್ದರು. ಅಲ್ಲಿ ಅವರು ಕೇರಳ ಕಾಲೇಜ್ ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಸೇಂಟ್ ಥಾಮಸ್ ಕಾಲೇಜು ಪರ ಅದ್ಭುತ ಪ್ರದರ್ಶನ ತೋರಿದರು ಮತ್ತು ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಜಾಲಿ ರೋವರ್ಸ್ ಕ್ರಿಕೆಟ್ ಕ್ಲಬ್‌ಗಾಗಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ ನಂತರ, ಅವರು ಕೆಸಿಎಲ್‌ಗಾಗಿ ಅಲೆಪ್ಪಿ ರಿಪಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದು ಅವರ ವೃತ್ತಿಜೀವನವನ್ನು ಬದಲಾಯಿಸಿತು.
The men in 💛 take home the honours! 💪
— IndianPremierLeague (@IPL) March 23, 2025
A classic clash in Chennai ends in the favour of #CSK ✨
Scorecard ▶ https://t.co/QlMj4G7kV0#TATAIPL | #CSKvMI | @ChennaiIPL pic.twitter.com/ZGPkkmsRHe
ಆಟೋ ಚಾಲಕನ ಮಗ ವಿಘ್ನೇಶ್ ಪುತ್ತೂರು
ಸಣ್ಣ ಪಟ್ಟಣಗಳಿಂದ ಬಂದು ದೊಡ್ಡ ಕನಸು ಕಾಣುವ ಯುವಕರಿಗೆ ವಿಘ್ನೇಶ್ ಅವರ ಕಥೆ ಸ್ಫೂರ್ತಿಯಾಗಿದೆ. ಪ್ರತಿಭೆಯಿದ್ದು, ಕಠಿಣ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಘ್ನೇಶ್ ಐಪಿಎಲ್‌ಗೆ ನಡೆದು ಬಂದ ಹಾದಿ ತುಂಬಾ ಕಠಿಣವಾಗಿದೆ. ತಂದೆ ಸುನೀಲ್ ಕುಮಾರ್ ಆಟೋ ಚಾಲಕರಾಗಿದ್ದು, ತಾಯಿ ಕೆಪಿ ಬಿಂದು ಗೃಹಿಣಿ. ಹಣಕಾಸಿನ ಸವಾಲುಗಳ ಹೊರತಾಗಿಯೂ, ಅವರ ಪೋಷಕರು ತಮ್ಮ ಪುತ್ರನ ಕ್ರಿಕೆಟ್‌ಗೆ ಸಾಕಷ್ಟು ಬೆಂಬಲವನ್ನೂ ನೀಡಿದ್ದಾರೆ. ಇದರ ಫಲವಾಗಿ ಅವರು ಇದು ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡುವಂತಾಗಿದೆ.