Tea Plantations: ಚಹಾದ ತೋಟಗಳಿಗೆ ಪ್ರಸಿದ್ಧಿಯಾಗಿರುವ ಭಾರತದ ಅದ್ಭುತ ತಾಣಗಳಿವು!
ಮಂಜಿನಿಂದ ಆವೃತವಾಗಿರುವ ಹಿಮಾಲಯದ ತಪ್ಪಲಿನಿಂದ ಪಶ್ಚಿಮ ಘಟ್ಟಗಳ ರೋಲಿಂಗ್ ಬೆಟ್ಟಗಳವರೆಗೆ, ಶ್ರೀಮಂತ ವೈವಿಧ್ಯಮಯ ಚಹಾ ತೋಟಗಳನ್ನು ಆವರಿಸಿ ಕೊಂಡಿದೆ. ಇಲ್ಲಿನ ಹಚ್ಚ ಹಸಿರಿನ ಚಹಾದ ತೋಟದ ಜೊತೆ ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ಹಲವಾರು ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿ ಗರಿಗೆ ಹೆಚ್ಚು ಆಕರ್ಷಣೆಯವಾಗಿದೆ. ಹಾಗಾಗಿ ನಿಮ್ಮ ಕುಟುಂಬದ ಜೊತೆ ಹಾಯಾಗಿ ಕಳೆದು ಬರಲು ಭಾರತದ ಕೆಲವು ಟೀ ಎಸ್ಟೇಟ್ ತಾಣಗಳು ಇಲ್ಲಿವೆ.


ಬೆಂಗಳೂರು: ಶ್ರೀಮಂತ ಸಂಸ್ಕೃತಿ ಮತ್ತು ಅಧ್ಬುತ ಭೂದೃಶ್ಯಗಳ ನೋಟಕ್ಕೆ ಹೆಸರುವಾಸಿಯಾದ ಭಾರತವು ಹಚ್ಚ ಹಸಿರಿನ ಚಹಾದ ಗಿರಿಧಾಮಗಳಿಗೂ ಪ್ರಸಿದ್ಧಿಯಾಗಿದೆ. ವಿಶ್ವದ ಪ್ರಮುಖ ಚಹಾ (Tea Plantations) ಉತ್ಪಾದಕ ದೇಶಗಳಲ್ಲಿ ಭಾರತವು ಒಂದಾಗಿದ್ದು ಮಂಜಿನಿಂದ ಆವೃತವಾಗಿರುವ ಹಿಮಾಲಯದ ತಪ್ಪಲಿನಿಂದ ಪಶ್ಚಿಮ ಘಟ್ಟಗಳ ರೋಲಿಂಗ್ ಬೆಟ್ಟಗಳವರೆಗೆ, ಶ್ರೀಮಂತ ವೈವಿಧ್ಯಮಯ ಚಹಾ ತೋಟಗಳನ್ನು ಆವರಿಸಿ ಕೊಂಡಿದೆ. ಇಲ್ಲಿನ ಹಚ್ಚ ಹಸಿರಿನ ಚಹಾದ ತೋಟದ ಜೊತೆ ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ಹಲವಾರು ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರಿಗೆ ಹೆಚ್ಚು ಆಕರ್ಷಣೆಯವಾಗಿದೆ. ಹಾಗಾಗಿ ನಿಮ್ಮ ಕುಟುಂಬದ ಜೊತೆ ಹಾಯಾಗಿ ಕಳೆದು ಬರಲು ಭಾರತದ ಕೆಲವು ಟೀ ಎಸ್ಟೇಟ್ ತಾಣಗಳು ಇಲ್ಲಿವೆ.
ಡಾರ್ಜಿಲಿಂಗ್, ಪಶ್ಚಿಮ ಬಂಗಾಳ:

