Varun Chakravarthy: ಪದಾರ್ಪಣೆಯಲ್ಲೂ ದಾಖಲೆ ಬರೆದ ವರುಣ್ ಚಕ್ರವರ್ತಿ!
Varun Chakravarthy: ಕರ್ನಾಟಕದ ಬೀದರ್‌ನಲ್ಲಿ ಜನಿಸಿದ ವರುಣ್ ಚಕ್ರವರ್ತಿ, ಸದ್ಯತಮಿಳುನಾಡಿನ ತಂಜಾವೂರಿನಲ್ಲಿ ನೆಲೆಸಿದ್ದಾರೆ. ಸದ್ಯ ಬೌಲಿಂಗ್ ನಡೆಸುತ್ತಿರುವ ಚಕ್ರವರ್ತಿ ಅಪಾಯಕಾರಿ ಬ್ಯಾಟರ್ ಫಿಲ್ ಸಾಲ್ಟ್ ವಿಕೆಟ್ ಕೀಳುವ ಮೂಲಕ ತಮ್ಮ ಏಕದಿನ ವಿಕೆಟ್ ಖಾತೆಯನ್ನು ತೆರೆದರು.

varun chakravarthy debut

ಕಟಕ್: ಇಂಗ್ಲೆಂಡ್ ವಿರುದ್ದದ 2ನೇ ಏಕದಿನ(India vs England 2nd ODI) ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತ ತಂಡದ ಪರ ಪದಾರ್ಪಣೆಗೈದ ಮಿಸ್ಟರಿ ಖ್ಯಾತಿಯ ಸಿನ್ನರ್ ವರುಣ್ ಚಕ್ರವರ್ತಿ(Varun Chakravarthy) ದಾಖಲೆಯೊಂದನ್ನು ಬರೆದಿದ್ದಾರೆ. ಭಾರತ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎರಡನೇ ಅತಿ ಹಿರಿಯ ಆಟಗಾರ ಎನಿಸಿಕೊಂಡರು. ವರುಣ್‌ಗೆ 33 ವರ್ಷ, 164 ದಿನ. ಅಗ್ರಸ್ಥಾನದಲ್ಲಿ ಮಾಜಿ ಆಟಗಾರ ಫಾರೂಖ್ ಇಂಜಿನಿಯರ್ ಕಾಣಿಸಿಕೊಂಡಿದ್ದಾರೆ. ಅವರು 36 ವರ್ಷದಲ್ಲಿ ಭಾರತ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಕೂಡ ಇಂಗ್ಲೆಂಡ್ ವಿರುದ್ಧವೇ ಈ ಸಾಧನೆ ಮಾಡಿದ್ದರು.
ಕರ್ನಾಟಕದ ಬೀದರ್‌ನಲ್ಲಿ ಜನಿಸಿ, ತಮಿಳುನಾಡಿನ ತಂಜಾವೂರಿನಲ್ಲಿ ಬೆಳೆದಿರುವ ವರುಣ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಾರೆ. ಕಳೆದ ವಾರ ಮುಕ್ತಾಯ ಕಂಡಿದ್ದ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಒಟ್ಟು 14 ವಿಕೆಟ್ ಕಿತ್ತು ಮಿಂಚಿದ್ದರು.
ಮೊದಲು ವಿಕೆಟ್ ಕೀಪರ್...
ದೂಸ್ರಾ ಹಾಗೂ ಗೂಗ್ಲಿ ಎಸೆತಗಳನ್ನು ಪ್ರಯೋಗಿಸಿ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸುವುದರಲ್ಲಿ ಪಂಟರ್. ಮೊದಲು ವಿಕೆಟ್ ಕೀಪರ್, ನಂತರ ಮಧ್ಯಮ ವೇಗಿ, ಈಗ ಸ್ಪಿನ್ನರ್. 13ನೇ ವಯಸ್ಸಿನಲ್ಲಿ ವಿಕೆಟ್ ಕೀಪರ್ ಆಗಿ ಕ್ರಿಕೆಟ್ ಪಯಣ ಶುರುಮಾಡಿದ ವರುಣ್,ವಾಸ್ತುಶಿಲ್ಪ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುವ ಉದ್ದೇಶದಿಂದ17ನೇ ವಯಸ್ಸಿನಲ್ಲೇ ಈ ಆಟದಿಂದ ವಿಮುಖರಾಗಿದ್ದರು. ಏಳು ವರ್ಷಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಮರಳಿದ್ದ ಅವರು ಕ್ರೊಂಬೆಸ್ಟ್ ಕ್ಲಬ್ ತಂಡದಲ್ಲಿ ಮಧ್ಯಮ ವೇಗದ ಬೌಲರ್‌ನ ಪಾತ್ರ ನಿಭಾಯಿಸುತ್ತಿದ್ದರು. ಪಂದ್ಯವೊಂದರ ವೇಳೆ ಮಂಡಿಗೆ ಗಾಯವಾದ ಬಳಿಕ ಅವರ ಬದುಕು ಬದಲಾಯಿತು! ನಂತರ ಸ್ಪಿನ್ ಬೌಲಿಂಗ್‌ನತ್ತ ಹೊರಳಿದ್ದರು.
Oldest Indian debutant to take a wicket in ODIs
— Cricket.com (@weRcricket) February 9, 2025
33 years 164 days - Varun Chakaravarthy
32 years 350 days - Dilip Doshi
32 years 276 days - Krishnappa Gowtham#INDvsENG pic.twitter.com/zaSw7dAOqG
2018ರ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ (ಟಿಎನ್‌ಪಿಎಲ್) ಮಧುರೈ ಪ್ಯಾಂಥರ್ಸ್ ಪರ ಮಿಂಚಿದ್ದ ವರುಣ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೈಕ್ ಹಸ್ಸಿ ಕಣ್ಣಿಗೆ ಬಿದ್ದರು. ಸಿಎಸ್‌ಕೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಅವರು ಅಭ್ಯಾಸದ ವೇಳೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನೇ ತಬ್ಬಿಬ್ಬುಗೊಳಿಸಿದ್ದರು. ಐಪಿಎಲ್‌ನಲ್ಲಿ ಸಿಕ್ಕ ಅವಕಾಶ ಇದೀಗ ಅವರನ್ನು ಭಾರತ ತಂಡದ ಪರ ಆಡುವ ತನಕ ಬಂದು ನಿಲ್ಲಿಸಿದೆ. ಸದ್ಯ ಬೌಲಿಂಗ್ ನಡೆಸುತ್ತಿರುವ ಚಕ್ರವರ್ತಿ ಒಂದು ವಿಕೆಟ್ ಕಿತ್ತು ತಮ್ಮ ಏಕದಿನ ವಿಕೆಟ್ ಖಾತೆಯನ್ನು ತೆರೆದಿದ್ದಾರೆ.