ಪುಸ್ತಕೋದ್ಯಮ ಸಮುದ್ರವಿದ್ದಂತೆ, ಅದೆಂದು ಬತ್ತುವುದಿಲ್ಲ
ಕರ್ನಾಟಕದಲ್ಲಿ ಓದುಗರ ಸಂಖ್ಯೆಗೆ ಕೊರತೆಯಿಲ್ಲ. ಆದರೆ ಓದುಗರಿಗೆ ಹೊಸ ಪುಸ್ತಕ ಬಂದಿದೆ ಎನ್ನುವುದನ್ನು ಹಾಗೂ ತಲುಪಿಸುವುದನ್ನು ಪ್ರಕಾಶನ ಸಂಸ್ಥೆಗಳು ಮಾಡಬೇಕಿದೆ. ಪುಸ್ತಕೋ ದ್ಯಮ ಎನ್ನುವ ವಿಶಾಲ ಸಮುದ್ರ ಎಂದಿಗೂ ಬತ್ತುವುದಿಲ್ಲ ಎನ್ನುವುದು ನನ್ನ ವಿಶ್ವಾಸ ಎಂದು ವೀರಲೋಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ. ಪ್ರಕಾಶನ ಕ್ಷೇತ್ರದಲ್ಲಿಯೇ ಮೊದಲ ಬಾರಿಗೆ ವಾರ್ಷಿಕ ಆದಾಯ ವನ್ನು ಬಿಡುಗಡೆ ಗೊಳಿಸಿರುವ ವೀರಕಪುತ್ರ ಶ್ರೀನಿವಾಸ್ ಅವರು, ಕನ್ನಡ ಪುಸ್ತಕೋದ್ಯ ಮದ ಅವಕಾಶ, ಕೊಂಡು ಓದುವವರ ಸಂಖ್ಯೆ, ಸರಕಾರದಿಂದ ಆಗಬೇಕಿರುವ ಸಹಾಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತ ನಾಡಿದ್ದಾರೆ


ಕರ್ನಾಟಕದಲ್ಲಿ ಓದುಗರ ಸಂಖ್ಯೆಗೆ ಕೊರತೆಯಿಲ್ಲ. ಆದರೆ ಓದುಗರಿಗೆ ಹೊಸ ಪುಸ್ತಕ ಬಂದಿದೆ ಎನ್ನುವುದನ್ನು ಹಾಗೂ ತಲುಪಿಸುವುದನ್ನು ಪ್ರಕಾಶನ ಸಂಸ್ಥೆಗಳು ಮಾಡಬೇಕಿದೆ. ಪುಸ್ತಕೋದ್ಯಮ ಎನ್ನುವ ವಿಶಾಲ ಸಮುದ್ರ ಎಂದಿಗೂ ಬತ್ತುವುದಿಲ್ಲ ಎನ್ನುವುದು ನನ್ನ ವಿಶ್ವಾಸ ಎಂದು ವೀರಲೋಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ. ಪ್ರಕಾಶನ ಕ್ಷೇತ್ರದಲ್ಲಿಯೇ ಮೊದಲ ಬಾರಿಗೆ ವಾರ್ಷಿಕ ಆದಾಯ ವನ್ನು ಬಿಡುಗಡೆ ಗೊಳಿಸಿರುವ ವೀರಕಪುತ್ರ ಶ್ರೀನಿವಾಸ್ ಅವರು, ಕನ್ನಡ ಪುಸ್ತಕೋದ್ಯ ಮದ ಅವಕಾಶ, ಕೊಂಡು ಓದುವವರ ಸಂಖ್ಯೆ, ಸರಕಾರದಿಂದ ಆಗಬೇಕಿರುವ ಸಹಾಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಕನ್ನಡ ಪುಸ್ತಕೋದ್ಯಮದ ಪರಿಸ್ಥಿತಿ ಹೇಗಿದೆ?
