Viral Video: ಮಾರ್ಕೆಟ್‌ನಲ್ಲಿ ಜುಟ್ಟು ಹಿಡಿದುಕೊಂಡು ಹೊಡೆದಾಡಿದ ಮಹಿಳೆಯರು; ಅಷ್ಟಕ್ಕೂ ಆಗಿದ್ದೇನು?
ದಿಲ್ಲಿಯ ಸರೋಜಿನಿ ನಗರದ ಮಾರುಕಟ್ಟೆಯಲ್ಲಿ ಇಬ್ಬರು ಮಹಿಳೆಯರು ಡ್ರೆಸ್ ವಿಚಾರಕ್ಕೆ ಸಾರ್ವಜನಿಕವಾಗಿ ಜುಟ್ಟು ಜುಟ್ಟು ಹಿಡಿದುಕೊಂಡು ಜಗಳವಾಡಿದ್ದಾರೆ. ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜಗಳದ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಡ್ರೆಸ್ ವಿಚಾರಕ್ಕೆ ಈ ಜಗಳ ಶುರುವಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.


ನವದೆಹಲಿ: ದಿಲ್ಲಿಯಲ್ಲಿ ಯಾವಾಗಲೂ ಫ್ಯಾಷನ್ ವಿಚಾರದಲ್ಲಿ ಸದ್ದು ಮಾಡುತ್ತಿದ್ದ ಸರೋಜಿನಿ ನಗರದ ಮಾರುಕಟ್ಟೆಯು ಈ ಬಾರಿ ಮಹಿಳೆಯ ನಡುವಿನ ಬೀದಿ ಜಗಳದ ವಿಚಾರಕ್ಕೆ ಸುದ್ದಿಯಾಗಿದೆ. ಡ್ರೆಸ್ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಮಾರುಕಟ್ಟೆಯ ಮಧ್ಯದಲ್ಲಿ ಮಾರಾಮಾರಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ಜಗಳ ಸಾರ್ವಜನಿಕ ಸ್ಥಳದಲ್ಲಿ ನಡೆದ ಕಾರಣ ಇವರ ಜಗಳ ನೋಡಲು ಜನಸಾಗರವೇ ಅಲ್ಲಿ ತುಂಬಿತ್ತು.
ವೈರಲ್ ಆದ ವಿಡಿಯೊದಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಕಪಾಳಮೋಕ್ಷ ಮಾಡುವುದು, ಕೋಪದಿಂದ ಕಿರುಚುವುದು, ಕೂದಲು ಎಳೆಯುವುದು ಮತ್ತು ಪರಸ್ಪರ ಹೊಡೆದಾಡಿಕೊಂಡ ದೃಶ್ಯ ಸೆರೆಯಾಗಿವೆ. ಇವರ ಜಗಳ ಕಂಡು ಆಘಾತಕ್ಕೊಳಗಾದ ಅಂಗಡಿಯವರು ಜಗಳ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಇಬ್ಬರೂ ಮಹಿಳೆಯರು ಮಾತ್ರ ಪಟ್ಟು ಬಿಡದೇ ಜಗಳವಾಡಿದ್ದಾರೆ.
ಜಗಳದ ವಿಡಿಯೊ ಇಲ್ಲಿದೆ ನೋಡಿ...
