Relationship Tips: ಪುರುಷರು ಅಪ್ಪಿತಪ್ಪಿಯೂ ಸಂಗಾತಿ ಜೊತೆ ಈ ವಿಚಾರ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ!
ಪುರುಷರು ತಮ್ಮ ಸಂಗಾತಿಯ ಜೊತೆಗೆ ಅದೆಷ್ಟೇ ಸ್ನೇಹಯುತವಾಗಿದ್ದರೂ ಕೆಲವೊಂದು ಆಂತರಿಕ ರಹಸ್ಯವನ್ನು ಎಂದಿಗೂ ಬಿಟ್ಟುಕೊಡಲಾರರು. ತಮ್ಮ ಸಂಗಾತಿಯ ಜೊತೆಗೆ ಕೆಲವೊಂದು ವಿಚಾರವನ್ನು ನಿಗೂಢವಾಗಿ ಇಡಲು ಇಷ್ಟ ಪಡುವ ಪುರುಷರು ಯಾವ ವಿಚಾರವನ್ನು ತಮ್ಮ ಸಂಗಾತಿ ಜೊತೆ ಹಂಚಿ ಕೊಳ್ಳಲು ಇಷ್ಟ ಪಡುವುದಿಲ್ಲ? ಯಾವೆಲ್ಲ ವಿಚಾರ ಸಂಗಾತಿಯಿಂದ ನಿಗೂಢ ವಾಗಿಡಲು ಪುರುಷರು ಬಯಸುತ್ತಾರೆ ಎನ್ನುವ ವಿಚಾರ ಇಲ್ಲಿದೆ.


ನವದೆಹಲಿ: ವ್ಯಕ್ತಿಗಳು ಬಾಹ್ಯ ಪ್ರಪಂಚದಲ್ಲಿ ಇದ್ದಂತೆ ಆಂತರಿಕ ವ್ಯಕ್ತಿತ್ವದಲ್ಲೂ ಇರಬೇಕೆಂದಿಲ್ಲ. ಒಬ್ಬೊಬ್ಬರ ವ್ಯಕ್ತಿತ್ವ ವಿಭಿನ್ನವಾಗಿದ್ದು ಪುರುಷರನ್ನು ಕೂಡ ಹೀಗೇ ಎಂದು ಅಳೆಯುವುದು ಅಸಾಧ್ಯ. ಹಾಗಿದ್ದರೂ ದಾಂಪತ್ಯ ಜೀವನದಲ್ಲಿ(Relationship Tips) ಒಬ್ಬರನ್ನೊಬ್ಬರು ಅನುಸರಿಸಿ ಹೋಗುವುದು ಅತ್ಯವಶ್ಯಕವಾಗಿದ್ದು ಮಹಿಳೆಯರು ತಮ್ಮ ಪತಿಯ ಮನೋಭಾವನೆ ಅರ್ಥೈಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಪುರುಷರು ತಮ್ಮ ಸಂಗಾತಿಯ ಜೊತೆಗೆ ಅದೆಷ್ಟೇ ಸ್ನೇಹಯುತವಾಗಿದ್ದರೂ ಕೆಲವೊಂದು ಆಂತರಿಕ ರಹಸ್ಯವನ್ನು ಎಂದಿಗೂ ಬಿಟ್ಟುಕೊಡಲಾರರು. ತಮ್ಮ ಸಂಗಾತಿಯ ಜೊತೆಗೆ ಕೆಲವೊಂದು ವಿಚಾರವನ್ನು ನಿಗೂಢವಾಗಿ ಇಡಲು ಇಷ್ಟ ಪಡುವ ಪುರುಷರು ಯಾವ ವಿಚಾರವನ್ನು ತಮ್ಮ ಸಂಗಾತಿ ಜೊತೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ? ಯಾವೆಲ್ಲ ವಿಚಾರ ಸಂಗಾತಿಯಿಂದ ನಿಗೂಢವಾಗಿಡಲು ಪುರುಷರು ಬಯಸುತ್ತಾರೆ ಎನ್ನುವ ವಿಚಾರ ಇಲ್ಲಿದೆ.
ಲೈಂಗಿಕ ಆಸಕ್ತಿ ಬಗ್ಗೆ ಹೇಳಿಕೊಳ್ಳುವುದಿಲ್ಲ:
ಪುರುಷರಿಗೆ ಲೈಂಗಿಕ ಆಸಕ್ತಿ ಇದ್ದರು ತನ್ನೆಲ್ಲ ಭಾವನೆ ಅವರು ವ್ಯಕ್ತಪಡಿಸದೆ ತಮ್ಮ ಸಂಗಾತಿ ಜೊತೆ ಸಂಯಮದಿಂದಲೇ ಇರುತ್ತಾರೆ. ತಮ್ಮ ಸಂಗಾತಿಗೂ ತನ್ನಂತೆ ವಿಶೇಷ ರಸಿಕತೆ , ಲೈಂಗಿಕ ಆಸಕ್ತಿಯನ್ನು ಹೊಂದಿ ರಬೇಕು ತನ್ನ ಮನೋ ಕಾಮನೆ ಅರ್ಥೈಸಿಕೊಳ್ಳಬೇಕು ಎಂಬ ಮನೋಭಾವನೆ ಇವರಲ್ಲಿ ಹೆಚ್ಚು ಇರಲಿದೆ.
