PM Narendra Modi: ದಿಲ್ಲಿ ಇನ್ಮುಂದೆ ಆಪ್ ಮುಕ್ತ; ವಿಕಾಸ, ವಿಶ್ವಾಸ್, ವಿಷನ್ಗೆ ಸಿಕ್ಕ ಗೆಲುವಿದು-ಪ್ರಧಾನಿ ಮೋದಿ ಅಬ್ಬರ
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬರೋಬ್ಬರಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ನಿಟ್ಟಿನಲ್ಲಿ ಇಂದು ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಜೊತೆ ಸಂಭ್ರಮಾಚರಿಸಿದ್ದಾರೆ. ಇದೇ ವೇಳೆ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
![10ವರ್ಷಗಳ ನಂತರ ದಿಲ್ಲಿ ಆಪತ್ತಿನಿಂದ ಪಾರಾಗಿದೆ- ಪ್ರಧಾನಿ ಮೋದಿ](https://cdn-vishwavani-prod.hindverse.com/media/original_images/modi_2.jpg)
ನರೇಂದ್ರ ಮೋದಿ.
![Profile](https://vishwavani.news/static/img/user.png)
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ(Delhi Election Result 2025) ಬಿಜೆಪಿ ಪ್ರಚಂಡ ಗೆಲುವು ಸಾಧಿಸಿ ಬರೋಬ್ಬರಿ 26ವರ್ಷಗಳ ನಂತರ ಗದ್ದುಗೆ ಏರಲು ತಯಾರಿ ನಡೆಸುತ್ತಿದೆ. ಈ ಭರ್ಜರಿ ಗೆಲುವಿನ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(PM Narendra Modi) ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ, ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದು, ದೆಹಲಿಯಲ್ಲಿ ತಲೆದೋರಿದ್ದ ಸಂಕಷ್ಟ ಇಂದಿಗೆ ಮುಗಿದಿದೆ. ಬಿಜೆಪಿಗೆ ಅವಕಾಶ ನೀಡಿದ್ದಕ್ಕೆ ಮತದಾರರಿಗೆ ಅನಂತ ಅನಂತ ಧನ್ಯವಾದ. ವಿಕಸಿತ ರಾಜಧಾನಿ ಮಾಡುವ ಅವಕಾಶ ನಮಗೆ ಸಿಕ್ಕಿದೆ ಎಂದಿದ್ದಾರೆ.
#WATCH | On BJP's victory in #DelhiElections2025, PM Narendra Modi says, "The people of Delhi have never disappointed me in the Lok Sabha elections. In the Lok Sabha elections in 2014, 2019 and 2024, the people of Delhi have made BJP victorious in all 7 seats." pic.twitter.com/9Pvox8zuXs
— ANI (@ANI) February 8, 2025
ಡಬಲ್ ಎಂಜಿನ್ ಸರ್ಕಾರದ ಮೂಲಕ ದೆಹಲಿ ಅಭಿವೃದ್ಧಿ ಸುಗಮವಾಯ್ತು.