Champions Trophy: ʻಭಾರತ ತಂಡದಲ್ಲಿ ಸಮಸ್ಯೆ ಇದೆʼ-ರೋಹಿತ್ ಪಡೆಗೆ ಕಪಿಲ್ ದೇವ್ ಎಚ್ಚರಿಕೆ!
Kapil Dev Warns India ahead Champions Trophy: ಪಾಕಿಸ್ತಾನದ ಆತಿಥ್ಯದಲ್ಲಿ ಫೆಬ್ರವರಿ 19 ರಂದು ಆರಂಭವಾಗಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಮಾಜಿ ನಾಯಕ ಹಾಗೂ ದಿಗ್ಗಜ ಕಪಿಲ್ ದೇವ್ ಎಚ್ಚರಿಕೆ ನೀಡಿದ್ದಾರೆ.
![ಚಾಂಪಿಯನ್ಸ್ ಟ್ರೋಫಿ: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಕಪಿಲ್ ದೇವ್!](https://cdn-vishwavani-prod.hindverse.com/media/original_images/Rohit_Sharma-kapil_Dev.jpg)
Rohit Sharma-Kapil Dev
![Profile](https://vishwavani.news/static/img/user.png)
ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಮಾಜಿ ನಾಯಕ ಹಾಗೂ ದಿಗ್ಗಜ ಆಲ್‌ರೌಂಡರ್ ಕಪಿಲ್ ದೇವ್ ಎಚ್ಚರಿಕೆ ನೀಡಿದ್ದಾರೆ. ಒಂದು ಕಡೆ ರೋಹಿತ್ ಶರ್ಮಾ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಟೀಮ್ ಇಂಡಿಯಾ ಸಂಪೂರ್ಣವಾಗಿ ಹೊಂದಿಕೊಂಡಂತೆ ಕಾಣುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಭಾರತ ತಂಡದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.
ರೋಹಿತ್ ಶರ್ಮಾ ಅವರು ಪ್ರಸ್ತುತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರು ಕಳೆದ 10 ಇನಿಂಗ್ಸ್‌ಗಳಿಂದ ಕ್ರಮವಾಗಿ 2, 3, 9, 10, 3, 6, 18, 11 ಹಾಗೂ 0 ರನ್‌ಗಳನ್ನು ಕಲೆ ಹಾಕಿದ್ದಾರೆ. ಅಂದ ಹಾಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ನಾಯಕ ಫಾರ್ಮ್‌ಗೆ ಮರಳಲಿದ್ದಾರೆಂದು ಕಪಿಲ್ ದೇವ್ ವಿಶ್ವಾಸವನ್ನು ಹೊಂದಿದ್ದಾರೆ.
ಕ್ರಿಕೆಟ್ ಅಡ್ಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕಪಿಲ್ ದೇವ್, "ರೋಹಿತ್ ಶರ್ಮಾ ದೊಡ್ಡ ಆಟಗಾರ. ಅವರು ಫಾರ್ಮ್‌ಗೆ ಮರಳಲಿದ್ದಾರೆಂಬ ವಿಶ್ವಾಸವಿದೆ. ಹೆಡ್ ಕೋಚ್‌ಗೆ (ಗೌತಮ್ ಗಂಭೀರ್) ಶುಭ ಹಾರೈಸಲು ಬಯಸುತ್ತೇನೆ. ತಂಡದಲ್ಲಿ ಹೊಂದಿಕೊಳ್ಳಲು ಸ್ವಲ್ಪ ಸಮಯದ ಅಗತ್ಯವಿದೆ. ಭಾರತ ತಂಡದ ಪ್ರದರ್ಶನವನ್ನು ನೋಡಲು ದೇಶದ ಜನರು ಎದುರು ನೋಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನವನ್ನು ತೋರಿದೆ. ಆದರೈ ತಂಡ ಇನ್ನೂ ಸಂಪೂರ್ಣವಾಗಿ ಹೊಂದಿಕೊಂಡಿರುವಂತೆ ಕಾಣುತಿಲ್ಲ. ತಂಡದ ನಾಯಕನ ಫಾರ್ಮ್ ಕಳಪೆಯಾಗಿದ್ದರೆ, ತಂಡ ಕೂಡ ಸಮಸ್ಯೆಗೆ ಒಳಗಾಗಲಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಮಾಜಿ ವೇಗಿ
