ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Swara Bhasker: ಛಾವಾ ಸಿನಿಮಾ ಬಗ್ಗೆ ನಟಿ ಸ್ವರಾ ಭಾಸ್ಕರ್ ಪೋಸ್ಟ್-ನೆಟ್ಟಿಗರು ಫುಲ್‌ ಗರಂ!

ಛಾವ' ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಕುಂಭಮೇಳದ ಕಾಲ್ತುಳಿತ ಘಟನೆಗೆ ಹೋಲಿಸಿ ನಟಿ ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಈ ಪೋಸ್ಟ್ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಳಿಕ ನಟಿ ಸ್ವರ ಭಾಸ್ಕರ್ ಕ್ಷಮೆಯಾಚಿಸಿ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ

ನಟಿ ಸ್ವರಾ ಭಾಸ್ಕರ್ ಪೋಸ್ಟ್‌ಗೆ ನೆಟ್ಟಿಗರು ಕಿಡಿ! ನಟಿಯ ಸ್ಪಷ್ಟನೆ ಏನು?

ನಟಿ ಸ್ವರಾ ಭಾಸ್ಕರ್‌

Profile Pushpa Kumari Feb 22, 2025 3:31 PM

ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಆಗಾಗ ವಿವಾದಕ್ಕೆ ಸಿಲುಕುವುದು ಹೊಸತೇನಲ್ಲ. ಇದೀಗ ಮತ್ತೆ ವಿವಾದಾತ್ಮಕ ಪೋಸ್ಟ್‌ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ಈ ಬಾರಿ ನೆಟ್ಟಿಗರಿಂದ ವ್ಯಕ್ತವಾದ ವಿರೋಧಕ್ಕೆ ಮಣಿದು ಕ್ಷಮೆಯಾಚಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ 'ಛಾವಾ' ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಕುಂಭಮೇಳದ ಕಾಲ್ತುಳಿತ ಘಟನೆಗೆ ಹೋಲಿಸಿ ನಟಿ ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಈ ಪೋಸ್ಟ್ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತ ಪಡಿಸಿದ್ದರು. ಅನೇಕ ಜನರು ಸ್ವರ ಭಾಸ್ಕರ್ ಅವರ ಹೇಳಿಕೆಯನ್ನು ಅಲ್ಲೆಗೆಳೆದು ಇದು ಭಾರತೀಯ ಪರಂಪರೆಗೆ ಮಾಡುವ ಅವಮಾನ ಎಂದು ಜನರು ಕಿಡಿ ಕಾರುತ್ತಿದ್ದಂತೆ ನಟಿ ಸ್ವರ ಭಾಸ್ಕರ್ ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಿಂದ ಅನೇಕ ಜನರು ಸಾವಿಗೀಡಾಗಿರುವುದು ವಿಷಾಧನೀಯ ಸಂಗತಿಯಾಗಿದ್ದು ಈ ಬಗ್ಗೆ ನಟಿ ಸ್ವರ ಭಾಸ್ಕರ್ ತಮ್ಮ ಟ್ವಿಟ್ಟರ್ ಎಕ್ಸ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. 500 ವರ್ಷಗಳ ಹಿಂದಿನ ಕಾಲ್ಪನಿಕ ಕಥೆ ಆಧರಿಸಿದ್ದ ಚಲನಚಿತ್ರವನ್ನು ವೀಕ್ಷಿಸಿದ್ದ ಪ್ರೇಕ್ಷಕರು ಹಿಂದೂಗಳ ಮೇಲೆ ಆದ ದೌರ್ಜನ್ಯ ಕಂಡು ಭಾವುಕರಾಗಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕ‍ಣ್ಣೆದುರೇ ಅನೇಕ ಜನ ಭಕ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸಿನಿಮಾ ಬಗ್ಗೆ ಜನರು ಪ್ರತಿಕ್ರಿಯೆ ನೋಡುವ ರೀತಿ ನೋಡಿದರೆ ಈ ಸಮಾಜದ ಮೆದುಳು ಮತ್ತು ಆತ್ಮ ಎರಡು ಸತ್ತಂತಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು ಈ ಟ್ವೀಟ್ ಸಖತ್ ವಿವಾದ ಸೃಷ್ಟಿ ಮಾಡಿದೆ.



