ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nayanthara: ಇನ್ಮುಂದೆ ಲೇಡಿ ಸೂಪರ್ ಸ್ಟಾರ್ ಕರೆಯಬೇಡಿ- ಫ್ಯಾನ್ಸ್‌ಗೆ ನಟಿ ನಯನತಾರ ಹೀಗಂದಿದ್ದೇಕೆ?

ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು ಪ್ರೀತಿಯಿಂದ ಬಿರುದು ಕೊಡುವುದು‌ ಇಂದು ಸಾಮಾನ್ಯವಾಗಿದೆ. ಕರಾಟೆ ಕಿಂಗ್ ಶಂಕರ್ ನಾಗ್, ಅಭಿನಯ ಚಕ್ರವರ್ತಿ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೀಗೆ ಸಿನಿಮಾ ನಟ ನಟಿಯರಿಗೆ ಬಿರುದುಗಳಿವೆ. ದಕ್ಷಿಣ ಭಾರತದ ಖ್ಯಾತ ನಟಿಯಾಗಿರೋ ನಯನತಾರ ಅವರಿಗೆ ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದು ಇದೆ. ಆದರೆ ಇದೇ ಲೇಡಿ ಸೂಪರ್ ಸ್ಟಾರ್ ಬಗ್ಗೆ ನಟಿ ನಯನತಾರ ಅವರು ತಮ್ಮ ಅಭಿಮಾನಿಗಳ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ನಯನತಾರ ಅಭಿಮಾನಿಗಳಿಗೆ ವಿಶೇಷ ಮನವಿ- ಪೋಸ್ಟ್ ವೈರಲ್!

Profile Pushpa Kumari Mar 5, 2025 1:32 PM

ನವದೆಹಲಿ: ಬಹುಭಾಷಾ ನಟಿ ನಯನತಾರ‌ (Nayanthara) ಭಾರತೀಯ ಸಿನಿ ರಂಗದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಸದ್ಯ ನಟಿ ನಯನತಾರ ಈ ವರ್ಷ ಕೂಡ ಸಿಕ್ಕಾಪಟ್ಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಕನ್ನಡದ ಟಾಕ್ಸಿಕ್' ಸೇರಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರಾದ ನಯನತಾರ ತೆರೆ ಮೇಲೆ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಅಪಾರ ಅಭಿಮಾನಿಗಳ ಪ್ರೀತಿಪಾತ್ರರಾಗಿದ್ದಾರೆ. ಹೀಗಾಗಿಯೇ ಇವರನ್ನು ಅಭಿಮಾನಿಗಳು ಸೇರಿದಂತೆ ಇತರ ಸೆಲೆಬ್ರಿಟಿಗಳು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಸದ್ಯ ಯಶ್ ಅಭಿನಯದ ಟಾಕ್ಸಿಕ್ ನಲ್ಲಿ ಬ್ಯುಸಿಯಾಗಿದ್ದ ನಟಿ ನಯನತಾರ ತನ್ನ ಅಭಿಮಾನಿಗಳ ಬಳಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದು ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು ಪ್ರೀತಿಯಿಂದ ಬಿರುದು ಕೊಡುವುದು‌ ಇಂದು ಸಾಮಾನ್ಯವಾಗಿದೆ. ಕರಾಟೆ ಕಿಂಗ್ ಶಂಕರ್ ನಾಗ್, ಅಭಿನಯ ಚಕ್ರವರ್ತಿ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೀಗೆ ಸಿನಿಮಾ ನಟ ನಟಿಯರಿಗೆ ಬಿರುದುಗಳಿವೆ. ನಟಿ ರಮ್ಯಾ ಅವರಿಗೆ ಮೋಹಕ ತಾರೆ ಎಂಬ ಬಿರುದು ಇದೆ. ದಕ್ಷಿಣ ಭಾರತದ ಖ್ಯಾತ ನಟಿ ಯಾಗಿರೋ ನಯನತಾರ ಅವರಿಗೆ ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದು ಇದೆ. ಆದರೆ ಇದೇ ಲೇಡಿ ಸೂಪರ್ ಸ್ಟಾರ್ ಬಗ್ಗೆ ನಟಿ ನಯನತಾರ ಅವರು ತಮ್ಮ ಅಭಿಮಾನಿಗಳ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.