ಪುಸ್ತಕೋದ್ಯಮ ಎಂಬುದು ಒಂದು ವಿಶಾಲ ಸಮುದ್ರವಿದ್ದಂತೆ ಅದು ಎಂದಿಗೂ ಬತ್ತುವುದಿಲ್ಲ. ಪ್ರತಿ ವರ್ಷ 12 ಸಾವಿರಕ್ಕೂ ಅಧಿಕ ಹೊಸ ಪುಸ್ತಕಗಳು ಮಾರುಕಟ್ಟೆಗೆ ಬರುತ್ತಿವೆ. ಯುವ ಲೇಖಕರ ವಿಭಿನ್ನ ಸಾಹಿತ್ಯಗಳಿಂದಾಗಿ ಅದರ ಶ್ರೀಮಂತಿಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳಿವೆ. ಓದುಗರಿರು ವವರೆಗೂ ಪುಸ್ತಕೋದ್ಯಮ ಎಂದಿಗೂ ಕುಸಿಯುವುದಿಲ್ಲ. ಆದರೆ ಪುಸ್ತಕೋದ್ಯಮದ ವಹಿವಾಟು ಮುಚ್ಚಿದ ಕಪಾಟಿನಲ್ಲಿಟ್ಟಿರುವುದರಿಂದ ಜನರಿಗೆ ಈ ಬಗ್ಗೆ ತಿಳಿಯುತ್ತಿಲ್ಲ. ಸಾಹಿತ್ಯ ಸೇವೆಯೊಂದಿಗೆ ಪುಸ್ತಕೋದ್ಯಮವೂ ಉದ್ಯಮ ಎಂಬುದನ್ನು ಅರಿಯಬೇಕಿದೆ.
ಇದನ್ನೂ ಓದಿ: Ravi Hunj Column: ಜನಕನ ಆಸ್ಥಾನವೂ, ಅನುಭವ ಮಂಟಪವೂ
ಕೊಂಡು ಓದುವವರ ಸಂಖ್ಯೆ ಕಡಿಮೆಯಿದೆ ಎನ್ನುವ ಆರೋಪವಿದೆಯಲ್ಲ?
ಮಾರುಕಟ್ಟೆಗೆ ಹೊಸದೊಂದು ವಸ್ತು ಬಂದರೆ ಅದು ಜನರಿಗೆ ತಿಳಿಯುವುದು ಹೇಗೆ? ಅದಕ್ಕೆ ನೀಡುವ ಪ್ರಚಾರದಿಂದ. ಹಾಗೆಯೇ ಪುಸ್ತಕೋದ್ಯಮವೂ ಇದರ ಹೊರತಾಗಿಲ್ಲ. ಪ್ರಕಾಶನ ಸಂಸ್ಥೆಯೊಂದು ಒಂದು ಪುಸ್ತಕವನ್ನು ಮಾರುಕಟ್ಟೆಗೆ ತರುತ್ತಿದೆ ಎಂದರೆ ಮೊದಲು ಅದಕ್ಕೆ ಪ್ರಚಾರ ನೀಡುವುದರೊಂದಿಗೆ ಜನರಿಗೆ ಸರಳವಾಗಿ ದೊರೆಯುವಂತಾಗಬೇಕು. ಈಗ ಯಾವುದೋ ಗ್ರಾಮಾಂತರ ಭಾಗದ ಓದುಗ ಒಂದು ಪುಸ್ತಕ ಕೊಳ್ಳಬೇಕೆಂದರೆ ಅವನು ನಗರದ ಯಾವುದೋ ಭಾಗದಲ್ಲಿರುವ ಮಳಿಗೆ ಹುಡುಕಿ ಹೋಗಬೇಕು. ಇದರ ಬದಲು ಅವನಿರುವ ಜಾಗದಲ್ಲೇ ಪುಸ್ತಕ ದೊರೆತರೆ ಖಂಡಿತ ಅವನು ಖರೀದಿಸುತ್ತಾನೆ. ಕರ್ನಾಟಕ ದಲ್ಲಿ ಓದುಗರ ಸಂಖ್ಯೆ ಕುಸಿದಿಲ್ಲ ಎನ್ನುವುದಕ್ಕೆ ಸಾವಿರಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಉಳಿದಿವೆ.
ವೀರಲೋಕದ ಒಂದುವರೆ ಕೋಟಿ ವಹಿವಾಟಿನ ಗುಟ್ಟೇನು?
