ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ದಂಡ ಬಿದ್ದರೂ ನೋಟ್‌ಬುಕ್‌ ಸೆಲೆಬ್ರೇಷನ್‌ ಬಿಡದ ದಿಗ್ವೇಶ್‌!

Digvesh Rathi: ಮುಂಬೈ ತಂಡದ ಆಟಗಾರ ನಮನ್‌ ಧೀರ್ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಬಳಿಕ ದಿಗ್ವೇಶ್‌ ರಾಥಿ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದರು. ಇದೀಗ ದ್ವಿತೀಯ ಬಾರಿ ಈ ತಪ್ಪು ಮಾಡಿದ ಕಾರಣ ಇವರಿಗೆ ಬಿಸಿಸಿಐ, ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಿದೆ.

ದಂಡ ಬಿದ್ದರೂ ನೋಟ್‌ಬುಕ್‌ ಸೆಲೆಬ್ರೇಷನ್‌ ಬಿಡದ ದಿಗ್ವೇಶ್‌!

Profile Abhilash BC Apr 5, 2025 7:01 AM

ಮುಂಬಯಿ: ಕಳೆದ ಪಂಜಾಬ್‌ ವಿರುದ್ಧ ಪಂದ್ಯದಲ್ಲಿ ಪ್ರಿಯಾನ್ಶ್‌ ಆರ್ಯರನ್ನು ಔಟ್‌ ಮಾಡಿದ ಬಳಿಕ ನೋಟ್‌ಬುಕ್‌ ಸಂಭ್ರಮಾಚರಣೆ ಮಾಡಿ ಭಾರೀ ದಂಡಕ್ಕೆ ಗುರಿಯಾಗಿದ್ದ ಲಕ್ನೋ ಸ್ಪಿನ್ನರ್‌ ದಿಗ್ವೇಶ್‌ ರಾಥಿ(Digvesh Rathi)ಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿತ್ತು. ಈ ತಪ್ಪಿನಿಂದ ಬುದ್ಧಿ ಕಲಿಯದ ದಿಗ್ವೇಶ್‌ ಮುಂಬೈ(MI vs LSG) ವಿರುದ್ಧದ(IPL 2025) ಪಂದ್ಯದಲ್ಲೂ ನೋಟ್‌ಬುಕ್‌ ಸೆಲೆಬ್ರೇಷನ್‌(digvesh rathi notebook celebration) ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮುಂಬೈ ತಂಡದ ಆಟಗಾರ ನಮನ್‌ ಧೀರ್ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಬಳಿಕ ದಿಗ್ವೇಶ್‌ ರಾಥಿ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದರು. ಐಪಿಎಲ್‌ನ ಲೆವೆಲ್-1 ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಈ ಬಾರಿ ದಿಗ್ವೇಶ್‌ಗೆ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ರಾಥಿ ನಾಲ್ಕು ಓವರ್‌ನಲ್ಲಿ ಕೇವಲ 21 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



ಶುಕ್ರವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್‌ ಜಯಂಟ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 203 ರನ್‌ಗಳನ್ನು ಕಲೆ ಹಾಕಿತು. ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಿಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.

17ನೇ ಓವರ್‌ನಲ್ಲಿ ಸೂರ್ಯ ಔಟಾಗುವುದರೊಂದಿಗೆ ತಂಡ ಸೋಲಿನ ಸುಳಿಗೆ ಸಿಲುಕಿತು. ಹಾರ್ದಿಕ್‌(28 ರನ್‌), ತಿಲಕ್‌ ವರ್ಮಾ(25 ರನ್)ಗೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. 2 ಓವರ್‌ಗೆ 29 ರನ್‌ ಬೇಕಿದ್ದಾಗ 19ನೇ ಓವರ್‌ನಲ್ಲಿ ಕೇವಲ 7 ರನ್‌ ನೀಡಿದ ಶಾರ್ದೂಲ್‌ ಲಕ್ನೋಗೆ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌

ಲಕ್ನೋ: 8 ವಿಕೆಟ್‌ಗೆ 203 (ಮಾರ್ಷ್‌ 60, ಮಾರ್ಕ್‌ರಮ್‌ 53, ಹಾರ್ದಿಕ್‌ 5-36), ಮುಂಬೈ: 5 ವಿಕೆಟ್‌ಗೆ 191 (ಸೂರ್ಯಕುಮಾರ್‌ 67, ನಮನ್‌ ಧೀರ್ 46, ದಿಗ್ವೇಶ್‌ 1-21).