ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಹಿನ್ನೆಲೆ: ವರದಹಳ್ಳಿ ಗ್ರಾಮಕ್ಕೆ ಪಶು ಇಲಾಖೆ ಆಯುಕ್ತೆ ಶ್ರೀರೂಪಾ ಭೇಟಿ ಪರಿಶೀಲನೆ

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಹಕ್ಕಿಜ್ವರ ಕೋಳಿಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ. ಇದು ಇತರೆಡೆ ಹಬ್ಬದಂತೆ ಅಲ್ಲಿಯೇ ನಿಯಂತ್ರಣ ಮಾಡಲು ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸಿದೆ. ಈ ಸಂಬಂಧ ಗಡಿ ಜಿಲ್ಲೆಗಳಲ್ಲಿ ಕೋಳಿ ಹಾಗೂ ಜಾನುವಾರು ಸಂತೆ ಗಳ ನಿಷೇಧ ಮಾಡುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಬಿಡಲಾಗಿದೆ

ಮನುಷ್ಯರಿಗೆ ಜ್ವರ ಬಂದಿರೋ ಯಾವುದೇ ಪ್ರಕರಣ ದಾಖಲಾಗಿಲ್ಲ

ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಆಯುಕ್ತರಾದ ಶ್ರೀರೂಪಾ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Profile Ashok Nayak Mar 3, 2025 10:53 PM

ಚಿಕ್ಕಬಳ್ಳಾಪುರ: ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಆಯುಕ್ತೆ ಶ್ರೀರೂಪಾ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಕ್ಕಿಜ್ವರದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ವರದಹಳ್ಳಿ ಗ್ರಾಮದಲ್ಲಿ ಕೈಗೊಂಡಿರುವ ಹಕ್ಕಿಜ್ವರ ನಿಯಂತ್ರಣಕ್ಕೆ ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ಆಯುಕ್ತರು ಮಾಧ್ಯಮದೊಂದಿಗೆ ಮಾತನಾಡಿದರು.

ಇದನ್ನೂ ಓದಿ: Chikkaballapur News: ಪಶುಸಂಗೋಪನೆ ವೃದ್ಧಿಗೆ 40 ಲಕ್ಷ ವೆಚ್ಚದಲ್ಲಿ ನೂತನ ಪಾಲಿ ಕ್ಲಿನಿಕ್ ಕಟ್ಟಡ ನಿರ್ಮಾಣವಾಗುತ್ತಿದೆ : ಶಾಸಕ ಪುಟ್ಟಸ್ವಾಮಿಗೌಡ

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಹಕ್ಕಿಜ್ವರ ಕೋಳಿಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ. ಇದು ಇತರೆಡೆ ಹಬ್ಬದಂತೆ ಅಲ್ಲಿಯೇ ನಿಯಂತ್ರಣ ಮಾಡಲು ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸಿದೆ. ಈ ಸಂಬಂಧ ಗಡಿ ಜಿಲ್ಲೆಗಳಲ್ಲಿ ಕೋಳಿ ಹಾಗೂ ಜಾನುವಾರು ಸಂತೆಗಳ ನಿಷೇಧ ಮಾಡುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಬಿಡಲಾಗಿದೆ. ಪರಿಸ್ಥಿಯನ್ನು ಅವಲೋಕನ ಮಾಡಿ ಈ ಬಗ್ಗೆ ನಿರ್ಧಾರವನ್ನು ಕೂಗೊಳ್ಳುತ್ತಾರೆ ಎಂದರು.

ಹಕ್ಕಿಜ್ವರ ಕಂಡುಬಂದಿರುವ ಚಿಕ್ಕಬಳ್ಳಾಪುರದ ವರದಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಎಸ್‌ಒಪಿ ಪ್ರಕಾರ ಜಿಲ್ಲಾಡಳಿತ ಮತ್ತು ಪಶು ಮತ್ತು ವೈದ್ಯಕೀಯ ಇಲಾಖೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ನಮಗಿರುವ ಮಾಹಿತಿಯಂತೆ ಇದುವರೆಗೆ ಕೋಳಿಗಳಲ್ಲಿ ಮಾತ್ರ ಜ್ವರ ಕಂಡುಬಂದಿದೆ. ಮನುಷ್ಯರಿಗೆ ಜ್ವರ ಬಂದಿರೋ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹಕ್ಕಿಜ್ವರ ಪತ್ತೆಯಾದ ಪ್ರದೇಶದ ಮೇಲೆ ನಿಗಾ ವಹಿಸಿದ್ದು ಈಗಾಗಲೇ ವಿಶೇಷ ಸಭೆಯನ್ನು ಕರೆದು ಸಂಬಂಧಪಟ್ಟವರಿಗೆ ಪರಿಹಾರ ಕೆಲಸಗಳ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆ ಗಳನ್ನು ನೀಡಲಾಗಿದೆ. ಆಯಾ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ನಿಯಂ ತ್ರಣದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹಾಗೆಯೇ ವರದಹಳ್ಳಿಯಲ್ಲಿ ಕೋಳಿಗಳು ಸೋಂಕಿನಿಂದ ಮೃತಪಡುತ್ತಿದ್ದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗಿದೆ. ಗ್ರಾಮ ದಲ್ಲಿನ ಉಳಿದ ಕೋಗಳನ್ನೂ ಕೂಡ ಇಲಾಖೆ ಮಾರ್ಗಸೂಚಿಗಳನ್ವಯ ವೈಜ್ಞಾ ನಿಕವಾಗಿ ವಿಲೇ ಮಾಡಲಾ ಎಂದರು.

ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆಯ ಉಪ ನಿರ್ದೇಶಕ ಡಾ ರಂಗಪ್ಪ, ಪಶು ವೈದ್ಯ ಡಾ ಜ್ಞಾನೇಶ್ ಮತ್ತಿತರರು ಇದ್ದರು.