ವೀರಲೋಕ ಪುಸ್ತಕ ಪ್ರಕಾಶನ ಸಂಸ್ಥೆ ಆರಂಭಗೊಂಡು ಎರಡು ವರ್ಷ ಕಳೆದಿದೆ. ಆರಂಭ ದಲ್ಲಿಯೇ ನಮಗೆ ಸಿಕ್ಕ ವಿಷಯವೇನೆಂದರೆ ಹರಿವ ನೀರಿಗೆ ಬೆಲೆ ಜಾಸ್ತಿ, ನಿಂತ ನೀರಲ್ಲಿ ಹೆಚ್ಚೆಂದರೆ ಕೇವಲ ಪಾಚಿ ಕಟ್ಟಬಹುದಷ್ಟೆ. ಆದ್ದರಿಂದ ನಾವು ರಾಜ್ಯದ ಮೂಲೆ ಮೂಲೆ ಯಲ್ಲಿ ನಡೆಯುವ ಜಾತ್ರೆ, ಸಮಾರಂಭ, ಪುಸ್ತಕ ಮೇಳಗಳಲ್ಲಿ ನಮ್ಮ ಪ್ರಕಾಶನದ ಮಳಿಗೆ ಇಡುತ್ತಿದ್ದೆವು. ಹಾಗೆಯೇ ವಿದ್ಯಾರ್ಥಿಗಳಿಗೆ ಒಂದು ಅರೆಕಾಲಿಕ ಉದ್ಯೋಗವಕಾಶ ನೀಡುವ ಸಲುವಾಗಿ ಸ್ವಯಂ ಕೃಷಿ ಎಂಬ ಹೆಸರಿನಲ್ಲಿ, ಹೆಚ್ಚು ಜನ ಸೇರುವ ಜಾಗಗಳಲ್ಲಿ ಪುಸ್ತಕ ಮಳಿಗೆ ಇರಿಸಿ ಓದುಗರಿಗೆ ಸುಲಭವಾಗಿ ಪುಸ್ತಕಗಳು ದೊರೆಯುವಂತೆ ಮಾಡಿದೆವು. ಇವುಗಳ ಜತೆಜತೆಗೆ ಆನ್‌ಲೈನ್ ಮಾರ್ಕೆಟಿಂಗ್, ಡಿಜಿಟಲ್ ಮಾರ್ಕೆಟಿಂಗ್‌ಗಳಿಗೆ ಹೆಚ್ಚು ಒತ್ತು ನೀಡಿ ದ್ದರಿಂದ ವೀರಲೋಕ ಪುಸ್ತಕ ಪ್ರಕಾಶನ ಸಂಸ್ಥೆ ಕಳೆದ ವರ್ಷದಲ್ಲಿ ಒಂದು ಕೋಟಿಗೂ ಅಧಿಕ ವಹಿವಾಟು ನಡೆಸಲು ಸಾಧ್ಯವಾಯಿತು.
ನಿಜಕ್ಕೂ ಕನ್ನಡ ಪುಸ್ತಕ ಓದುಗರ ಸಂಖ್ಯೆ ಕಡಿಮೆ ಇದೆಯೇ?
ಕರ್ನಾಟಕದಲ್ಲಿ ಹೇಗೆ ಕನ್ನಡಿಗ ಸಂಖ್ಯೆ ಕುಸಿಯುವುದಿಲ್ಲವೋ, ಹಾಗೆಯೆ ಕನ್ನಡ ಪುಸ್ತಕ ಓದುರ ಸಂಖ್ಯೆ ಕುಸಿದಿಲ್ಲ. ಅದು ದಿನೇ ದಿನೇ ಹೆಚ್ಚುತ್ತಿದೆ. ಈ ಹಿಂದೆ ಧೀಮಂತ ಲೇಖಕರಾದ ಕುವೆಂಪು, ಬೇಂದ್ರೆ ಅವರ ಸಾಹಿತ್ಯಗಳನ್ನು ಓದುಗರು ಎಷ್ಟು ಇಷ್ಟ ಪಟ್ಟು ಓದುತ್ತಿದ್ದರು? ಗ ಅವರ ಸಾಹಿತ್ಯದ ಜತೆಜತೆಗೆ ಆಧುನಿಕ ಜಗತ್ತಿಗೆ ಬೇಕಾದ ಪುಸ್ತಕಗಳು ಕನ್ನಡದಲ್ಲಿ ಬರುತ್ತಿವೆ. ಸಾಲದೆಂಬಂತೆ ಕರ್ನಾಟಕದಲ್ಲಿ ಅಕ್ಷರಸ್ಥರು ಕೂಡ ಹೆಚ್ಚುತ್ತಿದ್ದಾರೆ. ಹೀಗಿರು ವಾಗ ಕನ್ನಡ ಓದುಗರ ಸಂಖ್ಯೆ ಕ್ಷೀಣಿಸುವುದಾದರೂ ಹೇಗೆ? ಆದರೆ ಓದುಗರಿಗೆ ಹೊಸದಾಗಿ ಬರುವ ಪುಸ್ತಕಗಳ ಬಗ್ಗೆ ತಿಳಿಯುವಂತೆ ಮಾಡಬೇಕು.
