ಜಿಲ್ಲಾ ಉಸ್ತುವಾರಿ ಸಚಿವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಶಾಸಕನಾಗಿ ನನ್ನ ವಿರೋಧವಿರದು: ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟನೆ
ಬಲಿಜ ಸಮುದಾಯಕ್ಕೆ ಸಚಿವ ಸ್ಥಾನ ನೀಡುವುದಾದರೆ ಮಾಜಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯರನ್ನು ಎಂ.ಎಲ್.ಸಿ.ಮಾಡಿ ನೀಡಲಿ, ಇಲ್ಲ ವಾದಲ್ಲಿ ಸಮುದಾಯದ ಹಿರಿಯರಾದ ಎಂ.ಆರ್.ಸೀತಾರಾಮ್‌ರಿಗೆ ನೀಡಲಿ. ನನಗೆ ಬೇಡ, ನಾನು ಆಕಾಕ್ಷಿಯೂ ಅಲ್ಲ ಎಂದ ಅವರು ಅಭಿಮಾನಿಗಳು ನಾನು ಮಂತ್ರಿ ಯಾಗಲಿ ಎಂದು ಭಾವಿಸುವುದು ಅವರ ಪ್ರೀತಿಯನ್ನು ತೋರಿಸುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಐದು ವರ್ಷಗಳ ಅವಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯಲಿದ್ದಾರೆ.ನಾನು ಶಾಸಕನಾಗಿದ್ದೇ ಹೆಚ್ಚು. ನನಗೆ ಸಚಿವನಾಗುವ ಆಸೆ ಇಲ್ಲ. ಬಲಿಜ ಸಮುದಾಯಕ್ಕೆ ನೀಡುವುದಾದರೆ ಹಿರಿಯರಿಗೆ ನೀಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನನಗೆ ಸಚಿವನಾಗುವ ಆಸೆ ಇಲ್ಲ: ಒಂದು ವೇಳೆ ಕೊಡುತ್ತಾರೆಂದಾದರೆ ಸಮುದಾ ಯದ ಹಿರಿಯರಿಗೆ ನೀಡಲಿ
ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಐದು ವರ್ಷ ಗಳ ಅವಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯಲಿದ್ದಾರೆ. ನಾನು ಶಾಸಕ ನಾಗಿದ್ದೇ ಹೆಚ್ಚು. ನನಗೆ ಸಚಿವನಾಗುವ ಆಸೆ ಇಲ್ಲ. ಬಲಿಜ ಸಮುದಾಯಕ್ಕೆ ನೀಡುವು ದಾದರೆ ಹಿರಿಯರಿಗೆ ನೀಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ತಾಲೂಕಿನ ಜಡಲ ತಿಮ್ಮನಹಳ್ಳಿಯಲ್ಲಿ ಜಡಲತಿಮ್ಮನಹಳ್ಳಿ - ನಂದಿ ಮತ್ತು ಜಡಲ ತಿಮ್ಮನಹಳ್ಳಿ -ರಾಷ್ಟ್ರೀಯ ಹೆದ್ದಾರಿ 44ರ ವರೆಗೆ ಸಂಪರ್ಕ ರಸ್ತೆಗೆ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದರು.
ಇದನ್ನೂ ಓದಿ: Chikkaballapur News: ಕೇವಲ 15 ದಿನಗಳಲ್ಲಿ ಇ-ಖಾತೆ ಪಡೆದು ಸದುಪಯೋಗ ಮಾಡಿಕೊಳ್ಳಿ
ಬಲಿಜ ಸಮುದಾಯಕ್ಕೆ ಸಚಿವ ಸ್ಥಾನ ನೀಡುವುದಾದರೆ ಮಾಜಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯರನ್ನು ಎಂ.ಎಲ್.ಸಿ.ಮಾಡಿ ನೀಡಲಿ, ಇಲ್ಲವಾದಲ್ಲಿ ಸಮುದಾಯದ ಹಿರಿಯರಾದ ಎಂ.ಆರ್.ಸೀತಾರಾಮ್‌ರಿಗೆ ನೀಡಲಿ. ನನಗೆ ಬೇಡ, ನಾನು ಆಕಾಕ್ಷಿಯೂ ಅಲ್ಲ ಎಂದ ಅವರು ಅಭಿಮಾನಿಗಳು ನಾನು ಮಂತ್ರಿ ಯಾಗಲಿ ಎಂದು ಭಾವಿಸುವುದು ಅವರ ಪ್ರೀತಿಯನ್ನು ತೋರಿಸುತ್ತದೆ ಎಂದರು.
ನನ್ನ ಸ್ವಹಿತಾಸಕ್ತಿಗಿಂತ, ನನ್ನ ಸಮುದಾಯದ ಹಿತಾಸಕ್ತಿಗಿಂತ ನನಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರ ಮಾತಿನ ಮೇಲೆಯೇ ನನಗೆ ಬದ್ಧತೆ ಹೆಚ್ಚು. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ವಿರೋಧ ಮಾಡಲ್ಲ, ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕನ್ನಡ ಭವನ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ದೂರಾಲೋಚನೆಯಿಂದ ಜಿಲ್ಲಾ ಉಸ್ತುವಾರಿ ಸಚಿವರು ರಂಗಮಂದಿರಕ್ಕೆ ಕನ್ನಡ ಭವನ ಎಂದು ನಾಮಕರಣ ಮಾಡಿಸಿದ್ದಾರೆ. ಇದು ಸಮಂಜಸವಾಗಿದೆ ಇದರಲ್ಲಿ ಯಾವುದೇ ಗೊಂದಲ ಬೇಡ, ಈ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಕೇಳಬೇಡ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.
ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿ ನಲ್ಲಿ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಅನೇಕ ಗ್ರಾಮಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಕಾರ್ಯ ಮಾಡಲಾಗಿದೆ. ಮುಂದುವರೆದ ಭಾಗವಾಗಿ ತಾಲೂ ಕಿನ ಜಡಲ ತಿಮ್ಮನಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ ವರೆಗೆ ಸಂಪರ್ಕ ರಸ್ತೆ ಹಾಗೂ ಜಡಲತಿಮ್ಮನಹಳ್ಳಿಯಿಂದ ನಂದಿ ಗ್ರಾಮಕ್ಕೆ ಸಂಪರ್ಕ ರಸ್ತೆಗೆ ಎರಡು ಕೋಟಿ ರೂ. ಮೀಸ ಲಿರಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಕಳೆದ ಹತ್ತು ವರ್ಷಗಳಿಂದಲೂ ಕ್ಷೇತ್ರದಲ್ಲಿ ಹಲವಾರು ಗ್ರಾಮೀಣ ಪ್ರದೇಶಗಳಿಗೆ ರಸ್ತೆಗಳೇ ಆಗಿಲ್ಲ.ಆಗಿದ್ದರೂ ಅವು ಹಾಳಾಗಿವೆ.ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಮೂಲಕ ಭೇಟಿ ನೀಡಿ ವೀಕ್ಷಿಸಿದ ನಂತರವೇ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವ ಕೆಲಸ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆಎಂ ಮುನೇಗೌಡ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಧಾ ವೆಂಕಟೇಶ್, ಮಂಡಿಕಲ್-ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್,ವರ್ಣ ಸೇವಾ ಟ್ರಸ್ಟ್ ಅಧ್ಯಕ್ಷರಾದ ಉಮೇಶ್ ಜೆಸಿಬಿ ಮಂಜು ಒಳಗೊಂಡಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಇದ್ದರು.