ಸಂಗಾತಿಯ ಉಡುಗೆ ಬಗ್ಗೆ ಹೇಳಿಕೊಳ್ಳುವುದಿಲ್ಲ:
ತನ್ನ ಸಂಗಾತಿಗೆ ಈ ಉಡುಗೆ ಒಪ್ಪುವುದಿಲ್ಲ ಎಂದು ಹೇಳಿಕೊಳ್ಳುವುದಿಲ್ಲ. ಇನ್ನು ತಾನು ಆಕೆಗೆ ನೇರವಾಗಿ ಹೇಳಿದರೆ ಆಕೆ ಇದರಿಂದ ಕೋಪಗೊಂಡು ಜಗಳ ಮಾಡಿದರೆ ಎಂಬ ಆತಂಕ ಪುರುಷರಲ್ಲಿ ಇದ್ದೇ ಇರುತ್ತದೆ.
ಅಡುಗೆ ವಿಚಾರದಲ್ಲಿ ಕಮೆಂಟ್ ಮಾಡಲು ಹಿಂಜರಿಯುತ್ತಾರೆ:
ಎಷ್ಟೋ ಭಾರಿ ಅಡುಗೆ ವಿಚಾರದಲ್ಲಿ ತನ್ನ ತಾಯಿ ಮಾಡಿದ ಅಡುಗೆ ಇಷ್ಟವಾದರೂ ನನ್ನಮ್ಮನ ಅಡುಗೆಯೇ ಇಷ್ಟ ಎಂದು ಹೇಳಲು ಪತಿ ಹಿಂಜರಿಯುತ್ತಾನೆ. ತನ್ನ ಸಂಗಾತಿಯ ಅಡುಗೆ ಇಷ್ಟವಾಗಿಲ್ಲವಾದರೂ ಹೊಗಳಿಕೆಯ ಮಾತುಗಳನ್ನು ಆಡುತ್ತಾರೆ. ತನ್ನ ಪತ್ನಿಯನ್ನು ಕೋಪಿಸುವ ವಿಚಾರ ಜೀವನದ ಶಾಂತಿಯನ್ನೇ ಕೆಡಿಸಿಬಿಡುತ್ತದೆ. ಹೀಗಾಗಿ ಪತ್ನಿಯನ್ನು ಸಂತೋಷವಾಗಿಟ್ಟು ಸಂಗಾತಿಯನ್ನು ಹೊಗಳಲು ಇಷ್ಟ ಪಡುತ್ತಾರೆ.
ಇತರ ಮಹಿಳೆಯರ ಸೌಂದರ್ಯ ಬಗ್ಗೆ ಮಾತನಾಡಲು ಇಷ್ಟ ಪಡಲ್ಲ:
ಕೆಲವು ಸಂದರ್ಭಗಳಲ್ಲಿ ಕೆಲ ಪುರುಷರಿಗೆ ಆಕೆಯ ತಂಗಿ, ಆಕೆಯ ಗೆಳತಿಯರು ನೋಡಲು ಆಕರ್ಷಕವಾಗಿ ಕಂಡಿದ್ದರೂ ಎಂದಿಗೂ ಈ ವಿಚಾರ ಅವರು ಮುಕ್ತವಾಗಿ ತನ್ನ ಸಂಗಾತಿ ಜೊತೆ ಹೇಳಲು ಇಷ್ಟಪಡಲಾರರು. ಯಾವುದೇ ಸಂಗಾತಿಗೆ ತಮ್ಮ ಸೌಂದರ್ಯ ಬಗ್ಗೆ ಇತರ ಮಹಿಳೆಯರ ಜೊತೆ ಹೋಲಿಸಿದರೆ ಕೋಪ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ವಿಚಾರ ಹೇಳಿಕೊಳ್ಳುವುದಿಲ್ಲ.