ಇದು ದೇಶದ ಅತ್ಯಂತ ಸುಂದರವಾದ ಪ್ರಸಿದ್ಧ ಚಹಾ ಎಸ್ಟೇಟ್‌ಗಳಿಗೆ ಪ್ರಸಿದ್ದಿಯಾಗಿದೆ. ಸುಂದರ ನೈಸರ್ಗಿಕ ಗಿರಿಧಾಮಗಳ ನಡುವೆ ಪ್ರಸಿದ್ಧ ಹ್ಯಾಪಿ ವ್ಯಾಲಿ ಟೀ ಎಸ್ಟೇಟ್ ಸೇರಿದಂತೆ ವಿಸ್ತಾರವಾದ ಚಹಾ ತೋಟ ಗಳಿಂದ ನೋಡುಗರಿಗೆ ಮುದ ನೀಡಲಿದೆ. ಗ್ಲೆನ್‌ಬರ್ನ್ ಮತ್ತು ಹ್ಯಾಪಿ ವ್ಯಾಲಿಯಂತಹ ಐಕಾನಿಕ್ ಪ್ಲಾಂಟೇ ಶನ್‌ಗಳ ಸುಂದರ ದೃಶ್ಯವನ್ನು ನೀವು ಸವಿಯಬಹುದು. ಇಲ್ಲಿನ ಸ್ಥಳಕ್ಕೆ ಬೆಟ್ಟಗಳ ರಾಣಿ' ಎಂದೇ ಕರೆಯಲಾಗು ತ್ತದೆ. 1,600 ಎಕರೆಗೂ ಹೆಚ್ಚು ಸುತ್ತುವರಿದ ಬೆಟ್ಟಗಳು, ಚಹಾ ತೋಟ ಗಳು ಪ್ರವಾಸಿಗರಿಗೆ ಸುಂದರ ವಾದ ಅನುಭವ ನೀಡಲಿದೆ. ಪ್ರವಾಸಿಗರಿಗೆ ಚಹಾ ತಯಾರಿಕೆಯ ಪ್ರಕ್ರಿಯೆಯನ್ನು ನೋಡಲು ಅನುವು ಮಾಡಿಕೊಡುವ ಜೊತೆಗೆ ಇಲ್ಲಿನ ಚಹಾ ತೋಟವಾದ ಹ್ಯಾಪಿ ವ್ಯಾಲಿ ಬಹಳ ಆಕರ್ಷಣೆಯವಾಗಿವೆ.
ಅಸ್ಸಾಂ:

ಇದು ಭಾರತದ ಅತಿದೊಡ್ಡ ಚಹಾ ಬೆಳೆಯುವ ಪ್ರದೇಶವಾಗಿದ್ದು ಇದನ್ನು ಸಾಮಾನ್ಯವಾಗಿ "ಭಾರತದ ಚಹಾ ತೋಟ ಎಂದು ಕರೆಯಲಾಗುತ್ತದೆ. ಡಾರ್ಜಿಲಿಂ ಗ್‌ನ ಚಹಾ ತೋಟಗಳು ಎತ್ತರದಲ್ಲಿ ಬೆಳೆದರೆ, ಅಸ್ಸಾಂನ ಚಹಾ ತೋಟಗಳು ಬ್ರಹ್ಮಪುತ್ರ ಕಣಿವೆಯ ಬಯಲು ಪ್ರದೇಶದಲ್ಲಿ ಕಾಣ ಸಿಗಲಿದೆ.ಇಲ್ಲಿನ ಚಹಾ ವಿಶಿಷ್ಟವಾದ ಪರಿಮಳವನ್ನು ಹೊಂದಿದ್ದು, ಬಹಳಷ್ಟು ಬೇಡಿಕೆ ಯಲ್ಲಿದೆ.ಜೋರ್ಹತ್ ಮತ್ತು ದಿಬ್ರುಗಢ್‌ನಲ್ಲಿ ಅಸ್ಸಾಂನ ಟೀ ಎಸ್ಟೇ ಟ್‌ಗಳು ಕಾಣಸಿಗಲಿದ್ದು ಜೋರ್ಹತ್ ಅನ್ನು ಜಗತ್ತಿನ ಚಹಾ ರಾಜಧಾನಿ" ಎಂದು ಹೇಳಲಾಗುತ್ತದೆ, ಇದು ಅನೇಕ ದೊಡ್ಡ ವಿಸ್ತಾರವಾದ ಟೀ ಎಸ್ಟೇಟ್ ಗಳಿಗೆ ಪ್ರಸಿದ್ದಿ ಯಾಗಿದ್ದು ಇಲ್ಲಿ ಪ್ರವಾಸಿಗರು ಚಹಾ ತೋಟಗಳ ವಿಸ್ತಾರವಾದ ದೃಶ್ಯವನ್ನು ಆನಂದಿಸಬಹುದು.
ಮುನ್ನಾರ್:

