Vishwavani Editorial: ಜಗದ ಜನರ ‘ಮನ್ ಕೀ ಬಾತ್’
ವಿಶ್ವಸಂಸ್ಥೆಗೆ ಅದರದ್ದೇ ಆದ ಸ್ಥಾಪಿತ ಆಶಯಗಳಿವೆ. ಅಂದರೆ, ತನ್ನ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದದ ವಾತಾವರಣ ರೂಪುಗೊಳ್ಳಲು ಒತ್ತಾಸೆ ನೀಡುವುದು, ರಾಜಕೀ ಯ-ಸಾಮಾಜಿಕ-ಸಾಂಸ್ಕೃತಿಕ-ಮಾನವೀಯ ನೆಲೆಗಟ್ಟಿನ ಸಮಸ್ಯೆಗಳನ್ನು ಸಹಕಾರ ತತ್ವದ ಆಧಾ ರದ ಮೇಲೆ ಬಗೆಹರಿಸಿ, ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಧೋರಣೆ ಯನ್ನು ಹತ್ತಿಕ್ಕುವುದು ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳಲ್ಲಿ ಸೇರಿವೆ.


ಪ್ರಧಾನಿ ನರೇಂದ್ರ ಮೋದಿಯವರ ಒಂದು ಮಾತು ವಿಶ್ವದೆಲ್ಲೆಡೆ ಮೆಚ್ಚುಗೆಯನ್ನು ದಕ್ಕಿಸಿಕೊಂಡಿದೆ. ಅಮೆರಿಕದ ವಿಜ್ಞಾನಿ ಲೆಕ್ಸ್ ಫ್ರಿಡ್ ಮನ್ ಅವರ ಜತೆಗಿನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಪಾಲ್ಗೊಂ ಡಿದ್ದ ಮೋದಿಯವರು “ವಿಶ್ವಸಂಸ್ಥೆ ಸೇರಿದಂತೆ ಕೆಲ ಅಂತಾರಾಷ್ಟ್ರೀಯ ಸಂಸ್ಥೆಗಳು ದುರ್ಬಲ ಗೊಂಡು ಅಪ್ರಸ್ತುತವಾಗಿವೆ" ಎನ್ನುವ ಮೂಲಕ, ದಶಕಗಳಿಂದ ಮೌನವಾಗೇ ಉಳಿದುಬಿಟ್ಟಿದ್ದ ವಿಶ್ವದ ವಿವಿಧ ರಾಷ್ಟ್ರಗಳ ಅಳಲಿಗೆ ದನಿಯಾಗಿದ್ದಾರೆ ಎನ್ನಲಡ್ಡಿಯಿಲ್ಲ. ಹಾಗೆ ನೋಡಿದರೆ, ವಿಶ್ವಸಂಸ್ಥೆಗೆ ಅದರದ್ದೇ ಆದ ಸ್ಥಾಪಿತ ಆಶಯಗಳಿವೆ. ಅಂದರೆ, ತನ್ನ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದದ ವಾತಾವರಣ ರೂಪುಗೊಳ್ಳಲು ಒತ್ತಾಸೆ ನೀಡುವುದು, ರಾಜಕೀ ಯ-ಸಾಮಾಜಿಕ-ಸಾಂಸ್ಕೃತಿಕ-ಮಾನವೀಯ ನೆಲೆಗಟ್ಟಿನ ಸಮಸ್ಯೆಗಳನ್ನು ಸಹಕಾರ ತತ್ವದ ಆಧಾ ರದ ಮೇಲೆ ಬಗೆಹರಿಸಿ, ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಧೋರಣೆ ಯನ್ನು ಹತ್ತಿಕ್ಕುವುದು ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳಲ್ಲಿ ಸೇರಿವೆ.
ಮಾತ್ರವಲ್ಲದೆ, ಎಲ್ಲ ಜಾತಿ-ಜನಾಂಗಗಳ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಿ, ಸಾಮಾಜಿಕ ಪ್ರಗತಿಯನ್ನೂ ಜನರ ಜೀವನಮಟ್ಟವನ್ನೂ ಸುಧಾರಿಸಬೇಕಿರುವ ವಿಶ್ವಸಂಸ್ಥೆಯು, ಸಮಾನತೆ-ಸ್ವಾತಂತ್ರ್ಯ-ಸೋದರತ್ವ-ಸಾರ್ವಭೌಮತ್ವಗಳ ಆಧಾರದ ಮೇಲೆ ತನ್ನ ಸದಸ್ಯ ರಾಷ್ಟ್ರಗಳ ಪಾಲಿನ ಹಲವು ಕರ್ತವ್ಯಗಳನ್ನು ನಿರ್ವಹಿ ಬೇಕಾಗುತ್ತದೆ.
ಇದನ್ನೂ ಓದಿ: Vishwavani Editorial: ಇಸ್ರೊ ಸಾಧನೆ ಮುಂದುವರಿಯಲಿ
ಆದರೆ ಈ ಬಾಧ್ಯತೆಗಳನ್ನು ವಿಶ್ವಸಂಸ್ಥೆ ನಿಜಕ್ಕೂ ನೆರವೇರಿಸುತ್ತಿದೆಯೇ? ಎಂಬುದು ಯಕ್ಷಪ್ರಶ್ನೆ. ಏಕೆಂದರೆ, ರಷ್ಯಾ-ಉಕ್ರೇನ್ ಹಣಾಹಣಿ, ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಉದ್ವಿಗ್ನತೆ ಸೇರಿದಂತೆ ವೈವಿಧ್ಯಮಯ ಜಾಗತಿಕ ಸಂಘರ್ಷಗಳಿಗೆ ಪರಿಣಾಮಕಾರಿ ಮದ್ದು ಅರೆಯುವಲ್ಲಿ ವಿಶ್ವಸಂಸ್ಥೆ ಸೋತಿದೆ ಎಂಬುದು ವಿವಿಧ ರಾಷ್ಟ್ರಗಳ ಅಹವಾಲು.
ಆದರೆ ಇದು ‘ಗೊಣಗುವಿಕೆ’ಯ ರೂಪದಲ್ಲಿತ್ತೇ ವಿನಾ, ಪ್ರಮುಖ ವೇದಿಕೆಯೊಂದರಲ್ಲಿ, ಪ್ರಭಾವಿ ನಾಯಕರೊಬ್ಬರಿಂದ ಗಟ್ಟಿದನಿಯಾಗಿ ಹೊಮ್ಮಿದ್ದು ವಿರಳವೇ. ಆದರೆ ಮೋದಿಯವರು ಹೀಗೊಂದು ದಿಟ್ಟದನಿ ಎತ್ತುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದರಿಂದಾಗಿ ರಾತ್ರೋ ರಾತ್ರಿಯಲ್ಲಿ ಸಮಸ್ಯೆ ಬಗೆಹರಿದುಬಿಡುತ್ತದೆ ಎಂದೇನಲ್ಲ,
ಆದರೆ ಅಸಮಾಧಾನದ ದನಿಯೆದ್ದಿದೆ ಎಂಬುದು ವಿಶ್ವಸಂಸ್ಥೆಯ ಗಮನಕ್ಕೆ ಬರುವಂತಾಗಲು ಇದೊಂದು ಹೆಜ್ಜೆಯಾಗಬಲ್ಲದು. ‘ಸಂಘರ್ಷದಿಂದ ಸಹಕಾರದೆಡೆಗೆ ಜಗತ್ತು ಬದಲಾ ಗಬೇಕು’ ಎಂಬ ಮೋದಿಯವರ ಆಶಯವನ್ನೂ ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸಿದರೆ ಒಳಿತು.