Divorce: ಹೆಚ್ಚುತ್ತಿದೆ ಡಿವೋರ್ಸ್! ದಾಂಪತ್ಯ ಬದುಕಲ್ಲಿ ಬಿರುಕು ಮೂಡಲು ಮುಖ್ಯ ಕಾರಣಗಳಿವು
ಮದುವೆಯಾಗಿ ವರ್ಷದೊಳಗೆ ಡಿವೋರ್ಸ್ ಹೆಸರಿನಲ್ಲಿ ಅದೆಷ್ಟೋ ಜೋಡಿಗಳು ದೂರವಾಗುವುದು ಇಂದು ಸಾಮಾನ್ಯವಾಗಿದೆ. ಅಂತೆಯೇ ಸಣ್ಣ ಪುಟ್ಟ ವಿಚಾ ರಕ್ಕೆ ವಿಚ್ಛೇದನ ಪಡೆದು ದಂಪತಿಗಳು ದೂರವಾಗುತ್ತಿದ್ದಾರೆ. ಗಂಡು ಹೆಣ್ಣು ಸಮ ನಾಗಿ ಬದುಕುವ ಈ ಕಾಲಘಟ್ಟದಲ್ಲಿ ಹೊಂದಾಣಿಕೆಯೇ ಬಹಳ ಮುಖ್ಯ ವಾಗಿದ್ದು ನಿಮ್ಮ ದಾಂಪತ್ಯಕ್ಕೆ ಡಿವೋರ್ಸ್ ಬಿರುಗಾಳಿ ಸುಳಿಯದಂತೆ ಎಚ್ಚರ ವಹಿಸುವುದು ಅತ್ಯವಶ್ಯಕ. ಹೀಗಾಗಿ ಯಾವೆಲ್ಲ ಕಾರಣಕ್ಕೆ ಇಂದು ಡಿವೋರ್ಸ್ ಹೆಚ್ಚುತ್ತಿದೆ ಈ ಮೊದಲೇ ದಂಪತಿಗಳು ಎಚ್ಚೆತ್ತುಕೊಂಡರೆ ಮುಂದಾಗುವ ಅನಾಹುತವನ್ನು ಮೊದಲೇ ತಪ್ಪಿಸಬಹುದು.


ನವದೆಹಲಿ: ಮದುವೆ ಎರಡು ಮನಸ್ಸುಗಳನ್ನು ಬೆಸೆಯುವ ಬಂಧವಿದ್ದಂತೆ. ಸಂಸಾರ ಎಂಬ ಸಾಗರವ ದಾಟಲು ದಾಂಪತ್ಯ ಎಂಬ ದೋಣಿಗೆ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಮೂಲ ಆಧಾರ. ಇದೀಗ ಪರಸ್ಪರ ಅರಿತು ಬಾಳುವ ಸಂಬಂಧ ಕಡಿಮೆಯಾಗಿದೆ. ಮದುವೆಯಾಗಿ ವರ್ಷದೊಳಗೆ ಡಿವೋರ್ಸ್ ಹೆಸರಿನಲ್ಲಿ ಅದೆಷ್ಟೋ ಜೋಡಿಗಳು ದೂರವಾಗುವುದು ಇಂದು ಸಾಮಾನ್ಯವಾಗಿದೆ. ಅಂತೆಯೇ ಸಣ್ಣ ಪುಟ್ಟ ವಿಚಾರಕ್ಕೆ ವಿಚ್ಛೇದನ ಪಡೆದು ದಂಪತಿಗಳು ದೂರವಾಗುತ್ತಿದ್ದಾರೆ. ಗಂಡು ಹೆಣ್ಣು ಸಮನಾಗಿ ಬದುಕುವ ಈ ಕಾಲಘಟ್ಟದಲ್ಲಿ ಹೊಂದಾಣಿಕೆಯೇ ಬಹಳ ಮುಖ್ಯವಾಗಿದ್ದು ನಿಮ್ಮ ದಾಂಪತ್ಯಕ್ಕೆ ಡಿವೋರ್ಸ್ ಬಿರುಗಾಳಿ ಸುಳಿಯದಂತೆ ಎಚ್ಚರವಹಿಸುವುದು ಅತ್ಯ ವಶ್ಯಕ. ಹೀಗಾಗಿ ಯಾವೆಲ್ಲ ಕಾರಣಕ್ಕೆ ಇಂದು ಡಿವೋರ್ಸ್ ಹೆಚ್ಚುತ್ತಿದೆ ಈ ಮೊದಲೇ ದಂಪತಿಗಳು ಎಚ್ಚೆತ್ತುಕೊಂಡರೆ(Relationship Tips) ಮುಂದಾಗುವ ಅನಾಹುತವನ್ನು ಮೊದಲೇ ತಪ್ಪಿಸಬಹುದು.
