ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

WPL 2025: 8 ಸಿಕ್ಸರ್‌ ಸಿಡಿಸುವ ಮೂಲಕ ವಿಶೇಷ ದಾಖಲೆ ಬರೆದ ಆಶ್ಲೀ ಗಾರ್ಡ್ನರ್!

Ashleigh Gardner hit 8 sixes against RCB: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಟೂರ್ನಿಯ ಮೊದಲನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಗುಜರಾತ್‌ ಜಯಂಟ್ಸ್‌ ಆಟಗಾರ್ತಿ ಆಶ್ಲೀ ಗಾರ್ಡ್ನರ್‌ ಎಂಟು ಸಿಕ್ಸರ್‌ಗಳನ್ನು ಸಿಡಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಆರ್‌ಸಿಬಿ ಎದುರು 8 ಸಿಕ್ಸರ್‌ ಸಿಡಿಸಿ ದಾಖಲೆ ಬರೆದ ಆಶ್ಲೀ ಗಾರ್ಡ್ನರ್‌!

Ashleigh Gardner hit 8 sixes against RCB

Profile Ramesh Kote Feb 14, 2025 11:25 PM

ವಡೋದರ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಟೂರ್ನಿಯ ಮೊದಲನೇ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ತಂಡದ ಆಶ್ಲೀ ಗಾರ್ಡ್ನರ್‌ (Ashleigh Gardner) ಅವರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಪಂದ್ಯದ ಇನಿಂಗ್ಸ್‌ನಲ್ಲಿ ಭರ್ಜರಿ ಎಂಟು ಸಿಕ್ಸರ್‌ಗಳನ್ನು ಸಿಡಿಸಿದ ಅವರು ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ಇಲ್ಲಿನ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಪರ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಆಶ್ಲೀ ಗಾರ್ಡ್ನರ್‌, ಕೇವಲ 37 ಎಸೆತಗಳಲ್ಲಿ 79 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಈ ಇನಿಂಗ್ಸ್‌ನಲ್ಲಿ ಅವರು 8 ಸಿಕ್ಸರ್‌ ಹಾಗೂ 3 ಬೌಂಡರಿಗಳನ್ನು ಬಾರಿಸಿದರು. ಇವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಗುಜರಾತ್‌ ಜಯಂಟ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 201 ರನ್‌ಗಳನ್ನು ಕಲೆ ಹಾಕಿತ್ತು.

ನಾಲ್ಕನೇ ಕ್ರಮಾಂಕದಲ್ಲಿ ಕ್ರಿಸ್‌ಗೆ ಇಳಿದಿದ್ದ ಅವರು ಬರೋಬ್ಬರು 8 ಸಿಕ್ಸರ್‌ಗಳನ್ನು ಸಿಡಿಸಿದರು. ಆ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಮಹಿಲಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ರಥಮ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ವುಮೆನ್‌ ಎಂಬ ದಾಖಲೆಯನ್ನು ಆಶ್ಲೀ ಗಾರ್ಡ್ನರ್‌ ಬರೆದಿದ್ದಾರೆ. ಅಲ್ಲದೆ ಪ್ರಥಮ ಇನಿಂಗ್ಸ್‌ನಲ್ಲಿ ಎಂಟು ಸಿಕ್ಸರ್‌ ಬಾರಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2023ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸೋಫಿ ಡಿವೈನ್‌ ಅವರು ಇನಿಂಗ್ಸ್‌ವೊಂದರಲ್ಲಿ ಎಂಟು ಸಿಕ್ಸರ್‌ ಬಾರಿಸಿದ್ದರು. ಗುಜರಾತ್‌ ಜಯಂಟ್ಸ್‌ ವಿರುದ್ಧದ ಈ ಪಂದ್ಯದಲ್ಲಿ ಸೋಫಿ ಡಿವೈನ್‌ 99 ರನ್‌ಗಳನ್ನು ಬಾರಿಸಿದ್ದರು. ಈ ಸ್ಪೋಟಕ ಇನಿಂಗ್ಸ್‌ನಲ್ಲಿ ಅವರು ಎಂಟು ಸಿಕ್ಸರ್‌ ಜೊತೆಗೆ 9 ಬೌಂಡರಿಗಳನ್ನು ಬಾರಿಸಿದ್ದರು.

