#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಎರಡನೇ ಏಕದಿನ ಪಂದ್ಯಕ್ಕೆ ವಿರಾಟ್‌ ಕೊಹ್ಲಿ ವಾಪಸ್‌? ಬ್ಯಾಟಿಂಗ್‌ ಕೋಚ್‌ ಹೇಳಿದ್ದಿದು!

Virat Kohli will play 2nd ODI: ಗಾಯದ ಕಾರಣ ಮೊದಲನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಫೆಬ್ರವರಿ 9 ರಂದು ಕಟಕ್‌ನಲ್ಲಿ ಎರಡನೇ ಒಡಿಐ ಪಂದ್ಯಕ್ಕೆ ಲಭ್ಯರಾಗಲಿದ್ದಾರೆಂದು ಟೀಮ್‌ ಇಂಡಿಯಾ ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌ ಸ್ಪಷ್ಟಪಡಿಸಿದ್ದಾರೆ.

IND vs ENG: ಎರಡನೇ ಏಕದಿನ ಪಂದ್ಯಕ್ಕೆ ವಿರಾಟ್‌ ಕೊಹ್ಲಿ ಕಮ್‌ಬ್ಯಾಕ್‌!

Virat Kohli-Sitanshu Kotak

Profile Ramesh Kote Feb 8, 2025 8:03 PM

ನವದೆಹಲಿ: ಗಾಯದ ಕಾರಣ ನಾಗ್ಪುರದ ಪಂದ್ಯಕ್ಕೆ ಅಲಭ್ಯರಾಗಿದ್ದ ಹಿರಿಯ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಇದೀಗ ಸಂಪೂರ್ಣ ಫಿಟ್‌ ಆಗಿದ್ದಾರೆ ಹಾಗೂ ಇಂಗ್ಲೆಂಡ್‌ ವಿರುದ್ಧ ಫೆಬ್ರವರಿ 9ರಂದು ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ನಡೆಯುವ ಎರಡನೇ ಒಡಿಐ ಪಂದ್ಯದಲ್ಲಿ ಆಡಲು ಸಿದ್ದರಿದ್ದಾರೆಂದು ಟೀಮ್‌ ಇಂಡಿಯಾ ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌ ಸ್ಪಷ್ಟಪಡಿಸಿದ್ದಾರೆ. ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಮೊದಲನೇ ಏಕದಿನ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಅವಕಾಶ ಲಭಿಸಿತ್ತು. ಅದರಂತೆ ಅರ್ಧಶತಕವನ್ನು ಸಿಡಿಸಿದ ಅವರು ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು ಹಾಗೂ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿತ್ತು.

ಇದೀಗ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಭಾನುವಾರ (ಫೆಬ್ರವರಿ 9) ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌, "ಆಡಲು ವಿರಾಟ್‌ ಕೊಹ್ಲಿ ಸಂಪೂರ್ಣವಾಗಿ ಫಿಟ್‌ ಆಗಿದ್ದಾರೆ. ಅವರು ಅಭ್ಯಾಸಕ್ಕೆ ಬಂದಿದ್ದರು ಹಾಗೂ ಚೆನ್ನಾಗಿ ಆಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮೊದಲನೇ ಏಕದಿನ ಪಂದ್ಯದಲ್ಲಿ 87 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಶುಭಮನ್‌ ಗಿಲ್‌ ಅವರು ಕೂಡ ವಿರಾಟ್‌ ಕೊಹ್ಲಿ ಬಗ್ಗೆ ಮಾತನಾಡಿದ್ದರು. ಹಿರಿಯ ಬ್ಯಾಟ್ಸ್‌ಮನ್‌ ಸಂಪೂರ್ಣ ಫಿಟ್‌ ಆಗಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆಂದು ಹೇಳಿದ್ದರು.

IND vs ENG 2nd ODI: ಕಟಕ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ

"ವಿರಾಟ್‌ ಕೊಹ್ಲಿ ಮುಂಜಾನೆ ಎದ್ದಾಗ, ಅವರ ಮೊಣಕಾಲಿನಲ್ಲಿ ಸ್ವಲ್ಪ ಊತ ಕಾಣಿಸಿಕೊಂಡಿತ್ತು. ಹಿಂದಿನ ದಿನ ಅಭ್ಯಾಸದ ಸೆಷನ್‌ನವರೆಗೂ ಅವರು ಚೆನ್ನಾಗಿಯೇ ಇದ್ದರು. ಆದರೆ, ಇಲ್ಲಿ ಯಾವುದೇ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ಮುಂದಿನ ಪಂದ್ಯಕ್ಕೆ ಅವರು ಸಂಪೂರ್ಣ ಫಿಟ್‌ ಆಗಲಿದ್ದಾರೆ," ಎಂದು ಶುಭಮನ್‌ ಗಿಲ್‌ ತಿಳಿಸಿದ್ದರು.

ವಿರಾಟ್‌ ಕೊಹ್ಲಿಗೆ ಸ್ಥಾನ ಬಿಟ್ಟುಕೊಡುವವರು ಯಾರು?

ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಎರಡನೇ ಪಂದ್ಯಕ್ಕೂ ಗೆಲುವಿನ ಸಂಯೋಜನೆಯನ್ನು ಉಳಿಸಿಕೊಳ್ಳಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸಬಹುದು. ಒಂದು ವೇಳೆ ಮುಂದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡಿದರೆ, ಯಾರನ್ನು ಪ್ಲೇಯಿಂಗ್‌ XIನಿಂದ ಕೈ ಬಿಡಲಾಗುತ್ತದೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.

IND vs ENG 2nd ODI: ದ್ವಿತೀಯ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಕೇವಲ 36 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 59 ರನ್‌ಗಳನ್ನು ಸಿಡಿಸಿದ್ದ ಶ್ರೇಯಸ್‌ ಅಯ್ಯರ್‌ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಅಂದ ಹಾಗೆ 249 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ ಆರಂಭಿಕರಾದ ನಾಯಕ ರೋಹಿತ್‌ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ ವೈಫಲ್ಯ ಅನುಭವಿಸಿದ್ದರು. ಆದರೆ, ಶ್ರೇಯಸ್‌ ಅಯ್ಯರ್‌ ಮುರಿಯದ ಮೂರನೇ ವಿಕೆಟ್‌ಗೆ ಶುಭಮನ್‌ ಗಿಲ್‌ (87 ರನ್‌) ಜೊತೆ ಸೇರಿ ಒಟ್ಟು 93 ರನ್‌ಗಳನ್ನು ಕಲೆ ಹಾಕಿದ್ದರು.

ಯಶಸ್ವಿ ಜೈಸ್ವಾಲ್‌ ಔಟ್‌, ವಿರಾಟ್‌ ಕೊಹ್ಲಿ ಇನ್‌

ಭಾನುವಾರ ವಿರಾಟ್‌ ಕೊಹ್ಲಿ ಪ್ಲೇಯಿಂಗ್‌ XIಗೆ ಬಂದರೆ, ಯಶಸ್ವಿ ಜೈಸ್ವಾಲ್‌ ಅವರು ಬೆಂಚ್‌ ಕಾಯಬಹುದು. ಈ ಲೆಕ್ಕಾಚಾರ ನಡೆದರೆ, ರೋಹಿತ್‌ ಶರ್ಮಾ ಜೊತೆ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಬಹುದು. ಈ ಪಂದ್ಯವನ್ನು ಗೆದ್ದು, ಇನ್ನೂ ಒಂದು ಕಾದಾಟ ಬಾಕಿ ಇರುವಾಗಲೇ ಟೀಮ್‌ ಇಂಡಿಯಾ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.