ನಟಿ ನಯನತಾರ ತಮ್ಮ ಸಿನಿಮಾ ಕಂಡು ಪ್ರೋತ್ಸಾಹಿಸುವ ತನ್ನ ಅಭಿಮಾನಿಗಳ ಬಗ್ಗೆ ಬಹಳ ಪ್ರೀತಿ ಹೊಂದಿದ್ದರೂ ತನ್ನ ಮೇಲಿನ ಬಿರುದಿನ ಬಗ್ಗೆ ನಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಯನತಾರಾ ಅವರನ್ನು ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದಿನಿಂದ ಕರೆಯುತ್ತಿದ್ದಾರೆ. ಆದರೆ ಅದನ್ನು ನಿಲ್ಲಿಸುವಲ್ಲಿ ನಟಿ ಪತ್ರ ಬರೆದು ಮನವಿ ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ ಆದರೆ ಈ ಬಿರುದು ನನಗೆ ಬೇಡ, ನನ್ನನ್ನು ನಯನತಾರಾ ಎಂದು ಕರೆದರೆ ಸಾಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಅಭಿಮಾನಿಗಳು ಯಾವಾಗಲು ನನ್ನ ಜೊತೆಗಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಸುದೀರ್ಘ ಬರವಣಿಗೆ ಹೊಂದಿದ್ದ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಜೀವನ ಒಂದು ತೆರೆದ ಪುಸ್ತಕವಿದ್ದಂತೆ ನನ್ನ ಗೆಲುವಿನಲ್ಲಿ ನಿಮ್ಮೆಲ್ಲರ ಪಾತ್ರ ಬಹಳ ಮುಖ್ಯವಾದದ್ದು, ನಿಮ್ಮ ಪ್ರೀತಿಗೆ ನಾನೆಂದು ಆಭಾರಿ. ನನ್ನ ಗೆಲುವನ್ನು ನೀವು ಹೆಗಲಮೇಲಿಟ್ಟು ಸಂಭ್ರಮಿಸಿದ್ದೀರಿ. ಹಾಗಾಗಿ ಅಭಿಮಾನದಿಂದ ಲೇಡಿ ಸೂಪರ್ ಸ್ಟಾರ್ ಎಂದು ಕರೆದಿದ್ದೀರಿ. ನಿಮ್ಮ ಸಪೋರ್ಟ್ ಹಾಗೂ ಪ್ರೀತಿಯಿಂದಾಗಿ ನನಗೆ ಈ ಬಿರುದು ಸಿಕ್ಕಿದೆ. ಇದಕ್ಕೆ ನಾನೆಂದು ಚಿರಋಣಿ. ಆದರೆ ಇನ್ನು ಮುಂದೆ ನನ್ನನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುವುದು ಬೇಡ. ನಯನತಾರ ಎಂದು ಕರೆದರೆ ಸಾಕು ಎಂದಿದ್ದಾರೆ.

ಇದನ್ನು ಓದಿ: Zee Entertainers Comedy Awards: ಝೀ ಕನ್ನಡದಲ್ಲಿ ಕಾಮಿಡಿ ಸ್ಟಾರ್‌ಗಳ ಸಮಾಗಮ

ನಿಮ್ಮ ಬಿರುದು ತನಗೆ ಮುಖ್ಯ ಆಗಿದ್ದರೂ ನನಗೆ ನನ್ನ ಸ್ವಂತ ಹೆಸರಿನ ಮೇಲೆಯೂ ಅಷ್ಟೇ ಪ್ರೀತಿ ಗೌರವವಿದೆ. ನನ್ನ ಹೆಸರು ಹೃದಯಕ್ಕೆ ತುಂಬಾ ಹತ್ತಿರವಾದದ್ದು ಎಂದು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದ್ದು ನೀವು ಅಭಿಮಾನಿಗಳ ಪಾಲಿಗೆ ಎಂದೆಂದಿಗೂ ನಯನತಾರೆ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. ಸದ್ಯ ನಟಿ ನಯನತಾರ ಅವರು ಮಹೇಶ್ ನಾರಾಯಣ್ ಅವರ ಬಹುನಿರೀಕ್ಷಿತ ಮಲಯಾಳಂ ಸಿನೆಮಾ ಎಂಎಂಎಂಎನ್‌ನಲ್ಲಿ ನಟಿಸಲಿದ್ದು ಈ ನಡುವೆ ಬಹುಭಾಷೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿಯೂ ಬ್ಯುಸಿ ಆಗಿದ್ದಾರೆ.