ನಟಿ ಸ್ವರ ಭಾಸ್ಕರ್ ಅವರು ಹಾಕಿದ್ದ ಪೋಸ್ಟ್ ನಲ್ಲಿ ಎಲ್ಲಿಯೂ ಕೂಡ ಬಹಿರಂಗವಾಗಿ ಮಹಾಕುಂಭ ಮೇಳ, ಛಾವಾ ಸಿನೆಮಾದ ಕುರಿತು ಎಂದು ಯಾವುದೇ ಶೀರ್ಷಿಕೆ ಉಲ್ಲೇಖಿಸದೇ ಇದ್ದರೂ ಜನರು ಇದನ್ನು ಕುಂಭ ಮೇಳ ಮತ್ತು ಛಾವಾ ಸಿನಮಾಕ್ಕೆ ಕನೆಕ್ಟ್ ಮಾಡಿದ್ದ ಪೋಸ್ಟ್ ಎಂದು ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಇತಿಹಾಸವನ್ನು ಅಲ್ಲಗೆಳೆಯುವ ಮೂರ್ಖತನ ಬೇಡ ಎಂದು ಆಕೆಯ ವ್ಯಂಗ್ಯಭರಿತ ಕಾಮೆಂಟ್‌ಗೆ ಸಾಕಷ್ಟು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ನಿಮಗೆ ಇತಿಹಾಸ ಕಲ್ಪನೆಯಾಗಿರಬಹುದು, ಆದರೆ ನಮ್ಮ ದೇಶದ ಗತಕಾಲದ ಚರಿತ್ರೆಗೆ ಅದರದ್ದೇ ಆದ ಸ್ಥಾನ ಮಾನ ಇದೆ ಅದನ್ನು ಮೊದಲು ಗೌರವಿಸಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನು ಓದಿ: Ballari News: ಬಿ. ‌ನಾಗೇಂದ್ರಗೆ ಸಚಿವ ಸ್ಥಾನಕ್ಕಾಗಿ ರಥೋತ್ಸವದಲ್ಲಿ ಹರಕೆ ಹೊತ್ತ ಅಭಿಮಾನಿಗಳು

ನಟಿಯ ಸ್ಪಷ್ಟನೆ!

ಈ ಪ್ರತಿಕ್ರಿಯೆ ಬಳಿಕ ನಟಿ ಸ್ವರ ಭಾಸ್ಕರ್ ಕ್ಷಮೆಯಾಚಿಸಿ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತನ್ನ ಹಿಂದಿನ ಪೋಸ್ಟ್ ಯಾರ ಭಾವನೆಗಾದರೂ ನೋವುಂಟು ಮಾಡಿದ್ದರೆ ಈ ಬಗ್ಗೆ ವಿಷಾಧಿಸುತ್ತೇನೆ. ಭಾರತೀಯ ಪರಂಪರೆ ಇತಿಹಾಸದ ಬಗ್ಗೆ ನನಗೂ ಗೌರವವಿದೆ. ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆ, ಕೊಡುಗೆಗಳ ಬಗ್ಗೆ ನನಗೂ ಗೌರವವಿದೆ. ಅದರಲ್ಲಿಯೂ ವಿಶೇಷವಾಗಿ ಸಾಮಾಜಿಕ ನ್ಯಾಯ ಮತ್ತು ಮಹಿಳೆಯರಿಗೆ ಗೌರವ ನೀಡುವ ಬಗ್ಗೆ ಮರಾಠರ ಪರಂಪರೆಯ ಧೋರಣೆ ಇಂದಿಗೂ ನಮಗೆಲ್ಲ ಪ್ರೇರಣೆ ಇದ್ದಂತೆ. ಇತಿಹಾಸವನ್ನು ವೈಭವೀಕರಿಸಬೇಕು ನಿಜ ಆದರೆ ವೈಭವದ ಹೆಸರಿನಲ್ಲಿ ಸತ್ಯ ಮರೆಮಾಚುವ, ದುರುಪಯೋಗ ಪಡಿಸುವ ಕೆಲಸ ಮಾಡಬಾರದು. ಇತಿಹಾಸ ನಮ್ಮೆಲ್ಲರನ್ನು ಒಗ್ಗೂಡಿಸಬೇಕು. ಭವಿಷ್ಯಕ್ಕಾಗಿ ಹೋರಾಡಲು ನಮಗೂ ಸ್ಫೂರ್ತಿ ನೀಡಬೇಕು ಎಂದು ಸ್ಪಷ್ಟೀಕರಣ ನೀಡಿದ್ದಾರೆ.