#दिल्ली की मशहूर सरोजिनी नगर मार्केट से जुड़ा एक वीडियो सोशल मीडिया पर तेजी से #वायरल हो रहा है, जिसमें दो महिलाओं के बीच एक ही कपड़ा खरीदने को लेकर जबरदस्त कहासुनी और झगड़ा होता नजर आ रहा है। बताया जा रहा है कि दोनों महिलाएं एक ही कपड़े को खरीदना चाहती थीं, जिसके बाद बहस इतनी… pic.twitter.com/giQHMOOCaZ
— UttarPradesh.ORG News (@WeUttarPradesh) April 9, 2025
ಜಗಳದ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಡ್ರೆಸ್ ವಿಚಾರಕ್ಕೆ ಈ ಜಗಳ ಶುರುವಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಈ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ವೈರಲ್ ಆಗಿದೆ. ಕೆಲವರು ಅವರ ಜಗಳ ಕಂಡು ಬಿದ್ದು ಬಿದ್ದು ನಕ್ಕಿದ್ದಾರೆ. "ಸರೋಜಿನಿಯಲ್ಲಿ ಮಾತ್ರ ಫ್ಯಾಷನ್ ಹೀಗೆ ಯುದ್ಧವಾಗಿ ಬದಲಾಗಬಹುದು" ಎಂದು ತಮಾಷೆ ಮಾಡಿದ್ದಾರೆ. ಕೆಲವರು "ಕೊನೆಯಲ್ಲಿ ಅವಳಿಗೆ ಉಡುಗೆ ಸಿಕ್ಕಿದೆಯೇ?" ಎಂದು ಕೇಳಿದ್ದಾರೆ. ಸದ್ಯಕ್ಕೆ ಈ ಘಟನೆಯ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಂಡ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಹೆಚ್ಚಿನ ಫ್ಯಾಷನ್ ವಸ್ತುಗಳ ಖರೀದಿಗೆ ಮತ್ತು ಚೌಕಾಸಿಗೆ ಭಾರೀ ಹೆಸರುವಾಸಿಯಾದ ದಿಲ್ಲಿಯ ಸರೋಜಿನಿ ನಗರ ಮಾರುಕಟ್ಟೆ ಹಲವು ವರ್ಷಗಳಿಂದ ಕೈಗೆಟುಕುವ ಟ್ರೆಂಡಿಂಗ್ ಡ್ರೆಸ್‍ಗಳಿಗೆ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ ಬಣ್ಣ ಬಣ್ಣದ ಬಟ್ಟೆಗಳು, ಪರ್ಸ್‍ಗಳು ಮತ್ತು ಬ್ಯಾಗ್‍ಗಳು ಸಿಗುತ್ತವೆ.
ಈ ಸುದ್ದಿಯನ್ನೂ ಓದಿ:Viral Video: ರೀಲ್ ಮಾಡಲು ಹಳಿಯ ಮೇಲೆ ಮಲಗಿದ್ದ ಯುವಕನ ಮೇಲೆ ಹಾದುಹೋದ ರೈಲು; ವಿಡಿಯೊ ಇಲ್ಲಿದೆ
ಮಹಿಳೆಯರು ಕ್ಷುಲಕ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಕಿತ್ತಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ದಿಲ್ಲಿ ಮೆಟ್ರೋದಲ್ಲಿ ಇಬ್ಬರು ಮಹಿಳೆಯರು ಜಗಳವಾಡುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ ಹಂಚಿಕೊಂಡಿರುವ ಈ ವೈರಲ್ ವಿಡಿಯೊದಲ್ಲಿ, ಅವರಲ್ಲಿ ಇಬ್ಬರು ಒಬ್ಬರನ್ನೊಬ್ಬರು ಹೊರದೂಡುವುದು ಸೆರೆಯಾಗಿತ್ತು. ವಾಗ್ವಾದದಲ್ಲಿ ತೊಡಗಿರುವ ಮಹಿಳೆಯರಲ್ಲಿ ಒಬ್ಬರು ತಮ್ಮ ಶೂ ಅನ್ನು ತೆಗೆದುಕೊಂಡು ಇನ್ನೊಬ್ಬರ ಮೇಲೆ ದಾಳಿ ಮಾಡಲು ಮುಂದಾದರೆ ಇನ್ನೊಬ್ಬಳು ತನ್ನ ನೀರಿನ ಬಾಟಲಿಯಿಂದ ದಾಳಿ ಮಾಡಲು ಮುಂದಾಗಿ ನೀರನ್ನು ಆಕೆಯ ಮೇಲೆ ಎರಚಿದ್ದಳು. ಇತರ ಪ್ರಯಾಣಿಕರು ಅವರ ಜಗಳವನ್ನು ತಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು.