ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kangana Ranaut: ಅಮೆರಿಕ ತನ್ನ ಆಸ್ಕರ್‌ ತನ್ನ ಬಳಿಯೇ ಇಟ್ಟುಕೊಳ್ಳಲಿ; ಪ್ರಶಸ್ತಿ ಬಗ್ಗೆ ಕಂಗನಾ ಕಿಡಿ

ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ 'ಎಮರ್ಜೆನ್ಸಿ' ಸಿನಿಮಾ ಈಗ ಒಟಿಟಿಯಲ್ಲಿ ರಿಲೀಸ್‌ ಆಗಿದ್ದು, ಚಿತ್ರಕ್ಕೆ ಆಸ್ಕರ್‌ ನೀಡಬೇಕು ಎಂದು ಹೇಳಿದವರಿಗೆ ಕಂಗನಾ ತಿರುಗೇಟು ನೀಡಿದ್ದಾರೆ. ಅಮೆರಿಕ ತನ್ನ ಮೂರ್ಖ ಪ್ರಶಸ್ತಿಯನ್ನು ತನ್ನ ಬಳಿಯೇ ಇಟ್ಟು ಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ಆಸ್ಕರ್‌ ಪ್ರಶಸ್ತಿ ಬಗ್ಗೆ ಕಿಡಿ ಕಾರಿದ ಕಂಗನಾ ರಣಾವತ್

ಕಂಗನಾ ರಣಾವತ್‌

Profile Vishakha Bhat Mar 17, 2025 3:12 PM

ಮುಂಬೈ: ಕಂಗನಾ ರಣಾವತ್ (Kangana Ranaut) ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ 'ಎಮರ್ಜೆನ್ಸಿ' ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. 1975 ರಿಂದ 1977 ರ ವರೆಗೆ ಭಾರತದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತಾದ ಈ ಚಿತ್ರ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾದ ಬಗ್ಗೆ ಕಂಗನಾ ರಣಾವತ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಬಿಡುಗಡೆಯಾದ ಮೊದಲ ದಿನ 2.5 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.

ಕಂಗನಾ ಇನ್‌ಸ್ಟಾಗ್ರಾಂ ಹಾಕಿದ್ದ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಭಿಮಾನಿಯೊಬ್ಬ ಈ ಚಿತ್ರಕ್ಕೆ ಆಸ್ಕರ್‌ ಅವಾರ್ಡ್‌ ನೀಡಬೇಕೆಂದು ಕಮೆಂಟ್‌ ಮಾಡಿದ್ದ. ಕಂಗನಾ ಆ ಸಂದೇಶವನ್ನು ತೀಕ್ಷ್ಣವಾದ ಪ್ರತಿಕ್ರಿಯೆಯೊಂದಿಗೆ ಮರು ಪೋಸ್ಟ್ ಮಾಡಿ ಅಮೆರಿಕ ತನ್ನ ನಿಜವಾದ ಮುಖವನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ, ಅವರು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಹೇಗೆ ಹೆದರಿಸುತ್ತದೆ ಮತ್ತು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಯಸುತ್ತದೆ ಎಂದು ಸಿನಿಮಾದಲ್ಲಿ ನಾವು ಹೇಳಿದ್ದೇವೆ. ಅವರು ತಮ್ಮ ಮೂರ್ಖ ಆಸ್ಕರ್ ಅನ್ನು ಇಟ್ಟುಕೊಳ್ಳಬಹುದು. ನಮಗೆ ರಾಷ್ಟ್ರೀಯ ಪ್ರಶಸ್ತಿಗಳಿವೆ ಎಂದು ಹೇಳಿದ್ದಾರೆ. ಈಗಾಗಲೇ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿರುವ ಕಂಗನಾ, ಈ ಹಿಂದೆ ಫ್ಯಾಷನ್ (ಅತ್ಯುತ್ತಮ ಪೋಷಕ ನಟಿ), ಕ್ವೀನ್, ತನು ವೆಡ್ಸ್ ಮನು ರಿಟರ್ನ್ಸ್, ಮತ್ತು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ (ಎಲ್ಲವೂ ಅತ್ಯುತ್ತಮ ನಟಿ) ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ರಶಂಸೆಗಳನ್ನು ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Actress Ramya: ಬಾಲಿವುಡ್‌ ಕ್ವೀನ್‌ ಕಂಗನಾಗೆ ಟಾಂಗ್‌ ಕೊಟ್ಟ ಸ್ಯಾಂಡಲ್‌ವುಡ್‌ ಕ್ವೀನ್‌; ʼಎಮರ್ಜೆನ್ಸಿʼ ಚಿತ್ರದ ಬಗ್ಗೆ ರಮ್ಯಾ ಏನಂದ್ರು?

ಎಮರ್ಜೆನ್ಸಿ ಚಿತ್ರದಲ್ಲಿ 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಡೆದ ಮಹತ್ವದ ಚರ್ಚೆಯನ್ನು ತೋರಿಸಲಾಗಿದೆ. ಆ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿ ಅಮೆರಿಕ ಪಾಕಿಸ್ತಾನಕ್ಕೆ ಸಹಾಯ ಮಾಡುವುದಿಲ್ಲ ಎಂಬ ಭರವಸೆಯನ್ನು ಪಡೆಯುತ್ತಾರೆ. ಈ ದೃಶ್ಯದಲ್ಲಿ ನಿಕ್ಸನ್ ಗಾಂಧಿಯವರ ಸೀರೆಯನ್ನು ಅಣಕಿಸುತ್ತಿರುವುದನ್ನು ತೋರಿಸಲಾಗಿದೆ, ಇದು ಅವರಿಗೆ ನೋವುಂಟು ಮಾಡುತ್ತದೆ. ಜಯಪ್ರಕಾಶ್ ನಾರಾಯಣನಾಗಿ ಅನುಪಮ್ ಖೇರ್, ಅಟಲ್ ಬಿಹಾರಿ ವಾಜಪೇಯಿಯಾಗಿ ಶ್ರೇಯಸ್ ತಲ್ಪಾಡೆ, ಪುಪುಲ್ ಜಯಕರ್ ಆಗಿ ಮಹಿಮಾ ಚೌಧರಿ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾನಾಗಿ ಮಿಲಿಂದ್ ಸೋಮನ್, ಸಂಜಯ್ ಗಾಂಧಿಯಾಗಿ ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ರಾಮ್ ಕೌಶಿಕ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.