ಈ ಚುನಾವಣೆ ಆಪ್ ಮುಕ್ತ ದೆಹಲಿಯಲ್ಲಿ ಸೃಷ್ಟಿಸಿದೆ. ವಿಕಾಸ, ವಿಶ್ವಾಸ್, ವಿಶನ್ಗೆ ಸಿಕ್ಕ ಗೆಲುವಿದು. ಆಪ್ನ ದುರಾಡಳಿತ ಅಂತ್ಯವಾಗಿದೆ. ಜನಾದೇಶ ಸ್ಪಷ್ಟವಾಗಿದ್ದು, ಬಿಜೆಪಿಗೆ ಜೈಕಾರ ಹಾಕಿದ್ದಾರೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಆಡಳಿತ ನಡೆಸುವ ಭರವಸೆ ನೀಡುತ್ತೇವೆ. ಕಾರ್ಯಕರ್ತರು ಈ ವಿಜಯದ ಹಕ್ಕುದಾರರು. ದೆಹಲಿಯಲ್ಲಿ ಗೆಲ್ಲುವುದು ಕೋಟ್ಯಂತರ ಕಾರ್ಯಕರ್ತರ ಕನಸಾಗಿತ್ತು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi Election Results 2025: 27 ವರ್ಷಗಳ ಬಿಜೆಪಿಯ ವನವಾಸ ಅಂತ್ಯ; ಪ್ರಚಂಡ ಗೆಲುವಿಗೆ ಕಾರ್ಯಕರ್ತರ ಸಂಭ್ರಮಾಚರಣೆ
"ದಿಲ್ಲಿಯ ಜನರು ಇಂದು ಉತ್ಸಾಹ ತುಂಬಿದ್ದಾರೆ. ದಿಲ್ಲಿ ಈಗ 'ಆಪ್ದಾʼ (ವಿಪತ್ತು) ಮುಕ್ತವಾಗಿರುವುದರಿಂದ ಮತದಾರರು ನಿರಾಳರಾಗಿದ್ದಾರೆ. ನಾನು ದಿಲ್ಲಿ ಜನರಿಗೆ ಪತ್ರವನ್ನು ಬರೆದು ಅದರಲ್ಲಿ 21ನೇ ಶತಮಾನದಲ್ಲಿ ಅವರ ಸೇವೆ ಮಾಡಲು ಬಿಜೆಪಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ದಿಲ್ಲಿಯನ್ನು ಭಾರತದ ವಿಕಸಿತ (ಅಭಿವೃದ್ಧಿ ಹೊಂದಿದ) ರಾಜಧಾನಿಯನ್ನಾಗಿ ಮಾಡಬೇಕೆಂದು ನಾನು ಅವರಲ್ಲಿ ಆಗ್ರಹಿಸಿದ್ದೆ" ಎಂದು ಮೋದಿ ಆಪ್ ಮತ್ತು ಅದರ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ವಿರುದ್ದ ವಾಗ್ದಾಳಿ
ಅರವಿಂದ್ ಕೇಜ್ರಿವಾಲ್ ವಿರುದ್ದ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು, 10 ವರ್ಷಗಳ ಆಡಳಿತ ನಡೆಸಿದ ಆಪ್ ದಿಲ್ಲಿ ಮೆಟ್ರೋ ವಿಸ್ತರಣೆ ಕಾಮಗಾರಿಯನ್ನು ನಿಲ್ಲಿಸಿದೆ. ಅಲ್ಲದೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ದೂರಿದ್ದಾರೆ.
"ಗುಡಿಸಲುಗಳಲ್ಲಿ ವಾಸಿಸುವವರಿಗೆ ಶಾಶ್ವತ ಮನೆಗಳನ್ನು ಪಡೆಯಲು ಆಪ್ ಅವಕಾಶ ನೀಡಲಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯಡಿ ನೀಡುವ ವೈದ್ಯಕೀಯ ನೆರವನ್ನೂ ತಡೆದಿದೆ. ಅದಕ್ಕಾಗಿಯೇ ಮತದಾರರು ನಮ್ಮ ಡಬಲ್ ಇಂಜಿನ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ" ಎಂದು ಅವರು ಹೇಳಿದ್ದಾರೆ. ಬಿಜೆಪಿಯು ದಿಲ್ಲಿಯ ಜನರಿಗೆ ಉತ್ತಮ ಆಡಳಿತ ನೀಡಲಿದೆ ಎಂದು ಭರವಸೆ ಒದಗಿಸಿದ್ದಾರೆ.
ದಿಲ್ಲಿಯ ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ
ʼʼದಿಲ್ಲಿಯ ಜನರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಇಲ್ಲಿನ ಮತದಾರರು ಪ್ರೀತಿ, ವಿಶ್ವಾಸ ತೋರಿದ್ದಾರೆ.
ಅಭಿವೃದ್ಧಿ ಮೂಲಕ ಇದನ್ನು ದುಪ್ಪಟ್ಟು ಪ್ರಮಾಣದಲ್ಲಿ ನಿಮಗೆ ಹಿಂದಿರುಗಿಸುತ್ತೇವೆ ಎನ್ನುವ ಭರವಸೆಯನ್ನು ನೀಡುತ್ತಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ. ದಿಲ್ಲಿಯ ಜನರು ರಾಜಕೀಯ ಕುತಂತ್ರ, ಸುಳ್ಳು ಭರವಸೆಯನ್ನು ತಿರಸ್ಕರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.