ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Bandh: ಇತ್ತ ಕರ್ನಾಟಕ ಬಂದ್‌, ಅತ್ತ ಕನ್ನಡಿಗರನ್ನು ಬೆದರಿಸಿದವನಿಗೆ ಎಂಇಎಸ್‌ ಸನ್ಮಾನ!

ಸರ್ಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಿಪ್ಪಣ್ಣ ‌ಡೋಕ್ರೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇಂದು ಹಿಂಡಲಗಾ ಜೈಲಿನಿಂದ ತಿಪ್ಪಣ್ಣ ಡೋಕ್ರೆ ಹೊರಬಂದಿದ್ದು, ಎಂಇಎಸ್ ಮುಖಂಡ ‌ಶುಭಂ ಶಳ್ಕೆ ಹಾಗೂ ಕಾರ್ಯಕರ್ತರು ಆತನಿಗೆ ಸನ್ಮಾನ ಮಾಡಿದ್ದಾನೆ.

ಕರ್ನಾಟಕ ಬಂದ್‌ ನಡುವೆಯೇ ಕನ್ನಡಿಗರನ್ನು ಬೆದರಿಸಿದವನಿಗೆ ಎಂಇಎಸ್‌ ಸನ್ಮಾನ!

ಹರೀಶ್‌ ಕೇರ ಹರೀಶ್‌ ಕೇರ Mar 22, 2025 1:06 PM

ಬೆಳಗಾವಿ: ಬೆಳಗಾವಿ (Belagavi) ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿ ಮಹಾರಾಷ್ಟ್ರದ ಕೆಲವು ಮರಾಠಿ ಪುಂಡರು ಹಾಗೂ ಎಂಇಎಸ್ (MES) ಕಾರ್ಯಕರ್ತರು ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ‘ಕರ್ನಾಟಕ ಬಂದ್’​ಗೆ (Karnataka Bandh) ಕರೆ ನೀಡಲಾಗಿದೆ. ಈ ಬಂದ್ ನಡೆಯುತ್ತಿರುವ ಸಂದರ್ಭದಲ್ಲಿಯೇ, ಎಂಇಎಸ್ ಪುಂಡರು ಕಿಡಿಗೇಡಿತನ ತೋರಿದ್ದಾರೆ. ಇತ್ತೀಚೆಗೆ ಕನ್ನಡಿಗ ಪಿಡಿಒ ಮೇಲೆ ದರ್ಪ ತೋರಿದ್ದ ಮಾರಾಠಿ ಪುಂಡನಿಗೆ ಸನ್ಮಾನ ಮಾಡುವ ಮೂಲಕ ಕನ್ನಡಿಗರನ್ನು ಮತ್ತಷ್ಟು ಕೆರಳಿಸಲು ಯತ್ನಿಸಿದ್ದಾರೆ.

ಇತ್ತೀಚೆಗೆ ಗಡಿಭಾಗದ ಕರ್ನಾಟಕದ ಪಿಡಿಓಗೆ ಮರಾಠಿ ಪುಂಡನೊಬ್ಬ ದರ್ಪ ತೋರಿದ್ದ. ಆ ಪುಡಾರಿಗೆ ಇಂದು ಎಂಇಎಸ್‌ನಿಂದ ಸನ್ಮಾನ ಮಾಡಲಾಗಿದೆ. ಪಿಡಿಒ ಮೇಲೆ ದರ್ಪ ತೋರಿದ್ದ ಕಿಣಯೇ ಗ್ರಾಮದ ತಿಪ್ಪಣ್ಣ ಡೋಕ್ರೆ ಎಂಬಾತನಿಗೆ ಎಂಇಎಸ್ ಮುಖಂಡ ಶುಭಂ ಶಳ್ಕೆ ಎನ್ನುವವನ ನೇತೃತ್ವದ ಎಂಇಎಸ್ ಪುಂಡರ ಗ್ಯಾಂಗ್ ಸನ್ಮಾನ ಮಾಡಿದೆ. ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಎಂಇಎಸ್ ಮುಖಂಡ ಶುಭಂ ಶಳ್ಕೆ ಹಾರ ಹಾಕಿ ಸ್ಮಾನ ಮಾಡಿದ್ದಾನೆ.

ತಿಪ್ಪಣ್ಣ ಡೋಕ್ರೆ ಇತ್ತೀಚೆಗೆ ಕಿಣಯೇ ಗ್ರಾಮ ಪಂಚಾಯಿತಿಗೆ ಹೋಗಿ ಅಲ್ಲಿದ್ದ ಪಿಡಿಒ ನಾಗೇಂದ್ರ ಪತ್ತಾರ ಅವರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ಕೊಡಬೇಕು ಎಂದು ಕೇಳಿದ್ದಾನೆ. ಅಷ್ಟೇ ಅಲ್ಲದೇ ಮರಾಠಿಯಲ್ಲೇ ಮಾತನಾಡಬೇಕೆಂದು ದರ್ಪ ತೋರಿದ್ದಾನೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಪಿಡಿಒ ನಾಗೇಂದ್ರ ಪತ್ತಾರರನ್ನು ತಿಪ್ಪಣ್ಣ ‌ಡೋಕ್ರೆ ನಿಂದಿಸಿದ್ದ. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಿಪ್ಪಣ್ಣ ‌ಡೋಕ್ರೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇಂದು ಹಿಂಡಲಗಾ ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಎಂಇಎಸ್ ಮುಖಂಡ ‌ಶುಭಂ ಶಳ್ಕೆ ಸನ್ಮಾನ ಮಾಡಿದ್ದಾನೆ.

ಈ ಹಿಂದೆ ಶುಭಂ ಶಳ್ಕೆ ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆ ಮಾಡಿದ್ದನ್ನು ವಿರೋಧಿಸಿದ ಕನ್ನಡಪರ ಹೋರಾಟಗಾರರು ನಾಲಾಯಕ್ ಎಂದು ನಾಲಿಗೆ ಹರಿಬಿಟ್ಟಿದ್ದ. ಕನ್ನಡ ಮಾತನಾಡಿದ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಕನ್ನಡ ಹೋರಾಟಗಾರರು ಆಗ್ರಹಿಸಿದ್ದರು.

ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್‌ ಯಾಕೆ? ನೀವು ತಿಳಿಯಬೇಕಾದ ಮಾಹಿತಿ