ಯಾವೆಲ್ಲ ಕಾರಣ ಇವೆ?
ಹೊಂದಾಣಿಕೆ ಸಮಸ್ಯೆ: ಮದುವೆಯಾದ ಬಳಿಕ ಅನೇಕರಿಗೆ ತಮ್ಮ ಸಂಗಾತಿ ಜೊತೆಗೆ ಹೊಂದಾ ಣಿಕೆ ಆಗುವುದಿಲ್ಲ ಎಂಬುದೇ ಮೂಲ ಸಮಸ್ಯೆಯಾಗಿದೆ. ಮದುವೆಯಾದ ಹೊಸತರಲ್ಲಿ ಇದ್ದ ಪ್ರೀತಿ ಕಾಳಜಿಗಳು ಕಾಲಕ್ರಮೇಣ ಮರೆಯಾಗುತ್ತಿದೆ. ತಾನು ಹೇಳಿದ್ದು ಮಾಡಬೇಕು, ಅದೇ ನಡೆಯಬೇಕು ಎಂಬ ಏಕಪಕ್ಷೀಯ ನಿರ್ಧಾರ ಸಹ ದಂಪತಿಗಳ ನಡುವೆ ಹೊಂದಾಣಿಕೆ ಸಮಸ್ಯೆಗೆ ಮೂಲ ಕಾರಣ ಆಗಿ ಇದೇ ವಿಚಾರ ಡಿವೋರ್ಸ್ ಹಂತಕ್ಕೂ ತಲುಪಬಹುದು.
ಪ್ರೀತಿ ಸಮಸ್ಯೆ:ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಆಗಿರಲಿ ಇಂದು ಪ್ರೀತಿ ಇಲ್ಲದೆ ಯಾವ ಸಂಬಂಧ ಸಹ ದೀರ್ಘಕಾಲದ ತನಕ ಉಳಿಯಲಾರದು. ಮದುವೆಯ ಬಳಿಕ ಗಂಡ ಹೆಂಡತಿ ಇಬ್ಬರಿಗೂ ತಮ್ಮದೇ ಆದ ಜವಾಬ್ದಾರಿ ಗಳಿದ್ದು ತಮ್ಮ ಸಂಗಾತಿಗೆ ಪರಸ್ಪರ ಸಮಯ ನೀಡಲಾಗದಿರುವುದು ಇಬ್ಬರ ನಡುವೆ ಅಂತರ ಸೃಷ್ಟಿ ಮಾಡಲಿದೆ. ಜೊತೆಗೆ ತಮ್ಮ ಸಂಗಾತಿಯ ಬಗ್ಗೆ ಗೌರವ ಹೊಂದಿರದೆ ಅಸಮಾಧಾನ ಹೊಂದಿದ್ದರೂ ಸಹ ವಿವಾಹ ಸಂಬಂಧಗಳು ಡಿವೋರ್ಸ್ ಹಾದಿಗೆ ತಲುಪಲಿದೆ.
ಅನೈತಿಕ ಸಂಬಂಧ:ದೈಹಿಕ ಮತ್ತು ಭಾವನಾತ್ಮಕವಾಗಿ ಬೆರೆತ ದಾಂಪತ್ಯಕ್ಕೆ ಬಹಳ ದೀರ್ಘ ಕಾಲದ ಆಯಸ್ಸು ಇದೆ. ಆದರೆ ವಿವಾಹದ ಬಳಿಕ ಪರ ಪುರುಷ/ ಸ್ತ್ರೀ ಬಗ್ಗೆ ವ್ಯಾಮೋಹಿತರಾಗಿ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಸಹ ಡಿವೋರ್ಸ್ ಪಡೆಯಲು ಕಾರಣವಾಗುತ್ತಿದೆ.