ವಾರ್ಷಿಕ ವರದಿ ಬಿಡುಗಡೆ ಹಿಂದಿನ ಉದ್ದೇಶವೇನು?
ಪ್ರತಿ ಉದ್ಯಮ ಕ್ಷೇತ್ರದಲ್ಲಿ ವಾರ್ಷಿಕವಾಗಿ ವರದಿ ಬಿಡುಗಡೆ ಮಾಡುತ್ತಾರೆ, ಪ್ರಸ್ತಕ ವರ್ಷ ದಲ್ಲಿ ಇಂತಿಷ್ಟು ವ್ಯಾಪಾರ ವಹಿವಾಟು ನಡೆದಿದೆ ಎಂದು. ಆದರೆ ಪುಸ್ತಕೋದ್ಯಮದಲ್ಲಿ ಯಾರೂ ಕೂಡ ತಮ್ಮ ವಹಿವಾಟಿನ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಲಿಲ್ಲ. ಇದರಿಂದಾಗಿ ಪುಸ್ತಕೋದ್ಯಮ ಎಂದರೆ ಅದರಲ್ಲಿ ಹಣವಿಲ್ಲ ಅದೊಂದು ಕೇವಲ ಸಾಹಿತ್ಯ ಸೇವೆಯಷ್ಟೆ, ಹೂಡಿಕೆ ಮಾಡಿದ್ದು ಕೂಡ ಹಿಂತಿರುಗುವುದಿಲ್ಲ ಎನ್ನುವ ಮನೋಭಾವ ಎಲ್ಲರಲ್ಲಿ ಬೆಳೆದಿದೆ. ಆದ್ದರಿಂದ ಈ ಉದ್ಯಮಕ್ಕೆ ಹೊಸಬರು ಬರಲಿಲ್ಲ. ವೀರ ಲೋಕ ಪ್ರಕಾಶನ ಈ ಮನಸ್ಥಿತಿ ಬದಲಾಯಿಸಿ ಪುಸ್ತಕೋದ್ಯಮದಲ್ಲಿ ಕೂಡ ಹಣವಿದೆ ಎಂಬುದನ್ನು ತೋರಿಸಿ ಹೊಸಬರನ್ನು ಈ ಉದ್ಯಮದೆಡೆ ಆಕರ್ಷಿಸಬೇಕೆಂಬ ಉದ್ದೇಶದಿಂದ ಈ ಬಾರಿ ವಾರ್ಷಿಕ ವರದಿ ಬಿಡುಗಡೆ ಮಾಡಲಾಯಿತು.
ಪ್ರಕಾಶನ ಸಂಸ್ಥೆಯ ಅಭಿವೃದ್ಧಿಗೆ ಪಾಲಿಸಬೇಕಿರುವ ವಿಷಯಗಳೇನು?
ಪ್ರಕಾಶನ ಸಂಸ್ಥೆಯೊಂದು ಅಭಿವೃದ್ಧಿ ಹೊಂದಬೇಕಾದರೆ ಪಾಲಿಸಬೇಕಾದ ವಿಷಯಗಳಲ್ಲಿ ವೃತ್ತಿ ಪರತೆ ಮೊದಲನೆಯದಾಗಿದೆ. ಇದನ್ನು ಸಾಹಿತ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಒಂದು ಉದ್ಯಮ ವಾಗಿ ಭಾವಿಸಿ ಮುಂದುವರಿಯಬೇಕು. ಸಂಸ್ಥೆಯು ತನ್ನದೇ ಆದ ಗುರಿ ಹೊಂದಿ ಅದನ್ನು ಸಾಽಸಲು ಬೇಕಾಗುವ ತಯಾರಿ ಮಾಡಬೇಕಿದೆ. ಹೊಸ ಪ್ರಯೋಗದಿಂದ ಮಾತ್ರ ಉದ್ಯಮ ಯಶಸ್ವಿಯಾಗಲು ಸಾಧ್ಯ. ಸಂಸ್ಥೆಗಳು ತಮ್ಮ ಗುರಿ ಮುಟ್ಟುವುದಕ್ಕಾಗಿ ಮಿತಿ ಮೀರಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರೊಂದಿಗೆ ಕೃತಿ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಪ್ರಕಾಶನ ಸಂಸ್ಥೆಯ ಎಲ್ಲಾ ಪ್ರಯತ್ನಗಳಿಗೆ ಫಲ ಸಿಗಬೇಕಾದರೆ ಕೃತಿ ಆಯ್ಕೆ ಬಹಳ ಮುಖ್ಯವಾಗಿದೆ. ಲೇಖಕರ ಎಲ್ಲಾ ಕೃತಿಗಳು ಶ್ರೇಷ್ಠ ಸಾಹಿತ್ಯವಾಗಿರುವುದಿಲ್ಲ, ಅವೆಲ್ಲವೂ ಪ್ರಕಟಣೆಗೆ ಅರ್ಹವಿರುವು ದಿಲ್ಲ. ಆದ್ದರಿಂದ ಕೃತಿ ಆಯ್ಕೆಗೆ ಒಂದು ಸಮಿತಿ ರಚಿಸಿ ಆ ಕೃತಿ ಪ್ರಸ್ತುತವೋ, ಪ್ರಕಟಣೆಗೆ ಯೋಗ್ಯವೋ ಎಂದು ನಿರ್ಧರಿಸಬೇಕಾಗುತ್ತದೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಮಾರ್ಕೆಟಿಂಗ್ ಪ್ರಮುಖವಾಗುತ್ತದೆ. ಹೊಸ ವಸ್ತು ಯಾವುದೋ ಒಂದು ಮಾರುಕಟ್ಟೆಗೆ ಬಂದಿದೆ ಎಂದು ಜನರಿಗೆ ತಿಳಿಯುವುದು ಹೇಗೆ ಅದರ ಜಾಹೀರಾತಿ ನಿಂದ. ಹಾಗೆಯೇ ಪ್ರಕಾಶನ ಸಂಸ್ಥೆ ಒಂದು ಪುಸ್ತಕ ಮಾರುಕಟ್ಟೆಗೆ ತರಬೇಕೆಂದರೆ, ಲೇಖಕರ ಜತೆಗೂಡಿ ಪುಸ್ತಕದ ಸಾರ ಓದುಗರಿಗೆ ತಲುಪುವಂತೆ ಮಾಡ ಬೇಕು. ಪುಸ್ತಕಗಳು ಮೊದಲು ಜನ ಸಂದಣಿ ಇರುವ ಜಾಗಗಳಿಗೆ ಬರಬೇಕು ತದನಂತರ ಜನರೇ ಪುಸ್ತಕಗಳಿರುವ ಜಾಗ ಹುಡುಕಿಕೊಂಡು ಬರುತ್ತಾರೆ.
*
ಸರಕಾರದ ಇತ್ತೀಚೆಗೆ ಅನುಷ್ಠಾನಗೊಳಿಸಿರುವ ಮನೆಗೊಂದು ಗ್ರಂಥಾಲಯ ಯೋಜನೆ ನಿಜಕ್ಕೂ ಸ್ವಾಗತಾರ್ಹ. ಇದರಿಂದ ಪ್ರಕಾಶನ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಮಾರಾಟ ಮಾಡಬಹುದು. ಆದರೆ ಗಮನ ಹರಿಸಬೇಕಾದ ವಿಷಯವೇನೆಂದರೆ ಸರಕಾರ ಅನುಷ್ಠಾನಗೊಳಿಸಿರುವ ಈ ಯೋಜನೆ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎನ್ನುವುದು. ಜನರೂ ಈ ಯೋಜನೆಯನ್ನು ಸ್ವಯಂ ಪ್ರೇರಣೆಯಿಂದಾಗಿ ತಮ್ಮ ಮನೆ ಗಳಲ್ಲಿ ಪುಟ್ಟದೊಂದು ಗ್ರಂಥಾಲಯ ತೆರೆಯಬೇಕು.
-ವೀರಕಪುತ್ರ ಶ್ರೀನಿವಾಸ್, ವೀರಲೋಕ ಮುಖ್ಯಸ್ಥ
*
ಸಾಹಿತ್ಯದಲ್ಲಿ ಗುಣಮಟ್ಟದ ಪುಸ್ತಕದ ಕೊರತೆಯಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು.
ಕನ್ನಡದಲ್ಲಿ ಪ್ರವಾಸ, ನಳಪಾಕದಿಂದ ಹಿಡಿದು ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ.
ಪ್ರಕಾಶನ ಸಂಸ್ಥೆಗಳು ಸರಕಾರದಿಂದ ಯಾವುದೇ ಅನುದಾನ ನಿರೀಕ್ಷಿಸುವುದಿಲ್ಲ.
ಆದರೆ ಸರಕಾರ ರಾಜ್ಯದ ಪ್ರತಿ ತಾಲೂಕು ಮಟ್ಟದಲ್ಲಿ ಪುಸ್ತಕ ಮಳಿಗೆ ಪ್ರಾರಂಭಿಸಬೇಕು