ಮುನ್ನಾರ್ ಗಿರಿಧಾಮವು ಚಹಾ ತೋಟಗಳಿಂದ ಹರಡಿರುವ ಹಸಿರು ಪರಿಸರದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪಶ್ಚಿಮ ಘಟ್ಟಗಳಲ್ಲಿ ಸುತ್ತುವರಿದಿರುವ ಮುನ್ನಾರ್‌ನ ಆಹ್ಲಾದಕರ ನೋಟ ನೋಡುಗರಿಗೆ ಆಕರ್ಷನೀಯ ಕೇಂದ್ರ ಬಿಂದುವಾಗಿದೆ. ಇಲ್ಲಿ ಟಾಟಾ ಟೀ ಮ್ಯೂಸಿಯಂ, ಲಾಕ್‌ಹಾರ್ಟ್ ಟೀ ಮ್ಯೂಸಿಯಂ ಮತ್ತು ಕೊಲುಕ್ಕುಮಲೈ ಟೀ ಎಸ್ಟೇಟ್ ನಂತಹ ರಮಣೀಯವಾದ ದೃಶ್ಯ ನೋಡಬಹುದು. ಇಲ್ಲಿನ ತಾಜಾ ಚಹಾ ಎಲೆಗಳ ಪರಿಮಳದೊಂದಿಗೆ ಭೂದೃಶ್ಯದ ಸಂಪೂರ್ಣ ಸೌಂದರ್ಯವು ಮರೆ ಯಲಾಗದ ಅನುಭವವನ್ನು ನೀಡಲಿದೆ. ಕೇರಳ ರಾಜ್ಯದ ವಯನಾಡ್ ಕೂಡ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಸುಂದರವಾದ ಗಿರಿಧಾಮ ವಾಗಿದೆ. ಅಲ್ಲಿನ ಪ್ರಾಚೀನ ಕಾಡುಗಳು ಮತ್ತು ವಿಸ್ತಾರವಾದ ಚಹಾ ತೋಟ ಗಳಿಗೆ ವಯನಾಡ್ ಬಹಳ ಹೆಸರುವಾಸಿಯಾಗಿದೆ
ಕಾಂಗ್ರಾ ಕಣಿವೆ, ಹಿಮಾಚಲ ಪ್ರದೇಶ:

ಹಿಮಾಚಲ ಪ್ರದೇಶದಲ್ಲಿ ಇರುವ ಕಂಗ್ರಾ ಕಣಿವೆಯು ಸೊಂಪಾದ ಚಹಾ ತೋಟಗಳಿಗೆ ಬಹಳಷ್ಟು ಪ್ರಸಿದ್ದಿಯಾಗಿದೆ. ಇಲ್ಲಿನ ಟೀ ಎಸ್ಟೇಟ್‌ಗಳು ಧೌಲಾ ಧರ್ ಶ್ರೇಣಿಯ ಹಿನ್ನೆಲೆಯನ್ನು ಹೊಂದಿದ್ದು, ಅದ್ಭುತ ದೃಶ್ಯಗಳು ನೋಡುಗರ ಕಣ್ಮನ ಸೆಳೆಯುತ್ತದೆ. ಇಲ್ಲಿನ ಪರ್ವತಳು ಮತ್ತು ರೋಮಾಂ ಚಕ ಭೂದೃಶ್ಯಗಳನ್ನು ಆನಂದಿಸಬಹುದು.
ಮುನ್ಸಿಯಾರಿ, ಉತ್ತರಾಖಂಡ:
ಉತ್ತರಾಖಂಡದ ಮುನ್ಸಿಯಾರಿಯು ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿದೆ. ಇಲ್ಲಿನ ವಿಶಿಷ್ಟವಾದ ಚಹಾ ತೋಟ ಹಸಿರ ಸೊಬಗು ಜನ ರನ್ನು ಮತ್ತಷ್ಟು ಆಕರ್ಷಣೆ ಮಾಡುವಂತಿದೆ. ವಿಸ್ತಾರವಾಗಿ ಹರಡಿರುವ ಚಹಾದ ತೋಟಗಳು ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು ತಾಜಾ ಚಹಾ ಎಲೆಗಳ ಪರಿಮಳದೊಂದಿಗೆ ಭೂದೃಶ್ಯದ ಸಂಪೂರ್ಣ ಸೌಂದರ್ಯವು ಮರೆಯಲಾಗದ್ದು.
ಇದನ್ನು ಓದಿ: Health Tips: ತೂಕ ಇಳಿಕೆಯಿಂದ ಚರ್ಮದ ಆರೈಕೆವರೆಗೆ- ಬೆಳಗ್ಗೆ ಚಹಾ ಬದಲು ಈ ಆರೋಗ್ಯಕರ ಪಾನೀಯ ಸೇವಿಸಿ!
ನೀಲಗಿರಿ ಬೆಟ್ಟಗಳು, ತಮಿಳುನಾಡು:

ತಮಿಳುನಾಡಿನಲ್ಲಿರುವ ನೀಲಗಿರಿ ಬೆಟ್ಟಗಳು ತಮ್ಮ ರೋಲಿಂಗ್ ಬೆಟ್ಟಗಳು ಮತ್ತು ನೀಲಿ ಬಣ್ಣದ ಪರ್ವತಗಳಿಗೆ ಹೆಸರುವಾಸಿಯಾಗಿದ್ದು ಪ್ರವಾಸಿಗರಿಗೆ ಈ ತಾಣ ಸ್ವರ್ಗ ವಾಗಿದೆ. ಇಲ್ಲಿನ ಕೂನೂರ್ ಮತ್ತು ಊಟಿಯಂತಹ ಸೊಂಪಾದ ಚಹಾ ತೋಟಗಳು ಅದ್ಭುತವಾದ ನೋಟವು ಪ್ರಕೃತಿ ಪ್ರಿಯರಿಗೆ ಸ್ವರ್ಗದ ನೆಲೆಯಾಗಿದೆ.