WPL 2025: ಪರಿಷ್ಕೃತಗೊಂಡ ಡಬ್ಲ್ಯುಪಿಎಲ್‌ ತಂಡಗಳ ಪಟ್ಟಿ ಹೀಗಿದೆ

ಡಬ್ಲ್ಯುಪಿಎಲ್‌ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರ್ತಿಯರು

  • ಸೋಫಿ ಡಿವೈನ್‌: ಎರಡನೇ ಇನಿಂಗ್ಸ್‌ಗಳಲ್ಲಿ 8 ಸಿಕ್ಸರ್‌ಗಳು (2023)
  • ಆಶ್ಲೀ ಗಾರ್ಡ್ನರ್‌: ಪ್ರಥಮ ಇನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳು (2025)
  • ಶಫಾಲಿ ವರ್ಮಾ: ಎರಡನೇ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳು (2023)
  • ಎಲಿಸ್‌ ಪೆರಿ: ಪ್ರಥಮ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳು (2023)
  • ಅಲೈಸ್‌ ಕಾಪ್ಸಿ: ಎರಡನೇ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳು (2023)
  • ಹರ್ಮನ್‌ಪ್ರೀತ್‌ ಕೌರ್‌: ಎರಡನೇ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳು (2024)
  • ಶಫಾಲಿ ವರ್ಮಾ: ಎರಡನೇ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳು (2023)


ಗುಜರಾತ್‌ ಜಯಂಟ್ಸ್‌ಗೆ ಸೋಲು

ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ ಆಶ್ಲೀ ಗಾರ್ಡ್ನರ್‌ ಜತೆಗೆ ಬೆಥ್‌ ಮೂನಿ ಕೂಡ ಆರಂಭದಲ್ಲಿ ಅಬ್ಬರಿಸಿದ್ದರು. ಅವರು ಆಡಿದ್ದ 42 ಎಸೆತಗಳಲ್ಲಿ 56 ರನ್‌ಗಳನ್ನು ಸಿಡಿಸಿದ್ದರು. ಅಂತಿಮವಾಗಿ ಗುಜರಾತ್‌ ಜಯಂಟ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳನು ಕಲೆ ಹಾಕಿತು. ಆ ಮೂಲಕ ಆರ್‌ಸಿಬಿಗೆ 202 ರನ್‌ಗಳ ಗುರಿಯನ್ನು ನೀಡಿತು.

ಬಳಿಕ ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಆಶ್ಲೀ ಗಾರ್ಡ್ನರ್‌ ಬೌಲಿಂಗ್‌ನಲ್ಲಿ ಆರಂಭಿಕ ಆಘಾತ ನೀಡಿದ್ದರು. ನಾಯಕಿ ಸ್ಮೃತಿ ಮಂಧಾನಾ ಮತ್ತು ಡೇನಿಯಲ್‌ ವ್ಯಾಟ್‌ ಹಾಡ್ಜ್‌ ಅವರನ್ನು ಔಟ್‌ ಮಾಡಿದ್ದರು. ಆ ಮೂಲಕ ಆರ್‌ಸಿಬಿ 14 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಎಲಿಸ್‌ ಪೆರಿ (57 ರನ್)‌ ಹಾಗೂ ರಿಚಾ ಘೋಷ್‌ (64*) ಅವರ ಸ್ಪೋಟಕ ಅರ್ಧಶತಕಗಳಿಂದ ಆರ್‌ಸಿಬಿ, ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗಡಿ ದಾಟಿತು.