IND vs ENG: ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್ ಶರ್ಮಾ!
Rohit Sharma eye on Sachin Tendulkar's Record: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಭಾನುವಾರ (ಫೆಬ್ರವರಿ 9) ಕಟಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಿಟ್‌ಮ್ಯಾನ್ 51 ರನ್ ಗಳಿಸಿದರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯೊಂದನ್ನು ಮುರಿಯಲಿದ್ದಾರೆ.
![IND vs ENG: ಕ್ರಿಕೆಟ್ ದೇವರ ದಾಖಲೆ ಮೇಲೆ ರೋಹಿತ್ ಶರ್ಮಾ ಕಣ್ಣು!](https://cdn-vishwavani-prod.hindverse.com/media/original_images/Rohit_Sharma-Sachin_Tendulkar.jpg)
Rohit Sharma eyes on Sachin Tendulkar's Record
![Profile](https://vishwavani.news/static/img/user.png)
ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆಯುವ ಸನಿಹದಲ್ಲಿ ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ (Rohit Sharma) ನಿಂತಿದ್ದಾರೆ. ಆರಂಭಿಕರಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 346 ಪಂದ್ಯಗಳಿಂದ 48.07ರ ಸರಾಸರಿಯಲ್ಲಿ 15,335 ರನ್ ಗಳಿಸಿದ್ದರೆ, ಹಿಟ್‌ಮ್ಯಾನ್ 342 ಪಂದ್ಯಗಳಿಂದ 45.22ರ ಸರಾಸರಿಯಲ್ಲಿ 15,285 ರನ್ ಗಳಿಸಿದ್ದಾರೆ.
ನಜಾಫ್ ಗಢದ ನವಾಬ್ ಎಂದೇ ಖ್ಯಾತಿ ಗಳಿಸಿರುವ ವೀರೇಂದ್ರ ಸೆಹ್ವಾಗ್ 332 ಪಂದ್ಯಗಳಲ್ಲಿ ಆರಂಭಿಕನಾಗಿ ಅಖಾಡಕ್ಕಿಳಿದಿದ್ದು, 41.90ರ ಸರಾಸರಿಯಲ್ಲಿ 16,119 ರನ್ ಗಳಿಸಿ ಭಾರತ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ. ಕಟಕ್ ಪಂದ್ಯದಲ್ಲಿ ರೋಹಿತ್ ಶರ್ಮಾ 51 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಲಿದ್ದಾರೆ.
IND vs ENG 2nd ODI: ಕಟಕ್ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕರ ಸಾಲಿನಲ್ಲಿ ರೋಹಿತ್ ಶರ್ಮಾ ಎಂಟನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಹೆಚ್ಚು ರನ್ ಗಳಿಸಿದವರು
* 19,298 ರನ್- ಸನತ್ ಜಯಸೂರ್ಯ - ಶ್ರೀಲಂಕಾ- 506 ಪಂದ್ಯ
* 18,867 ರನ್- ಕ್ರಿಸ್ ಗೇಲ್ - ವೆಸ್ಟ್ ಇಂಡೀಸ್ - 441 ಪಂದ್ಯ
* 18,744 ರನ್- ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ - 374 ಪಂದ್ಯ
* 16,950 ರನ್- ಗ್ರೇಮ್ ಸ್ಮಿತ್- ದಕ್ಷಿಣ ಆಫ್ರಿಕಾ - 342 ಪಂದ್ಯ
* 16,120 ರನ್- ಡಿಸ್ಮೆಂಡ್ ಹಾಗೂ ಹೇಯ್ಸ್- ವೆಸ್ಟ್ ಇಂಡೀಸ್ - 354 ಪಂದ್ಯ
* 16,119 ರನ್- ವೀರೇಂದ್ರ ಸೆಹ್ವಾಗ್ - ಭಾರತ - 332 ಪಂದ್ಯ
* 15,335 ರನ್- ಸಚಿನ್ ತೆಂಡೂಲ್ಕರ್ - ಭಾರತ - 346 ಪಂದ್ಯ
* 15,285 ರನ್- ರೋಹಿತ್ ಶರ್ಮಾ - 342 ಪಂದ್ಯ
IND vs ENG 2nd ODI: ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?
ರನ್ ಬರ ಎದುರಿಸುತ್ತಿರುವ ರೋಹಿತ್ ಶರ್ಮಾ
ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ನಡೆದಿದ್ದ 2024ರ ಐಸಿಸಿ ಟಿ20ಐ ವಿಶ್ವಕಪ್ ಟೂರ್ನಿಯ ನಂತರ ರನ್ ಬರ ಎದುರಿಸುತ್ತಿರುವ ರೋಹಿತ್ ಶರ್ಮಾ, ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲೂ ಕೇವಲ 2 ರನ್ ಗಳಿಸಿ ವೇಗಿ ಸಾಕಿಬ್ ಮಹಮೂದ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಹಿಟ್‌ಮ್ಯಾನ್ ತಮ್ಮ ಫಾರ್ಮ್‌ಗೆ ಮರಳಬೇಕಾದ ಅಗತ್ಯವಿದೆ.