IPL 2025: ಐಪಿಎಲ್ ಶೂನ್ಯ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್
Rohit Sharma: ರೋಹಿತ್ ಹೊರತುಪಡಿಸಿ ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ 18 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಸದ್ಯ ಮೂವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ದಿನೇಶ್ ಕಾರ್ತಿಕ್ ನಿವೃತ್ತಿಯಾಗಿರುವ ಕಾರಣ ಮುಂದಿನ ರೋಹಿತ್ ಮತ್ತು ಮ್ಯಾಕ್ಸ್‌ವೆಲ್ ಮುಂದಿನ ಪಂದ್ಯದಲ್ಲಿ ಶೂನ್ಯ ಸುತ್ತಿದರೆ ಅಗ್ರಸ್ಥಾನ ಪಡೆಯಲಿದೆ.


ಚೆನ್ನೈ: 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿಯ ಮೊದಲ ಪಂದ್ಯದಲ್ಲೇ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮ(Rohit Sharma) ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್(CSK vs MI) ನಡುವಣ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಐಪಿಎಲ್‌ನಲ್ಲಿ(Most Ducks in IPL) ಅತ್ಯಧಿಕ ಬಾರಿ ಶೂನ್ಯ ಸುತ್ತಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.
ಚೆನ್ನೈಯ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾನುವಾರದ ಐಪಿಎಲ್‌ನ ದ್ವಿತೀಯ ಪಂದ್ಯದಲ್ಲಿ ಮುಂಬೈ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆಯಿತು. ಅದರಂತೆ ರಯಾನ್ ರಿಕೆಲ್ಟನ್ ಜತೆ ಬ್ಯಾಟಿಂಗ್ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಅವರು ಖಲೀಲ್ ಅಹ್ಮದ್ ಎಸೆತ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡು ನಿರಾಶೆ ಮೂಡಿಸಿದರು.
ಈ ಮೂಲಕ ರೋಹಿತ್ ಐಪಿಎಲ್‌ನಲ್ಲಿ 18ನೇ ಬಾರಿಗೆ ಶೂನ್ಯ ಸುತ್ತಿದರು. ರೋಹಿತ್ ಹೊರತುಪಡಿಸಿ ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ 18 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಸದ್ಯ ಮೂವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ದಿನೇಶ್ ಕಾರ್ತಿಕ್ ನಿವೃತ್ತಿಯಾಗಿರುವ ಕಾರಣ ಮುಂದಿನ ರೋಹಿತ್ ಮತ್ತು ಮ್ಯಾಕ್ಸ್‌ವೆಲ್ ಮುಂದಿನ ಪಂದ್ಯದಲ್ಲಿ ಶೂನ್ಯ ಸುತ್ತಿದರೆ ಅಗ್ರಸ್ಥಾನ ಪಡೆಯಲಿದೆ.
How's that for a start #CSK fans? 💛
— IndianPremierLeague (@IPL) March 23, 2025
Khaleel Ahmed strikes twice in the powerplay with huge wickets of Rohit Sharma and Ryan Rickelton 💪
Updates ▶️ https://t.co/QlMj4G6N5s#TATAIPL | #CSKvMI | @ChennaiIPL pic.twitter.com/jlAqdehRCq
ಐಪಿಎಲ್‌ನ ಅತ್ಯಧಿಕ ಶೂನ್ಯ ಸಾಧಕರು
ರೋಹಿತ್ ಶರ್ಮ-18
ಗ್ಲೆನ್ ಮ್ಯಾಕ್ಸ್‌ವೆಲ್-18
ದಿನೇಶ್ ಕಾರ್ತಿಕ್-18
ಪಿಯೂಷ್ ಚಾವ್ಲಾ-16
ಸುನೀಲ್ ನಾರಾಯಣ್-16
ಇದನ್ನೂ ಓದಿ SRH vs RR: ರಾಜಸ್ಥಾನ್ ವಿರುದ್ಧ 44 ರನ್ ಅಂತರದ ಗೆಲುವು ಸಾಧಿಸಿದ ಹೈದರಾಬಾದ್
ಆಡುವ ಬಳಗ
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಎಂಎಸ್ ಧೋನಿ(ವಿ.ಕೀ), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.
ಮುಂಬಯಿ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್(ವಿ.ಕೀ), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ನಮನ್ ಧೀರ್, ರಾಬಿನ್ ಮಿಂಜ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಸತ್ಯನಾರಾಯಣ ರಾಜು.