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗಳಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು. ಇದರಿಂದ ಅಭಿಮಾನಿಗಳು ನಿರಾಶೆಗೆ ಒಳಗಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಪಿಲ್ ದೇವ್, "ತಂಡ ಕಳೆದ ಕೆಲವೊಂದು ಸಂದರ್ಭಗಳಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರಿಲ್ಲ. ಇದರಿಂದ ಅಭಿಮಾನಿಗಳು ನಿರಾಶೆಗೆ ಒಳಗಾಗಿದ್ದರು. ಆದರೆ, ಈ ಆಟಗಾರರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಕ್ತಿಯುತವಾಗಿ ಕಮ್‌ಬ್ಯಾಕ್ ಮಾಡಿದ್ದರು, ಈ ಕ್ಷಣಗಳು ಮೋಜಿನಿಂದ ಕೂಡಿತ್ತು, ನನ್ನ ವೃತ್ತಿ ಜೀವನದಲ್ಲಿಯೇ ಇಂಥಾ ಕ್ಷಣಗಳನ್ನು ನೋಡಿರಲಿಲ್ಲ. ಹಾಗಾಗಿ ನೀವು ಕೆಟ್ಟ ಪ್ರದರ್ಶನವನ್ನು ತೋರಿದಾಗ ಟೀಕೆಗಳು ಎದುರಾಗುವುದು ಸಾಮಾನ್ಯ. ಅದಕ್ಕಾಗಿಯೇ ಆಟಗಾರರನ್ನು ಜಾಸ್ತಿ ಹೊಗಳಬೇಡಿ ಎಂದು ನಾನು ಒತ್ತಿ ಒತ್ತಿ ಹೇಳುವುದು. ಏಕೆಂದರೆ ಅವರು ಅದನ್ನು ನಿರ್ವಹಿಸುವುದಿಲ್ಲ. ಟೀಕೆಗಳು ಅವರ ವಿಶ್ವಾಸವನ್ನು ಕುಂದಿಸುತ್ತದೆ. ನನ್ನ ಮನಸಿನಲ್ಲಿ ಇರುವುದು ಕೂಡ ಇದೇ," ಎಂದು ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ? ಹೊಸ ನಾಯಕನ ಹುಡುಕಾಟದಲ್ಲಿ ಬಿಸಿಸಿಐ!
ಚಾಂಪಿಯನ್ಸ್ ಟ್ರೋಫಿ ಗುಂಪುಗಳು
ಗುಂಪು ಎ: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್
ಗುಂಪು ಬಿ: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ
ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ
ಗುಂಪು ಎ
ಫೆಬ್ರವರಿ 19: ಪಾಕಿಸ್ತಾನ vs ನ್ಯೂಜಿಲೆಂಡ್ (ಕರಾಚಿ)
ಫೆಬ್ರವರಿ 20: ಬಾಂಗ್ಲಾದೇಶ vs ಭಾರತ (ದುಬೈ)
ಫೆಬ್ರವರಿ 23: ಪಾಕಿಸ್ತಾನ vs ಭಾರತ (ದುಬೈ)
ಫೆಬ್ರವರಿ 24: ಬಾಂಗ್ಲಾದೇಶ vs ನ್ಯೂಜಿಲೆಂಡ್ (ರಾವಲ್ಪಿಂಡಿ)
ಫೆಬ್ರವರಿ 27: ಪಾಕಿಸ್ತಾನ vs ಬಾಂಗ್ಲಾದೇಶ (ರಾವಲ್ಪಿಂಡಿ)
ಮಾರ್ಚ್ 2: ನ್ಯೂಜಿಲೆಂಡ್ vs ಭಾರತ (ದುಬೈ)
ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ?; ಬದಲಿ ಬೌಲರ್ ಸಿದ್ಧಪಡಿಸಿದ ಬಿಸಿಸಿಐ!
ಗುಂಪು ಬಿ
ಫೆಬ್ರವರಿ 21: ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ (ಕರಾಚಿ)
ಫೆಬ್ರವರಿ 22: ಆಸ್ಟ್ರೇಲಿಯಾ vs ಇಂಗ್ಲೆಂಡ್ (ಲಾಹೋರ್)
ಫೆಬ್ರವರಿ 25: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (ರಾವಲ್ಪಿಂಡಿ)
ಫೆಬ್ರವರಿ 26: ಅಫ್ಘಾನಿಸ್ತಾನ vs ಇಂಗ್ಲೆಂಡ್ (ಲಾಹೋರ್)
ಫೆಬ್ರವರಿ 28: ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ (ಲಾಹೋರ್)
ಮಾರ್ಚ್ 1: ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ (ಕರಾಚಿ)
ಸೆಮಿಫೈನಲ್
ಮಾರ್ಚ್ 4: ಸೆಮಿಫೈನಲ್ - A1 vs B2 (ದುಬೈ)
ಮಾರ್ಚ್ 5: ಸೆಮಿಫೈನಲ್ 2 - A2 vs B1 (ಲಾಹೋರ್)
ಫೈನಲ್ - ಮಾರ್ಚ್ 9: ಫೈನಲ್ (ಲಾಹೋರ್ ಅಥವಾ ದುಬೈ)