ರೊಮ್ಯಾಂಟಿಕ್ ಸಿನಿಮಾದ ಆಸಕ್ತಿ ಬಗ್ಗೆ:
ಪುರುಷರು ಪ್ರಣಯ ಹಾಸ್ಯಗಳಿಗಿಂತಲೂ ಕೆಲವೊಂದು ಎಮೋಷನಲ್, ರೊಮ್ಯಾಂಟಿಕ್ ಸಿನೆಮಾ ವೀಕ್ಷಿಸಲು ಇಷ್ಟಪಡುತ್ತಾರೆ. ಪುರುಷರು ಹಾಸ್ಯ ವಿಚಾರಗಳ ಬಗ್ಗೆ ಕಡಿಮೆ ಆಸಕ್ತಿ ಹೊಂದಿದ್ದರು ಲೈಂಗಿಕ ದೃಶ್ಯಾವಳಿಗಳು, ರೊಮ್ಯಾಂಟಿಕ್ ಸಿನೆಮಾ ಕೂಡ ಪುರುಷರು ತಮ್ಮ ಸಂಗಾತಿಯ ಜೊತೆ ನೋಡಲು ಇಷ್ಟ ಪಡುತ್ತಾರೆ. ಹಾಗಿದ್ದರೂ ಈ ಮನೋಭಾವನೆ ಅವರೆಂದಿಗೂ ಇತರರ ಬಳಿ ಹೇಳಿಕೊಳ್ಳುವುದಿಲ್ಲ.
ಜಗಳ ಮನಸ್ಥಾಪ ಇಷ್ಟವಾಗುವುದಿಲ್ಲ:
ಸಣ್ಣ ಪುಟ್ಟ ಜಗಳವಾಡಿ ಮತ್ತೆ ಒಂದಾಗುವುದನ್ನು ಪುರುಷರು ಇಷ್ಟ ಪಡುತ್ತಾರೆ. ಆದರೆ ಮಾತು ಮಾತಿಗೆ ಜಗಳವಾಡುವ ಸಂಗಾತಿಯ ವರ್ತನೆ ಪುರುಷರಲ್ಲಿ ಪ್ರೀತಿ ಕಡಿಮೆ ಮಾಡಲು ಕಾರಣವಾಗಲಿದೆ.
ಇದನ್ನು ಓದಿ: Astro Tips: ಗುರುವಾರ ಈ 'ಮಂತ್ರ' ಗಳನ್ನು ಹೇಳಿಕೊಂಡರೆ ಸಂಪತ್ತು, ಸಮೃದ್ಧಿ ಹೆಚ್ಚುವುದು ಶತಸಿದ್ಧ!
ಓಪನ್ ಅಪ್ ಆಗಿರುವುದು ಇಷ್ಟ:
ತಮ್ಮ ಸಂಗಾತಿ ತಮಗೆ ಹೆಚ್ಚಿನ ಸಮಯ, ಬೆಂಬಲ ನೀಡಬೇಕೆಂದು ಪುರುಷರು ಬಯಸುತ್ತಾರೆ. ಅವಳ ಬದುಕಿನಲ್ಲಿ ಏನಾಗಿದ್ದರೂ ಎಲ್ಲವನ್ನು ತನಗೆ ತಿಳಿಸಿ ಮುಕ್ತವಾಗಿ ಇರಬೇಕು ಎಂದು ಪುರುಷರು ಬಯಸುತ್ತಾರೆ. ಆದರೆ ಅವರ ಫಾಸ್ಟ್ ಲೈಫ್‌ನಲ್ಲಿ ಬ್ರೇಕಪ್ ಲವ್ ಇದ್ದರೆ ಅದರ ಬಗ್ಗೆ ತಮ್ಮ ಸಂಗಾತಿ ವ್ಯಂಗ್ಯ ಮಾಡುವುದು, ಕೆದಕಿ ಕೇಳುವುದು ಇವೆಲ್ಲವೂ ಪುರುಷರಿಗೆ ಇಷ್ಟವಾಗಲಾರದು.
ಕೆಲವು ಮಹಿಳೆಯರಿಗೆ ತನ್ನ ಪತಿ ಹೀಗಿರಬೇಕು , ಹಾಗಿರಬೇಕು ಎಂಬ ಸಾವಿರ ಕನಸ್ಸು ಇರಲಿದೆ. ಆದರೆ ಅವರ ಎಲ್ಲ ನಿರೀಕ್ಷೆ ಈಡೇರದೆ ಇದ್ದಾಗ ಪುರುಷರನ್ನು ನಿಂದಿಸುವುದು, ಅಪಮಾನಿಸುವುದನ್ನು ಮಹಿಳೆಯರು ಮಾಡುತ್ತಾರೆ ಹಾಗಾಗಿ ನಿಮ್ಮ ನಿರೀಕ್ಷೆ ಅವರಿಗೆ ಹೊರೆ ಆಗದಂತೆ ತಡೆಯಲು ಸಂಬಂಧದಲ್ಲಿ ಹೊಂದಾಣಿಕೆ ಯುಕ್ತ ಜೀವನ ನಡೆಸಿದರೆ ದಾಂಪತ್ಯ ಜೀವನ ಸುಖಕರವಾಗಲಿದೆ.