ಅಸಮರ್ಥರಾಗಿರುವುದು:ತಮ್ಮ ಸಂಗಾತಿಯನ್ನು ಲೈಂಗಿಕವಾಗಿ ತೃಪ್ತಿಪಡಿಸಲು ಅಸಮರ್ಥ ರಾಗಿರುವುದು ಸಹ ವಿಚ್ಛೇದನ ಪಡೆಯಲು ಕಾರಣವಾಗುತ್ತಿದೆ. ತಮ್ಮ ಸಂಗಾತಿಯ ಆಸೆ, ಬೇಕು ಬೇಡಗಳ ಕುರಿತು ಪರಸ್ಪರ ಅರಿವಿಲ್ಲದೆ ಇರುವುದು ಸಹ ದಾಂಪತ್ಯ ಜೀವನಕ್ಕೆ ಸಮಸ್ಯೆಯಾಗುತ್ತಿದ್ದು ಇದೆ ವಿಚಾರ ಗಳು ಡಿವೋರ್ಸ್ ಗೆ ಸಹ ಕಾರಣವಾಗುತ್ತಿದೆ.
ಹಳೆ ಘಟನೆ ಮಾಸದ ನೆನಪು: ದಾಂಪತ್ಯ ಜೀವನದಲ್ಲಿ ಕಂಡು ಬರುವ ಕೆಲವು ಆಘಾತಗಳು, ನಿಗ್ರಹಿಸಲ್ಪಟ್ಟ ಕೆಲವು ಭಾವನೆಗಳು ಹೊರಬಂದಾಗ ಪರಸ್ಪರ ವೈಮನಸ್ಸು ಏರ್ಪಟ್ಟು ದಂಪತಿಗಳು ದೂರವಾಗುತ್ತಿದ್ದಾರೆ. ಭಾವನಾತ್ಮಕವಾಗಿ ಹೊಂದಾಣಿಕೆ ಇಲ್ಲದೆ ಅಂತರ ಕಾಯ್ದುಕೊಂಡು ದೀರ್ಘಕಾಲದ ತನಕ ಇದ್ದರೆ ದಾಂಪತ್ಯ ಜೀವನ ಬೇರ್ಪಡುವ ಸಾಧ್ಯತೆ ಇದೆ.
ವಿಭಿನ್ನ ದೃಷ್ಟಿಕೋನ:ದಂಪತಿಗಳ ನಡುವೆ ಭವಿಷ್ಯದ ಬಗೆಗಿನ ಆಲೋಚನೆಗಳು, ಗುರಿ, ಆರ್ಥಿಕ ಆದ್ಯತೆ, ಜೀವನ ಶೈಲಿಯ ಆಯ್ಕೆಗಳು ವಿಭಿನ್ನವಾಗಿದ್ದಾಗ ಇದು ಸಹ ದಾಂಪತ್ಯ ಜೀವನದಲ್ಲಿ ಬಿರುಕು ಉಂಟು ಮಾಡುವ ಸಾಧ್ಯತೆ ಇದೆ ಎನ್ನ ಬಹುದು. ಕೆಲವೊಂದು ಸಲ ಮನೆ ವಾತಾವರಣ ಅವರ ಕುಟುಂಬಸ್ಥರ ಬಾಹ್ಯ ನಿರೀಕ್ಷೆಗಳು ಸಹ ದಂಪತಿಗಳಿಬ್ಬರ ನಡುವೆ ವೈಮಸ್ಸು ತರಲಿದೆ. ಈ ಎಲ್ಲ ಕಾರಣಗಳಿಗೆ ಇಂದು ವಿಚ್ಛೇದನ ಪಡೆಯುವುದು ಸಾಮಾನ್ಯ ವಾಗುತ್ತಿದ್ದು ಪರಸ್ಪರ ಸಮಯ ನೀಡಿ ಭಾವನೆ ವಿನಿಯೋಗಿಸಿ ಮಾತು ಕತೆ ನಡೆಸಿದರೆ ಅನೇಕ ಸಮಸ್ಯೆ ಪ್ರಾಥಮಿಕ ಹಂತದಲ್ಲೇ ಪರಿಹಾರ ಆಗಲಿದೆ.